ಬೈಕ್ ಅಪಘಾತ: ಸವಾರ ಸಾವು
ಉದ್ಯಾವರ ಹಾಲಿಮಾ ಸಾಬ್ಜು ಹಾಲ್ ಎದುರು ಜ. 21ರಂದು ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಗಂಗೊಳ್ಳಿ ಮೊವಾಡಿ ನಿವಾಸಿ ಶಿವರಾಜ್(39) ಎಂದು ಗುರುತಿಸಲಾಗಿದೆ. ಬೈಕ್ ಮಂಗಳೂರಿನಿಂದ ಉಡುಪಿ ಕಡೆ ಬರುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದು ಗಂಭೀರ ಗಾಯಗೊಂಡಿದ್ದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದ ಎನ್ನಲಾಗಿದೆ ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಮಂಗನ ಕಾಯಿಲೆ: ರೋಗಿಗಳ ಆರೋಗ್ಯ ವಿಚಾರಿಸಿದ ಶಾಸಕ
ಉಡುಪಿ: ಮಂಗನ ಕಾಯಿಲೆಗೆ ತುತ್ತಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಶಾಸಕ ಕೆ. ರಘುಪತಿ ಭಟ್ ಸೋಮವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ರೋಗಿಗಳ ವಾರ್ಡ್ ಗೆ ಖುದ್ದಾಗಿ ತೆರಳಿದ ಶಾಸಕರು, ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ಆ ಬಳಿಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಅವಿನಾಶ್ ಶೆಟ್ಟಿ ಹಾಗೂ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಭೇಟಿ ಮಾಡಿ ಚರ್ಚಿಸಿದರು. ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ. ಸರ್ಕಾರದಿಂದ ಯಾವುದೇ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ ಎಂದು […]
ಸಿರಿ ಧಾನ್ಯಗಳ ಆಹಾರ ಮತ್ತು ಸಿರಿ ಸ್ವದೇಶಿ ಉತ್ಪನ್ನಗಳ ಪ್ರದರ್ಶನ- ಮಾರಾಟ ಮೇಳ ಉದ್ಘಾಟನೆ
ಕುಂದಾಪುರ: ದೇಶದ ರೈತರು ಇಂದು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಸಿರಿ ಧಾನ್ಯಗಳು ಯಾವತ್ತೋ ನಮ್ಮ ತಟ್ಟೆಯಿಂದ ಮಾಯವಾಗಿವೆ. ನಾವೆಲ್ಲರೂ ಫಾಸ್ಟ್ಫುಡ್ಗಳಿಗೆ ದಾಸರಾಗುತ್ತಿದ್ದೇವೆ. ನಮ್ಮ ಜೀವನಕ್ರಮದಿಂದಾಗಿ ಬಹಳಷ್ಟು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದಕ್ಕೆ ಉತ್ತರವಾಗಿ ಸಿರಿ ಧಾನ್ಯಗಳು ಮತ್ತೆ ಜನಪ್ರಿಯವಾಗುತ್ತಿವೆ ಎಂದು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ನಿರ್ದೇಶಕಿ ಮನೋರಮಾ ಭಟ್ ಹೇಳಿದರು. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ […]
ಸಮಾಜಮುಖಿ ಬದುಕಿನ ನಿರ್ಮಾಣವೇ ಶಿಕ್ಷಣದ ಉದ್ದೇಶ: ಬಿ.ಎಮ್. ಸುಕುಮಾರ
ಕುಂದಾಪುರ: ಸಮಾಜಮುಖಿ ಬದುಕಿನ ನಿರ್ಮಾಣವೇ ಶಿಕ್ಷಣದ ಉದ್ದೇಶ ಹೊರತು ಅಂಕಗಳಿಕೆ-ಉದ್ಯೋಗ ಸಂಪಾದನೆ ಅಲ್ಲ. ವಿದ್ಯಾರ್ಥಿಗಳನ್ನು ಕೇವಲ ತರಗತಿಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿರಿಸದೆ, ಸಮಾಜದ ಮುಖ್ಯ ವಾಹಿನಿಗೆ ಪರಿಚಯಿಸುವಲ್ಲಿ ಶಿಕ್ಷಕ ಹಾಗೂ ವಿದ್ಯಾಸಂಸ್ಥೆಯ ಪಾತ್ರ ಅಗಾಧ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಮ್. ಸುಕುಮಾರ ಶೆಟ್ಟಿ ಹೇಳಿದರು. ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಪ್ರತಿಭಾ ದಿನಾಚರಣೆ’ಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸಮಾಜ ಪರ […]
ಸ್ವಾಮೀಜಿಗಳ ಕೊನೆಯ ಆಸೆ ಏನಿತ್ತು ಗೊತ್ತಾ? :ಕೊನೆ ಕ್ಷಣದಲ್ಲೂ ಮಕ್ಕಳನ್ನೇ ನೆನೆದ ಶ್ರೀಗಳು
ತುಮಕೂರು: ಪರಮಪೂಜ್ಯ ಶ್ರೀ ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿ ಇದೀಗ ನಾಡಿನೆಲ್ಲೆಡೆ ಮೌನ ಆವರಿಸಿದೆ. ಸಾಮಾನ್ಯ ಮನುಷ್ಯರನ್ನು ಅಸಾಮಾನ್ಯವಾಗಿ ಪ್ರೀತಿಸುತ್ತಿದ್ದ ಶ್ರೀಗಳ ಕನಸು, ಆಸೆಗಳೇ ವಿಭಿನ್ನ, ಹೌದು ಶ್ರೀಗಳು ದೈವಾಧೀನರಾಗುವ ಮೊದಲು ತಮ್ಮ ಕೊನೆ ಆಸೆಯೊಂದನ್ನು ಹೇಳಿಕೊಂಡಿದ್ದರು. ಆ ಆಸೆ ನೆರವೇರಿಸುತ್ತೇವೆ ಎನ್ನುವ ಭರವಸೆ ನೀಡಿದ ಮೇಲೆಯೇ ಅವರು ದೈವಾಧೀನರಾಗಿದ್ದು, ಮಕ್ಕಳು ಉಪವಾಸ ಬೀಳಬಾರದು: ನಾನು ಸತ್ತರೂ ಮಧ್ಯಾಹ್ನ ಮಕ್ಕಳು ಊಟ ಮಾಡಿದ ನಂತರವೇ ಅವರಿಗೆ ನನ್ನ ಸಾವಿನ ವಿಷಯ ತಿಳಿಸಬೇಕು, ಅನ್ನ ದಾಸೋಹಕ್ಕೆ ತೊಂದರೆಯಾಗಕೂಡದು, ಯಾವ ಕಾರಣಕ್ಕೂ […]