ಸ್ವಾಮೀಜಿಗಳ ಕೊನೆಯ ಆಸೆ ಏನಿತ್ತು ಗೊತ್ತಾ? :ಕೊನೆ ಕ್ಷಣದಲ್ಲೂ ಮಕ್ಕಳನ್ನೇ ನೆನೆದ ಶ್ರೀಗಳು

ತುಮಕೂರು: ಪರಮಪೂಜ್ಯ ಶ್ರೀ ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿ ಇದೀಗ ನಾಡಿನೆಲ್ಲೆಡೆ ಮೌನ ಆವರಿಸಿದೆ.  ಸಾಮಾನ್ಯ ಮನುಷ್ಯರನ್ನು ಅಸಾಮಾನ್ಯವಾಗಿ ಪ್ರೀತಿಸುತ್ತಿದ್ದ ಶ್ರೀಗಳ  ಕನಸು, ಆಸೆಗಳೇ ವಿಭಿನ್ನ, ಹೌದು  ಶ್ರೀಗಳು ದೈವಾಧೀನರಾಗುವ  ಮೊದಲು ತಮ್ಮ ಕೊನೆ ಆಸೆಯೊಂದನ್ನು  ಹೇಳಿಕೊಂಡಿದ್ದರು. ಆ ಆಸೆ ನೆರವೇರಿಸುತ್ತೇವೆ ಎನ್ನುವ ಭರವಸೆ ನೀಡಿದ ಮೇಲೆಯೇ  ಅವರು ದೈವಾಧೀನರಾಗಿದ್ದು, 
 ಮಕ್ಕಳು ಉಪವಾಸ ಬೀಳಬಾರದು:
ನಾನು ಸತ್ತರೂ  ಮಧ್ಯಾಹ್ನ ಮಕ್ಕಳು ಊಟ ಮಾಡಿದ ನಂತರವೇ ಅವರಿಗೆ ನನ್ನ ಸಾವಿನ ವಿಷಯ ತಿಳಿಸಬೇಕು, ಅನ್ನ ದಾಸೋಹಕ್ಕೆ ತೊಂದರೆಯಾಗಕೂಡದು, ಯಾವ ಕಾರಣಕ್ಕೂ ಮಕ್ಕಳು ಉಪವಾಸ ಬೀಳಕೂಡದು, ಎನ್ನುವುದೇ ಸ್ವಾಮೀಜಿಯವರ ಕೊನೆಯಾಸೆ ಆಗಿತ್ತು. ಅದಕ್ಕಾಗಿ ಸ್ವಾಮಿಗಳು 11.44 ಕ್ಕೆ ನಿಧನರಾಗಿದ್ದರೂ ಕೂಡ ಮಧ್ಯಾಹ್ನದ ವರೆಗೆ ಅವರ ನಿಧನ ವಾರ್ತೆ ಮಕ್ಕಳನ್ನು ತಲುಪಲಿಲ್ಲ. ಮಕ್ಕಳ  ಊಟವಾದ ಮೇಲೆಯೇ ಸ್ವಾಮಿಗಳು ನಿಧನರಾದ ವಿಷಯವನ್ನು  ಕಿರಿಯ ಸ್ವಾಮೀಜಿಗಳು ತಿಳಿಸಿದ್ದಾರೆ.
ಇಷ್ಟು ಚೆಂದವಾದ ಆಸೆಯನ್ನು ನಿಜವಾದ ಸಾಧಕರು ಮಾತ್ರ ಕಾಣಲು ಸಾಧ್ಯ ಅಲ್ಲವೇ?