ಮದ್ವೆಯಾದ ಜೋಡಿಗಳಿಗೊಂದು Love ಲಿ ಅವಕಾಶ: ಪ್ರೇಮಿಗಳ ದಿನಾಚರಣೆ, ಉಡುಪಿ ಎಕ್ಸ್ ಪ್ರೆಸ್ ಪೋಟೋ ಸ್ಪರ್ಧೆ

ಇನ್ನೇನು ಪ್ರೇಮಿಗಳ ದಿನಾಚರಣೆ ಹತ್ತಿರಾಗುತ್ತದೆ. ಈ ಪ್ರಯುಕ್ತ ಉಡುಪಿ ಎಕ್ಸ್ ಪ್ರೆಸ್-ಸುದ್ದಿ ಜಾಲತಾಣ  Lovely ಜೋಡಿ ಎನ್ನುವ ವಿಶೇಷ ಸ್ಪರ್ಧೆ ಆಯೋಜಿಸಿದೆ. ಪ್ರೀತಿಸಿ ಮದುವೆಯಾದ ಜೋಡಿಗಳಿಗೆ ಅಥವಾ ಎರೆಂಜ್ಡ್ ಮ್ಯಾರೇಜ್ ಆಗಿ ಆ ಮೇಲೆ ತುಂಬಾ ಪ್ರೀತಿಯಿಂದ ಬಾಳಿ, ಈಗಲೂ ಪ್ರೀತಿ ಅನ್ನೋದು ಮಧುರ ಎನ್ನುವವರಿಗೆ “love ಲಿ ಜೋಡಿ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ.

ಏನ್ ವಿಷಯ?

ನಿಮ್ಮವರ, ನಿಮ್ಮವಳ  ಜೊತೆ, ಬದುಕಿನ ಬೇರೆ ಬೇರೆ ಕ್ಷಣಗಳಲ್ಲಿ ಕ್ಲಿಕ್ಕಿಸಿದ ಚೆಂದದ ಫೋಟೋಗಳನ್ನು ನಮಗೆ ಕಳುಹಿಸಬೇಕು. ಇಬ್ರೂ ಐಸ್ ಕ್ರೀಮ್ ತಿನ್ನೋದು, ಕೆಲಸ ಮಾಡೋದು, ಔಟಿಂಗ್ ಹೋಗಿದ್ದು, ಅಡುಗೆ ಮಾಡೋದು, ಹೀಗೆ ಯಾವ ಚಿತ್ರಗಳೇ ಇರಲಿ, ಅದನ್ನು ಸ್ಪರ್ಧೆಗೆ ಕಳುಹಿಸಬಹುದು.  ಚಿತ್ರಗಳು ನಿಮ್ಮ ಸುಂದರ ದಾಂಪತ್ಯ ಜೀವನವನ್ನು ಕಟ್ಟಿಕೊಡುವಂತಿರಬೇಕು. ಆಯ್ಕೆಯಾದ ಚೆಂದದ ಚಿತ್ರಗಳಿಗೆ ಬಹುಮಾನವಿದೆ. ಚಿತ್ರಗಳನ್ನು  ಫೆ.14 ರಂದು  www.udupixpress.com ನಲ್ಲಿ ಪ್ರಕಟಿಸುತ್ತೇವೆ.

ನಿಯಮಗಳೇನು?

*ಚಿತ್ರಗಳು ಗುಣಮಟ್ಟದಿಂದ ಕೂಡಿರಲಿ. ಸೆಲ್ಫಿನೂ ಓಕೆ.

*ವಯಸ್ಸಿನ ನಿರ್ಬಂಧವಿಲ್ಲ.ಯಾರು ಬೇಕಾದರೂ ಕಳುಹಿಸಬಹುದು.

*ಒಂದು ಚಿತ್ರ, ಮಾತ್ರ ಕಳುಹಿಸಿದರೆ ಸಾಕು.

*ಚಿತ್ರಗಳನ್ನು ಕಳುಹಿಸಲು ಫೆ.10  ಕೊನೆಯ ದಿನಾಂಕ.

* ಚಿತ್ರಗಳ ಜೊತೆ ಗಂಡ-ಹೆಂಡತಿಯ ಹೆಸರು, ಊರು, ಮೊಬೈಲ್ ಸಂಖ್ಯೆ,ವಿಳಾಸ ಕಡ್ಡಾಯ

* ತೀರ್ಪುಗಾರರ ತೀರ್ಮಾನವೇ ಅಂತಿಮ

ನಿಮ್ಮ ಚಿತ್ರಗಳನ್ನು newsudupixpress@gmail.com ಗೆ  ಅಥವಾ 9591650840 ಗೆ ಕಳುಹಿಸಿ.