ಕೊಲ್ಲೂರು: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲದಲ್ಲಿ ಮಕರ ಸಂಕ್ರಮಣ ಉತ್ಸವ ಜ. 14ರಿಂದ 16ರ ವರೆಗೆ ನಡೆಯಲಿದೆ.
ಜ.14ರಂದು ಮಧ್ಯಾಹ್ನ ಶ್ರೀ ಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾ ಮಂಗಳಾರತಿ ನಡೆಯಲಿದೆ. ರಾತ್ರಿ 10.30ಕ್ಕೆ ಕೆಂಡಸೇವೆ ಜರಗುವುದು. ಜ.15ರಂದು ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ ಅನಂತರ ಮಂಡಲಸೇವೆ, ಜ.16ರಂದು ಮಹಾಮಂಗಳಾರತಿ, ಮಂಡಲ ಸೇವೆ ಹಾಗೂ ರಾತ್ರಿ ಶ್ರೀ ಕ್ಷೇತ್ರದ ದಶಾವತಾರ ಮೇಳದವರಿಂದ ಯಕ್ಷಗಾನ ಸೇವೆಯಾಟ ಜರಗಲಿದೆ ಎಂದು ಆನುವಂಶೀಯ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ ಹಾಗೂ ಚಿತ್ತೂರು ಗುಡಿಕೇರಿ ಮನೆಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.