ಮರಳು ಅಭಾವಕ್ಕೆ ಉಡುಪಿ ಶಾಸಕರೇ ಕಾರಣ: ವಿಶ್ವನಾಥ ಪೇತ್ರಿ ಆರೋಪ

ಉಡುಪಿ: ಜಿಲ್ಲೆಯ ಸಿಆರ್ ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸಲು ಪರಿಶಿಷ್ಟ ಜಾತಿಯ ಸಾಂಪ್ರದಾಯಿಕ ಮರಳು ಕಾರ್ಮಿಕರಿಗೆ ಪರವಾನಗಿ ನೀಡಬೇಕೆಂದು ಒತ್ತಾಯಿಸಿಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹೊಯ್ಗೆ ದೋಣಿ ಕಾರ್ಮಿಕರ ಸಂಘದವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಧರಣಿ ನಡೆಸಲಾಯಿತು. 

ಸಂಘದ ಗೌರವಾಧ್ಯಕ್ಷ ಉದಯ ಕುಮಾರ್ ತಲ್ಲೂರ್ ಮಾತನಾಡಿ, ನಾವು ಜಿಲ್ಲಾಡಳಿತ ಅಥವಾ ಗುಲಾಮಗಿರಿಯ ಪರವಾಗಿ ಪ್ರತಿಭಟನೆ ಮಾಡುತ್ತಿಲ್ಲ. ನಮಗೆಆಗಿರುವ ಅನ್ಯಾಯವನ್ನು ಸಚಿವರಿಗೆ ತಿಳಿಸುವ ಉದ್ದೇಶದಿಂದ ಧರಣಿಗೆಕುಳಿತುಕೊಂಡಿದ್ದೇವೆ. ನೀವು ಓರ್ವ ಶಾಸಕರಾಗಿ (ರಘುಪತಿ ಭಟ್‌) ‘ನಾವು ನ್ಯಾಯಸಮ್ಮತವಾಗಿ ಮಾಡುತ್ತಿರುವ ಪ್ರತಿಭಟನೆಯನ್ನು ಜಿಲ್ಲಾಡಳಿತ ರೂಪಿಸಿದ ಷಡ್ಯಂತ್ರ, ಮಾಜಿಸಚಿವರೊಬ್ಬರ ಸಂಚು’ ಎಂದು ಹೇಳುತ್ತಿರುವುದು ಸರಿಯಲ್ಲ. ಧ್ವನಿ ಇಲ್ಲದ ನಮ್ಮಸಮಾಜಕ್ಕೆ ಆಧಾರವಾಗಬೇಕೇ ಹೊರತು, ನಮ್ಮ ಧ್ವನಿಯನ್ನು ಕಸಿದುಕೊಳ್ಳಬಾರದು ಎಂದರು.ನೀವು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸಮಾಡುತ್ತಿದ್ದೀರಾ. ನೀವು ರಸ್ತೆ ಬದಿಯಲ್ಲಿ ಹೋರಾಟ ಮಾಡುವುದನ್ನು ಬಿಟ್ಟು, ವಿಧಾನಸೌಧದ ಎದುರಿನಲ್ಲಿ ಹೋರಾಟ ಮಾಡಿ ಎಂದು ಅವರು ಶಾಸಕರಿಗೆ ಸಲಹೆ ನೀಡಿದರು.

ಸಂಘದ ಉಪಾಧ್ಯಕ್ಷ ವಿಶ್ವನಾಥ ಪೇತ್ರಿ ಮಾತನಾಡಿ, ಜಿಲ್ಲೆಯಲ್ಲಿ ಮರಳಿನ ಅಭಾವಸೃಷ್ಟಿಯಾಗಲು ಉಡುಪಿ ಶಾಸಕರೇ ಕಾರಣ. ಅವರು ಮರಳು ದಂಧೆಕೋರರ ಕೈ ಗೊಂಬೆಯಾಗಿ ಕೆಲಸಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಕೇಂದ್ರ ಸರ್ಕಾರದ ಪರಿಸರ ಇಲಾಖೆ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕುಗಳನ್ನು ಜೈವಿಕ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದೆ. ಹಾಗಾಗಿ ಕೇಂದ್ರಪರಿಸರ ಮತ್ತು ಅರಣ್ಯ ಸಚಿವಾಲಯವನ್ನು ಭೇಟಿ ಮಾಡಿ ಅಥವಾ ಸಂಸತ್ತಿನಲ್ಲಿ ಚರ್ಚಿಸಿ ಈನಿರ್ಬಂಧವನ್ನು ತೆರವು ಮಾಡಿ ಮರಳು ಸಮಸ್ಯೆಯನ್ನು ಬಗೆಹರಿಸಬೇಕಾದದ್ದು ಇಲ್ಲಿನಶಾಸಕರು ಹಾಗೂ ಸಂಸದರ ಕರ್ತವ್ಯ. ಆದರೆ ಇಲ್ಲಿನ ಶಾಸಕರು ಡೋಂಗಿ ಮರಳು ಕಾರ್ಮಿಕರುಹಾಗೂ ಗುತ್ತಿಗೆದಾರರ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿ 171 ಮಂದಿಗೆಪರವಾನಗಿ ನೀಡಿ ಎಂದು ಮನವಿ ಮಾಡಿದ್ದಾರೆ ಎಂದರು.

ಶಾಸಕರು ತಾನೂ ದೆಹಲಿಗೆ ಹೋದ ಮೂಲ ಉದ್ದೇಶವನ್ನೇ ಮರೆತು ಬಿಟ್ಟಿದ್ದಾರೆ. ಬದಲಾಗಿಕೋಟ್ಯಾಂತರ ರೂಪಾಯಿ ಹಣ ಸುರಿದು ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟ ಡೋಂಗಿಮರಳು ಗುತ್ತಿಗೆದಾರರ ಋಣ ತೀರಿಸಬೇಕಾಗಿದೆ. ಆದ್ದರಿಂದ ಎಲ್ಲರಿಗೂ ಪರವಾನಗಿ ನೀಡಿಎಂದು ಒತ್ತಾಯ ಹಾಕಿದ್ದಾರೆ. ಆದರೆ ಕೇಂದ್ರದ ಪರಿಸರ ಸಚಿವಾಲಯ ಶಾಸಕರಿಗೆ ಛೀಮಾರಿಹಾಕಿದೆ ಎಂದು ಟೀಕಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಶೇಖರ ಹೆಜಮಾಡಿ ಮಾತನಾಡಿ, ಉಡುಪಿ ಶಾಸಕರು ಮರಳು ದಂಧೆಯಗೂಂಡಾಗಳಿಗೆ ಬೆಂಬಲ ನೀಡುತ್ತಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ನಾಯಕರ ಮುಂದೆ ಇವರಬಣ್ಣ ಬಯಲು ಮಾಡುತ್ತೇವೆ ಎಂದು ಹೇಳಿದರು.ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಜಿಲ್ಲಾಡಳಿತ ಸ್ಪಂದಿಸಬೇಕು. ನಮ್ಮ ನ್ಯಾಯಯುತಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸದಿದ್ದರೆ, 10 ಸಾವಿರ ಜನರನ್ನು ಒಗ್ಗೂಡಿಸಿ ಉಗ್ರಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಧರಣಿನಿರತರಿಂದ ಶಾಸಕರಿಗೆ ದಿಕ್ಕಾರ:

ನೂರಾರು ಸಂಖ್ಯೆಯಲ್ಲಿ ಧರಣಿಯಲ್ಲಿ ಪಾಲ್ಗೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡದಮರಳು ಕಾರ್ಮಿಕರು ಉಡುಪಿ ಶಾಸಕರ ವಿರುದ್ಧ ದಿಕ್ಕಾರ ಕೂಗಿದರು. ‘ಮರಳು ದಂಧೆಕೋರರಿಗೆಬೆಂಬಲ ನೀಡುತ್ತಿರುವ ಶಾಸಕರಿಗೆ ದಿಕ್ಕಾರ. ಸಾಮಾಜಿಕ ನ್ಯಾಯ ನೀಡಿದ ಜನರಿಗೆ ತಪ್ಪುಮಾಹಿತಿ ನೀಡುತ್ತಿರುವ ಶಾಸಕರಿಗೆ ದಿಕ್ಕಾರ ಎಂದು ಘೋಷಣೆ ಕೂಗಿದರು.

ಸಂಘದ ಅಧ್ಯಕ್ಷ ಕೆ.ಎಸ್‌. ವಿಜಯ್‌, ಮರಳು ಕಾರ್ಮಿಕರಾದ ರಮೇಶ್‌ ಕೋಟ್ಯಾನ್‌, ಕೃಷ್ಣಬಜೆ, ಸುಂದರ ಅಂಜಾರು, ಕೇಶವ ಸಾಲ್ಯಾನ್‌, ಪ್ರಶಾಂತ್‌ ತೊಟ್ಟಂ, ಅರುಣ್‌ ಕುಮಾರ್‌,ಪ್ರಶಾಂತ್‌ ಭಿರ್ತಿ, ಚಂದ್ರಾಮ ತಲ್ಲೂರು, ಚಂದ್ರ ಅಲ್ತಾರು, ಶೇಖರ ಆರ್ಡಿ ಮೊದಲಾದವರುಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.