ಒಂದು ತಿಂಗಳಾದರೂ ಮೀನುಗಾರರ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರ ಕಣ್ಮರೆಯಾಗಿರುವ ಸಂಬಂಧಿಸಿದಂತೆ ಕೇರಳಕ್ಕೆ ತೆರಳಿದ್ದ ಪೊಲೀಸ್ ಹಾಗೂ ಮೀನುಗಾರರ ತಂಡ ಯಾವುದೇ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ವಾಪಸ್ಸು ಬಂದಿದೆ. ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಸಮುದ್ರಕ್ಕೆ ಹೊಂದಿಕೊಂಡಿರುವ ನದಿಗಳಲ್ಲಿ ನಡೆಸಲಾಗುತ್ತಿದ್ದ ಶೋಧಕಾರ್ಯವನ್ನೂ ಯಾವುದೇ ಮಾಹಿತಿ ಸಿಗದಿರುವ ಕಾರಣಕ್ಕಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಒಂದು ತಿಂಗಳಾದರೂ ಮೀನುಗಾರರ ಪತ್ತೆ ಇಲ್ಲ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ […]

ಉಡುಪಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ: ಸಚಿವೆ ಜಯಮಾಲ ಬೇಜವಾಬ್ದಾರಿ ಹೇಳಿಕೆ

ಉಡುಪಿ: ಕುಂದಾಪುರ ತಾಲೂಕಿನ ಸಿದ್ಧಾಪುರ, ಹಳ್ಳಿಹೊಳೆ, ಹೊಸಂಗಡಿ, ಶಿರೂರು ಹಾಗೂ ಇತರ ಕಡೆಗಳಲ್ಲಿ ಮಂಗನ ಕಾಯಿಲೆ ಬಂದಿರುವುದು ವರದಿಯಾಗಿದೆ ಎಂಬ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಅವರ ಬೇಜವಾಬ್ದಾರಿ ಹೇಳಿಕೆ ವ್ಯಾಪಾಕ ಆಕ್ರೋಶಕ್ಕೆ ಕಾರಣವಾಗಿದೆ. ಉಡುಪಿ ಜಿಲ್ಲೆಯಲ್ಲಿ ಎಲ್ಲೂ ಯಾವುದೇ ಶಂಕಿತ ಪ್ರಕರಣಗಳು ಕಂಡು ಬಾರದಿದ್ದರೂ ಸಚಿವೆ ತಮ್ಮ ಅಧಿಕೃತ ಹೇಳಿಕೆಯಲ್ಲಿ ಕುಂದಾಪುರ ತಾಲೂಕಿನಲ್ಲಿ ಕಾಯಿಲೆ ಬಂದಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿರುವುದು ಎಷ್ಟು ಸರಿ. […]

ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಗೆಂಡ ಸೇವೆ ಹಾಗೂ ಮಕರ ಸಂಕ್ರಮಣ ಉತ್ಸವ

ಕುಂದಾಪುರ: ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಗೆಂಡ ಸೇವೆ ಹಾಗೂ ಮಕರ ಸಂಕ್ರಮಣ ಉತ್ಸವ ಸಂಭ್ರಮದಿಂದ ಜರುಗಿತು. ಮೂರು ದಿನಗಳ ಕಾಲ ನಡೆಯುವ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ಗೆಂಡ ಸೇವೆ ಹಾಗೂ ಜಾತ್ರಾ ಮಹೋತ್ಸವಕ್ಕೆ ಸೋಮವಾರದ ಶುಭ ಮಹೂರ್ತದಲ್ಲಿ ವಿವಿಧ ಧಾರ್ಮಿಕ ಪೂಜೆಯನ್ನು ಆರಂಭಿಸುವ ಮೂಲಕ ಚಾಲನೆ ನೀಡಲಾಯಿತು. ಭಕ್ತಿ ಸಾಗರದಲ್ಲಿ ಲೀನ: ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರಕೆ ಹಾಗೂ ಪೂಜೆಗಳನ್ನು ಸಲ್ಲಿಸಿದರು. ಜಾತ್ರಾ ಮಹೋತ್ಸವದ ಮೊದಲ ದಿನದಿಂದಲೆ ಆಗಮಿಸುವ ಭಕ್ತರು […]

ಕೂಳೂರು “ರಾಮ – ಲಕ್ಷ್ಮಣ ” ಜೋಡುಕರೆ ಕಂಬಳ: ಕೂಟದ ಫಲಿತಾoಶ

2ನೇ ವರ್ಷದ ಮಂಗಳೂರು, ಕೂಳೂರು “ರಾಮ – ಲಕ್ಷ್ಮಣ ” ಜೋಡುಕರೆ ಕಂಬಳ ಭಾನುವಾರ ಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿಯಲ್ಲಿ ನಡೆಯಿತು. ಕೂಟದ ಫಲಿತಾoಶ: ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 4 ಜೊತೆ, ಅಡ್ಡಹಲಗೆ: 4 ಜೊತೆ, ಹಗ್ಗ ಹಿರಿಯ: 19 ಜೊತೆ, ನೇಗಿಲು ಹಿರಿಯ: 15 ಜೊತೆ, ಹಗ್ಗ ಕಿರಿಯ: 15 ಜೊತೆ, ನೇಗಿಲು ಕಿರಿಯ: 44 ಜೊತೆ, ಒಟ್ಟು ಕೋಣಗಳ ಸಂಖ್ಯೆ : 101 ಜೊತೆ ————————————————– ಕನೆಹಲಗೆ: ಬಾರ್ಕೂರು ಶಾಂತಾರಾಮ ಶೆಟ್ಟಿ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ) […]

ಜ.14ರಿಂದ 16ರ ವರೆಗೆ ಮಾರಣಕಟ್ಟೆ ದೇಗುಲದಲ್ಲಿ ಮಕರ ಸಂಕ್ರಮಣ ಉತ್ಸವ

ಕೊಲ್ಲೂರು: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಮಕರ ಸಂಕ್ರಮಣ ಉತ್ಸವ ಜ. 14ರಿಂದ 16ರ ವರೆಗೆ ನಡೆಯಲಿದೆ. ಜ.14ರಂದು ಮಧ್ಯಾಹ್ನ ಶ್ರೀ ಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾ ಮಂಗಳಾರತಿ ನಡೆಯಲಿದೆ. ರಾತ್ರಿ 10.30ಕ್ಕೆ ಕೆಂಡಸೇವೆ ಜರಗುವುದು. ಜ.15ರಂದು ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ ಅನಂತರ ಮಂಡಲಸೇವೆ, ಜ.16ರಂದು ಮಹಾಮಂಗಳಾರತಿ, ಮಂಡಲ ಸೇವೆ ಹಾಗೂ ರಾತ್ರಿ ಶ್ರೀ ಕ್ಷೇತ್ರದ ದಶಾವತಾರ ಮೇಳದವರಿಂದ ಯಕ್ಷಗಾನ ಸೇವೆಯಾಟ ಜರಗಲಿದೆ ಎಂದು ಆನುವಂಶೀಯ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ಹಾಗೂ ಚಿತ್ತೂರು […]