ದೇಶದಾದ್ಯಂತ ಸಡಗರ-ಸಂಭ್ರಮದ ಮಕರ ಸಂಕ್ರಾಂತಿ; ಸಂಕ್ರಾಂತಿಗೆ ಮತ್ತಷ್ಟು ಗೆಲುವಿನ ಹೊಳಪು ತುಂಬಿದ ಟೀಮ್ ಇಂಡಿಯಾ

ಬೆಂಗಳೂರು: ಟೀಂ ಇಂಡಿಯಾ ಅಡಿಲೇಡ್ ಓವಲ್ ನಲ್ಲಿ ನಡೆದ  ಏಕದಿನ ಪಂದ್ಯದಲ್ಲಿ  ನಾಯಕ ಕೊಹ್ಲಿ ಭರ್ಜರಿ ಶತಕ ಬಾರಿಸಿದರೆ, ಮಾಜಿ ನಾಯಕ ಎಂಎಸ್ ಧೋನಿ ಅವರು ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ ನಾಯಕ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಕ್ರಿಕೆಟ್’ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ನಾಯಕ ಎನ್ನುವ ಕೀರ್ತಿಗೂ ಭಾಜನರಾಗಿದ್ದಾರೆ. ದೇಶದಾದ್ಯಂತ ಇಂದು ಅತ್ಯಂತ ಸಡಗರ-ಸಂಭ್ರಮದಿಂದ ಮಕರ ಸಂಕ್ರಾಂತಿ ಹಾಗೂ 71ನೇ ಆರ್ಮಿ ದಿನಾಚರಣೆ[ಸೈನಿಕರ ದಿನಾಚರಣೆ] ಆಚರಿಸಲಾಗುತ್ತಿದೆ. […]

ಶ್ರೀ ಚಿಕ್ಕಮ್ಮ ಯುವ ಸಂಘಟನೆ ಬಾರಾಳಿ :ಉದ್ಘಾಟನೆ ಸಮಾರಂಭ

ಶ್ರೀ ಚಿಕ್ಕಮ್ಮ ಯುವ ಸಂಘಟನೆ ಬಾರಾಳಿ ಇದರ  ಉದ್ಘಾಟನೆ ದಿನಾಂಕ 14.01.2019 ರಂದು ಚಿಕ್ಕಮ್ಮ ದೇವಿ ದೇವಸ್ಥಾನದಲ್ಲಿ  ನಡೆಯಿತು. ಕಾರ್ಯಕ್ರಮ ಉದ್ಘಾಟನೆ ವಿಠ್ಠಲ್  ಶೆಟ್ಟಿ ಶೆಡಿಕೊಡ್ಲು ನೆರವೇರಿಸಿದರು . ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವವರ   ಚಿಕಿತ್ಸೆಗಾಗಿ  ರೂ 30,000 ಸಹಾಯಧನವಾಗಿ ಸಂಘಟನೆ ವತಿಯಿಂದ ವಿತರಿಸಲಾಯಿತು ಹಾಗೂ ಉದ್ಘಾಟಕರಿಗೆ  ಗೌರವಾರ್ಪಣೆ ,ಬಾರಾಳಿ  ಶಾಲೆಯ ದೈಹಿಕ ಶಿಕ್ಷಕ ರಾಜಾರಾಮ್ ಮತ್ತು ಎತ್ತರ ಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಮಣಿಕಂಠ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂದಾರ್ತಿ  ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಶೆಟ್ಟಿ ,ಹೆಗ್ಗುಂಜೆ […]

ಉಡುಪಿ: ಅಂತರ್ ಕಾಲೇಜು ಕಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ

  ಉಡುಪಿ: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಜ್ಜರಕಾಡು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಿದ್ದ ಅಂತರ ಕಾಲೇಜು ಮಟ್ಟದ ಪುರುಷರ ಹೊನಳು ಬೆಳಕಿನ ಕಬಡ್ಡಿ ಕ್ರೀಡಾಕೂಟವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಿದರು. ಆ ನಂತರ ಮಾತನಾಡಿದ ದಿನಕರ ಬಾಬು, ಗ್ರಾಮೀಣ ಸೊಗಡು, ಸಂಸ್ಕೃತಿಯನ್ನು […]

ಉಡುಪಿ:ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ  ಪುಣ್ಯ ತಿಥಿ

ಉಡುಪಿ; ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ಕಾಶಿಮಠಧೀಶರಾದ  ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ  ಪುಣ್ಯ ತಿಥಿಯ  ಆರಾಧನಾ ಮಹೋತ್ಸವವು ಶ್ರೀ ದೇವರ ಸನ್ನಿಧಿಯಲ್ಲಿ ಅರ್ಚಕರಾದ ರವೀಂದ್ರ ಭಟ್ ನೇತೃತ್ವದಲ್ಲಿ ಸೋಮವಾರ ನಡೆಯಿತು. ಮಹೋತ್ಸವವು ಅನ್ನ  ಸಂತರ್ಪಣೆ  ಮತ್ತು ರಾತ್ರಿ ಪಲ್ಲಕಿ ಉತ್ಸವದೊಂದಿಗೆ ಸಂಪನ್ನಗೊಂಡಿತು .  ದೇವಳದ ಆಡಳಿತ ಮೊಕ್ತೇಸರರಾದ  ಪಿ.ವಿ. ಶೆಣೈ, ಸದಸ್ಯರಾದ ಮಟ್ಟಾರ್ ವಸಂತ್ ಕಿಣಿ , ಗಣೇಶ್ ಕಿಣಿ, ರೋಹಿತಾಕ್ಷ ಪಡಿಯಾರ್, ನಾರಾಯಣ ಪ್ರಭು , ಪುಂಡಲೀಕ ಕಾಮತ ,ಅಶೋಕ ಬಾಳಿಗಾ  ,ದೇವದಾಸ […]

ಕಣ್ಮರೆಯಾಗಿರುವ ಮೀನುಗಾರರ ಶೋಧಕ್ಕೆ ಅತ್ಯಾಧುನಿಕ ಸೋನಾರ್ ತಂತ್ರಜ್ಞಾನ ಬಳಕೆ

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಮೀನುಗಾರರ ನಾಪತ್ತೆಯಾಗಿ ಒಂದು ತಿಂಗಳು ಕಳೆದರೂ ಈವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ನೌಕಪಡೆ ಸೋನಾರ್ ತಂತ್ರಜ್ಞಾನದ ಮೂಲಕ ಶೋಧಕಾರ್ಯಾಚರಣೆ ನಡೆಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.  ಸೋನಾರ್ ತಂತ್ರಜ್ಞಾನ  ಸೋನಾರ್(ಎಸ್‌ಒಎನ್‌ಎಆರ್-ಸೌಂಡ್ ನೇವಿಗೇಶನ್ ಆಂಡ್ ರೇಂಜಿಂಗ್) ಎಂಬ ತಂತ್ರಜ್ಞಾನವು ನೀರಿನ ಆಳದಲ್ಲಿ ವಸ್ತುಗಳನ್ನು ಪತ್ತೆ ಹಚ್ಚುವುದು ಹಾಗೂ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ನೀರಿನೊಳಗೆ ಹೆಚ್ಚು ಪರಿಣಾಮಕಾರಿಯಾಗಿ ಈ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ನೌಕಪಡೆ ಈ […]