ಕುಂದಾಪುರ: ಸರ್ಕಾರಿ ಭೂಮಿಯಲ್ಲಿ ಬೆಂಕಿ, ಸ್ಥಳೀಯ ಯುವಕರ ಸಮಯಪ್ರಜ್ಞೆಗೆ ತಪ್ಪಿತು ಭಾರೀ ದುರಂತ

ಕುಂದಾಪುರ: ಇಲ್ಲಿನ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ಸರ್ಕಾರಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹತ್ತಕ್ಕೂ ಅಧಿಕ ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ. ಬೆಂಕಿಗೆ ಕಾರಣ ಏನೆಂಬುವುದು ತಿಳಿದುಬಂದಿಲ್ಲ. ಮುಳ್ಳಿಕಟ್ಟೆಯ ಕೊಪ್ಪರಿಗೆಯಲ್ಲಿರುವ ಸುಮಾರು ೨೦ ಎಕರೆ ಸರ್ಕಾರಿ ಭೂಮಿಯಲ್ಲಿ ೧೦ ಎಕರೆಯಷ್ಟು ಜಾಗ ಬೆಂಕಿಗಾಹುತಿಯಾಗಿದೆ. ಈ ಪ್ರದೇಶದಲ್ಲಿ ಗಾಳಿ ಮರಗಳು ಬೆಳೆದಿದ್ದು ಅದರ ಎಲೆಗಳು ಒಣಗಿ ಬಿದ್ದಿದ್ದವು. ಇದೇ ಎಲೆಗೆ ಬೆಂಕಿ ತಗುಲಿದ್ದು, ಬೆಂಕಿಯ ತೀವ್ರತೆ ವ್ಯಾಪಿಸಿದೆ ಎಂದು ಶಂಕಿಸಲಾಗಿದೆ. ಸಂಜೆ ಆರು ಗಂಟೆಯ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ […]

 ಗಂಗೊಳ್ಳಿ: ಹಸಿಮೀನು ವ್ಯಾಪಾರಸ್ಥರ ಸಂಘದ ದಶಮಾನೋತ್ಸವ

ಕುಂದಾಪುರ: ಜೀವನದಲ್ಲಿ ಪ್ರತಿಯೊಬ್ಬರು ಸೌಂದರ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸೌಂದರ್ಯ ಪ್ರಜ್ಞೆ ಬೆಳೆದರೆ ಈ ದೇಶದ ಪ್ರತಿಯೊಂದು ಕಲಾಪ್ರಕಾರಗಳನ್ನು ಆಸ್ವಾದಿಸಬಹುದು. ಸೌಂದರ್ಯ ಪ್ರಜ್ಞೆ ಇಲ್ಲದಿದ್ದರೆ ನಮ್ಮ ಜೀವನ ಬರಡಾಗುತ್ತದೆ. ಜನ ಸೃಜನಶೀಲ ಮನಸ್ಸುಗಳನ್ನು ಹೊಂದಿದಾಗ ಊರು ಎಲ್ಲಾ ಆಯಾಮಗಳಲ್ಲಿ ಬೆಳೆಯುತ್ತದೆ. ಉತ್ತಮ ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಸಂಘ ಸಂಸ್ಥೆಗಳು ಊರಿನಲ್ಲಿನ ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯ ಮಾಡಬೇಕು ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಡಾ.ಮೋಹನ ಆಳ್ವ ಹೇಳಿದರು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ […]

ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ: ಮೀನುಗಾರರು ಮರಳಿ ಬರಲಿ ಎಂದು ಪ್ರಾರ್ಥಿಸಿದ ಕಾರ್ಯಕರ್ತರು

ಕುಂದಾಪುರ: ನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತವಾಗಿ ಮರಳಿ ಮನೆಗೆ ಬರುವಂತೆ ಮತ್ತು ಶಬರಿಮಲೆ ಸಂಪ್ರದಾಯ ಉಳಿವಿಗಾಗಿ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಊರಿನ ಗ್ರಾಮಸ್ಥರು ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ಗಂಗೊಳ್ಳಿ ಪುರಾಣ ಪ್ರಸಿದ್ಧ ಶ್ರೀ ವೀರೇಶ್ವರ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಯ್ಯಪ್ಪ ಜ್ಯೋತಿ ಬೆಳಗಿದರು. ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಗ್ರಾಮಸ್ಥರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮೀನುಗಾರಿಕೆಗೆ ತೆರಳಿದ ಮೀನುಗಾರರು ಸುರಕ್ಷಿತವಾಗಿ ಬೋಟು ಸಮೇತ ಮರಳಿ ಮನೆಗೆ ಬರಬೇಕು. […]

ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಟೀಸರ್ ಬಿಡುಗಡೆ

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಪೈಲ್ವಾನ್’ ಚಿತ್ರದ ಟೀಸರ್ ಇದೀಗ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚಿತ್ರದ ಎರಡನೇ ಟೀಸರ್ ಹೊರ ಬಂದಿದೆ. ಚಿತ್ರದ ಟೀಸರ್ ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಕೊನೆಗೂ ಕಿಚ್ಚನ ದರ್ಶನ ಮಾಡಿದ್ದಾರೆ. ಟೀಸರ್ ನೋಡುತ್ತಿದ್ದರೆ ‘ಪೈಲ್ವಾನ್’ ತಕ್ಕತ್ತು ಎಷ್ಟರ ಮಟ್ಟಗೆ ಇದೆ ಎನ್ನುವುದು ತಿಳಿಯುತ್ತದೆ. 1 ನಿಮಿಷ 3 ಸೆಕೆಂಡ್ ಚಿತ್ರದ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಆಕಾಂಕ್ಷ ಸಿಂಗ್ ಸಿನಿಮಾಗೆ ನಾಯಕಿಯಾಗಿದ್ದಾರೆ. ಇದೆ ಬೇಸಿಗೆ ಕಾಲದಲ್ಲಿ […]

ಶ್ರೀ ಬ್ರಹ್ಮಲಿಂಗೇಶ್ವರನ ಪರಮಪ್ರಸಾದ: ಅರುಣ್ ಫೋಟೋ ಪಿಕ್ಸ್ ಕ್ಲಿಕ್ಕಿಸಿದ ಚಿತ್ರ

ಅರುಣ್ ಕುಮಾರ್  ವೃತ್ತಿಪರ ಛಾಯಾಗ್ರಾಹಕರು. ಉಡುಪಿ ಜಿಲ್ಲೆಯ ಕೋಟ  ನಿವಾಸಿ.ಅವರು ಕ್ಲಿಕ್ಕಿಸಿದ ಚಿತ್ರ    “ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಪರಮಪ್ರಸಾದ “ ಚಿತ್ರ : ಅರುಣ್ ಕುಮಾರ್ ,ಫೋಟೋ ಪಿಕ್ಸ್ , ಕೋಟ (9945543012)