ಬ್ರಹ್ಮಾವರ ಮ್ಯಾರಥಾನ್ “ಬಿ ಹೆಲ್ತಿ”;ಓಟಗಾರರಾಗಿ ಸ್ಪರ್ಧಿಸಲು ಜರ್ಮನ್ ಪ್ರಜೆಗಳು ರೆಡಿ

ಬ್ರಹ್ಮಾವರ; ಎಕ್ತಾ ಇವೆಂಟ್ ಮ್ಯಾನೇಜ್ಮೆಂಟ್ ಮತ್ತು ಕಲ್ಯಾಣಿ ಸ್ಪೋರ್ಟ್ಸ್ ರವರ ಜಂಟಿ ಆಶ್ರಯದಲ್ಲಿ ಹಾಗೂ ಸಮಾಜ ಸೇವಕರು ಆಗಿರುವ ಶ್ರೀಯುತ ಅಮೃತ್ ಶೆಣೈಯವರ ಮುಂದಾಳತ್ವದಲ್ಲಿ ಜನವರಿ 20 ರಂದು ಬ್ರಹ್ಮಾವರದ ಹೃದಯ ಭಾಗದಲ್ಲಿ “ಬಿ ಹೆಲ್ತಿ” ಎಂಬ‌, ಜನಸಾಮಾನ್ಯರಲ್ಲಿ ಆರೋಗ್ಯ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಬೃಹತ್ ಮಟ್ಟದ ಮ್ಯಾರಥಾನ್ ನಡೆಯಲಿದೆ. ಈ ಪ್ರಯುಕ್ತ ಬಾರ್ಕೂರಿನ ಯಡ್ತಾಡಿಯಲ್ಲಿ ಬಡ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ಜರ್ಮನಿಯ ಪ್ರಜೆಗಳಾದ ಮಿಸ್  ರೂಥ್ ಹಾಗೂ ಮಿಸ್ ದೇಸಿರಿ ಮ್ಯಾರಥಾನ್ “ಬಿ […]

ಜ. 18: ಉಡುಪಿ  12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಉಡುಪಿ: 12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಗರದ ಬ್ರಹ್ಮಗಿರಿ ಲಯನ್ಸ್‌ ಭವನದಲ್ಲಿ ಜ. 18ರಂದು ನಡೆಯಲಿದೆ ಎಂದು ಉಡುಪಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ  ಅವರು, ಸಮ್ಮೇಳನಾಧ್ಯಕ್ಷತೆಯನ್ನು  ಜಾನಪದ ವಿದ್ವಾಂಸ ಹಾಗೂ ಸಾಹಿತಿ ಡಾ. ಗಣನಾಥ ಎಕ್ಕಾರು ವಹಿಸಿಕೊಳ್ಳಲಿದ್ದಾರೆ ಎಂದರು. ಅಂದು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದ್ದು, ಸ್ಥಳೀಯ ನಗರಸಭಾ ಸದಸ್ಯ ಹರೀಶ್‌ ಶೆಟ್ಟಿ ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ಬಳಿಕ […]

ರಾಜ್ಯಮಟ್ಟದ ಭರತ ನಾಟ್ಯ ಸ್ಪರ್ಧೆ: ಪ್ರಾಪ್ತಿ ಹೆಗ್ಡೆ ದ್ವಿತೀಯ ಸ್ಥಾನ

ಕುಂದಾಪುರ: ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಭರತ ನಾಟ್ಯ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕುಂದಾಪುರದ ಪ್ರಾಪ್ತಿ ಹೆಗ್ಡೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ನೃತ್ಯ ಗುರು ಪ್ರವಿತಾ ಅಶೋಕ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿರುವ ಪ್ರಾಪ್ತಿ ಹೆಗ್ಡೆ ಕುಂದಾಪುರದ ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಮಲ್ತಿ ದ್ವೀಪದಲ್ಲಿರುವ ಪರಾಶಕ್ತಿ ದೇವತೆಗೆ ಕೊಡವೂರು ದೇವಳದಿಂದ ಮಕರಸಂಕ್ರಾಂತಿ ವಿಶೇಷ ಪೂಜೆ, ಪ್ರಾರ್ಥನೆ

ಮಲ್ಪೆ ಸಮೀಪ  ಮಲ್ತಿ ದ್ವೀಪ ದ ಲ್ಲಿರುವ ಪರಾಶಕ್ತಿ ದೇವತೆಗೆ ಮಕರಸಂಕ್ರಾಂತಿಯಂದು ಕೊಡವೂರು ಶಂಕರನಾರಾಯಣ ದೇವಸ್ಥಾನದ ವತಿಯಿಂದ ವಿಶೇಷ ಪೂಜೆ  ಸಲ್ಲಿಸಲಾಯಿತು. ಇಲ್ಲಿ ಯಾವುದೇ ಜನವಸತಿ ಇಲ್ಲ. ಇಲ್ಲಿರುವ ಪರಾಶಕ್ತಿ ದೇವತೆಗೆ ಮಕರಸಂಕ್ರಾಂತಿಯಂದು ಕೊಡವೂರು ದೇವಸ್ಥಾನದ ವತಿಯಿಂದ ಪೂಜೆ  ಸಲ್ಲಿಸುವುದು ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಹಿಂದಿನಿಂದಲೂ ಈ ಶಕ್ತಿ ದೇವತೆ ಇದ್ದರೂ ಕಾಲಾಂತರದಲ್ಲಿ ಪೂಜಾಕ್ರಮ ನಿಂತು ಹೋಗಿತ್ತು. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರ ಹಲವಾರು  ವರ್ಷಗಳಿಂದ ಕೊಡವೂರು ದೇವಸ್ಥಾನದಿಂದ ಪೂಜೆ  ಸಲ್ಲಿಕೆಯಾಗುತ್ತಿದೆ.  ಪೂಜಾ ವಿಧಿವಿಧಾನಗಳನ್ನು ದೇವಳದ […]

ಮಂಗನ ಕಾಯಿಲೆ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಮುಂಜಾಗ್ರತಾ ಕ್ರಮ- ಡಿಸಿ

ಉಡುಪಿ: ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹರಡುವುದನ್ನು ತಡೆಗಟ್ಟಲು ಎಲ್ಲಾ ರೀತಿಯವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.ಅವರು ಸೋಮವಾರ, ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಸಮಗ್ರ ರೋಗಗಳ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾಡಿನಲ್ಲಿ ಮಂಗಗಳು ಸಾಯುವುದು ಈ ರೋಗದ ಮುನ್ಸೂಚನೆಯಾಗಿದ್ದು, ಕಾಯಿಲೆಯುಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ, ಸತತ ಎಂಟ ರಿಂದ ಹತ್ತು ದಿನಗಳವರೆಗೆ ಬಿಡದೇ ಬರುವ ಜ್ವರ, ವಿಪರೀತ ತಲೆನೋವು, ಸೊಂಟ ನೋವು, ಕೈಕಾಲು ನೋವು, ನಿಶ್ಯಕ್ತಿ, ಕಣ್ಣು ಕೆಂಪಾಗುವುದು, […]