ನಮಗೆ ಮೀನುಗಾರರು ಬೇಕು,ಪರಿಹಾರ ಬೇಡ :ಸಚಿವ ನಾಡಗೌಡ ವಿರುದ್ಧ ಆಕ್ರೋಶಗೊಂಡ ಕಡಲಮಕ್ಕಳು

ಉಡುಪಿ: ಮೀನುಗಾರರು ಕಣ್ಮರೆಯಾಗಿ 25 ದಿನಗಳು ಕಳೆದಿದೆ. ಆದರೆ ನೀವು ಈಗ ಸಾಂತ್ವನ ಹೇಳಲು ಬರುತ್ತಿದ್ದೀರಾ? ಎಂದು ನಾಪತ್ತೆಯಾಗಿರುವ ಮೀನುಗಾರರ ಮನೆಗೆ ಬುಧವಾರ ಭೇಟಿ ನೀಡಲು ಆಗಮಿಸಿದ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡರನ್ನು ಮೀನುಗಾರ ಮಹಿಳೆಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ನಿಮ್ಮ ಪರಿಹಾರ ಬೇಡ, ನಮಗೆ ಮೀನುಗಾರರು ಬೇಕು: ಸಚಿವರು ತಾತ್ಕಾಲಿಕ ಪರಿಹಾರ ನೀಡುತ್ತೇವೆಂದು ಹೇಳಿದ ತಕ್ಷಣವೇ ಮೀನುಗಾರರ ಮನೆಯ ಬಳಿ ಜಮಾಯಿಸಿದ್ದ ಸ್ಥಳೀಯರು ಹಾಗೂ ಮೀನುಗಾರರು ‘ನಿಮ್ಮ ಪರಿಹಾರದ ಹಣ ನಮಗೆ ಬೇಕಾಗಿಲ್ಲ. ನಾವು […]

ಉಪಗ್ರಹದ ಮೂಲಕ ಮೀನುಗಾರರ ಹುಡುಕಾಟ :ಸಚಿವ ವೆಂಕಟರಾವ್ ನಾಡಗೌಡ

ಉಡುಪಿ: ಕಳೆದ 25 ದಿನಗಳಿಂದ ನಾಪತ್ತೆಯಾಗಿರುವ ತ್ರಿಭುಜ ಭೋಟ್ ಮಾಲೀಕ ಚಂದ್ರಶೇಖರ್ ಕೋಟ್ಯಾನ್ ಹಾಗೂ ತಾಂಡೇಲ ದಾಮೋದರ ಸಾಲಿಯಾನ್ ಅವರ ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆ ಮನೆಗಳಿಗೆ ಬುಧವಾರ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಬೋಟ್ ಹಾಗೂ ಏಳು ಮಂದಿ ಮೀನುಗಾರರಿಗೆ ಸಂಬಂಧಿಸಿ ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಪೊಲೀಸರು ಮಾತ್ರವಲ್ಲದೆ ಕೋಸ್ಟ್ ಗಾರ್ಡ್, ನೌಕಪಡೆ […]

ಕಣ್ಮರೆಯಾಗಿರುವ ಮೀನುಗಾರರು ಉತ್ತರ ಭಾಗದಲ್ಲಿದ್ದಾರೆ: ಇದು ದೈವದ ನುಡಿ

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ಹೊರಟು ಕಳೆದ 25 ದಿನಗಳಿಂದ ಕಣ್ಮರೆಯಾಗಿರುವ ಏಳು ಮಂದಿ ಮೀನುಗಾರರ ಪ್ರಾಣಕ್ಕೆ ಯಾವುದೇ ಅಪಾಯ ಆಗಿಲ್ಲ. ಅವರೆಲ್ಲರೂ ಉತ್ತರ ಭಾಗದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಬೊಬ್ಬರ್ಯ ದೈವದ ನುಡಿಗಟ್ಟಿನಲ್ಲಿ ತಿಳಿದುಬಂದಿದೆ. ಡಿಸೆಂಬರ್ 13ರಂದು ಮೀನುಗಾರಿಕೆ ತೆರಳಿದ ದಾಮೋದರ್, ರಮೇಶ್, ಹರೀಶ್, ಲಕ್ಷ್ಮಣ್, ರವಿ, ಸತೀಶ್ ಹಾಗೂ ಚಂದ್ರಶೇಖರ್ ಎಂಬವರು ನಾಪತ್ತೆಯಾಗಿದ್ದು, ಈವರೆಗೂ ಪತ್ತೆಯಾಗದ ಹಿನ್ನೆಲೆಯಲ್ಲಿ ಮೀನುಗಾರರ ಕುಟುಂಬಸ್ಥರು ಬೊಬ್ಬರ್ಯ ದೈವದ ಮೊರೆ ಹೋಗಿದ್ದರು. ಈ ವೇಳೆ ದೈವದ ಪಾತ್ರಿ ಅವರೆಲ್ಲರೂ […]

ಅಖಿಲ ಭಾರತ ಮೀನುಗಾರರ ವೇದಿಕೆಯ ನಿಯೋಗದಿಂದ ಪ್ರಧಾನಿ ಭೇಟಿ

ಉಡುಪಿ: ಅಖಿಲ ಭಾರತ ಮೀನುಗಾರ ವೇದಿಕೆಯ ನೇತೃತ್ವದ ನಿಯೋಗ ಮಂಗಳವಾರ ತಡರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಹಾಗೂ 7 ಮಂದಿ ಮೀನುಗಾರರನ್ನು  ಶೀಘ್ರವಾಗಿ ಪತ್ತೆ ಹಚ್ಚಲು ವಿಶೇಷ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ಹಾಗೆಯೇ ಈ ವೇಳೆ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳಾದ ಮೀನುಗಾರಿಕೆ ಬಳಸುವ ಡೀಸೆಲ್ ಮೇಲಿನ ರೋಡ್ ಸೆಸ್  ವಿನಾಯಿತಿ, ಮೀನುಗಾರಿಕೆಗೆ ಸಂಬಂಧಪಟ್ಟ ಚಟುವಟಿಕೆಗಳಿಗೆ ಜಿಎಸ್ಟಿ ವಿನಾಯಿತಿ, ಮೀನುಗಾರಿಕೆಗೆ ಕೇಂದ್ರ ಸರ್ಕಾರದ ಪ್ರತ್ಯೇಕ […]

ಮಂಗನ ಕಾಯಿಲೆ ರೋಗಕ್ಕೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಚಿಕಿತ್ಸೆ: ಜೀವ ಹಾನಿಯಿಲ್ಲ

ಮಣಿಪಾಲ: ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಆಸುಪಾಸಿನ ಸುಮಾರು 57 ಜನರು ಶಂಕಿತ ಮಂಗನ ಕಾಯಿಲೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದ್ದು ಈ ರೋಗಕ್ಕೆ ಚಿಕಿತ್ಸೆ ಪಡೆಯಲು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಸುಮಾರು 19 ಜನರಿಗೆ ಮಂಗನ ಕಾಯಿಲೆ ಇರುವ ಬಗ್ಗೆ ವರದಿಯಾಗಿದೆ. ಇದರಲ್ಲಿ 4 ಜನ‌ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. 15 ಜನ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಮಂಗನ ಕಾಯಿಲೆಯಿಂದ ಯಾರೂ ಕೂಡ ಸಾವನ್ನಪ್ಪಿಲ್ಲ ಎನ್ನುವ ಮಾಹಿತಿ […]