ಟೆಸ್ಟ್ ಸರಣಿ ಐತಿಹಾಸಿಕ ಗೆಲುವು ಪಡೆದ ಟೀಂ ಇಂಡಿಯಾಗೆ ಬಿಸಿಸಿಐ ಬಂಪರ್ ಗಿಫ್ಟ್

ಮುಂಬೈ: 1947-78ರಲ್ಲಿ ಮೊದಲ ಬಾರಿಗೆ ಆಸೀಸ್ ವಿರುದ್ಧ ಟೆಸ್ಟ್ ಸರಣಿ ಆಡಿದ್ದ ಟೀಂ ಇಂಡಿಯಾ ಇದೂವರೆಗೂ 12 ಸರಣಿಗಳನ್ನು ಆಡಿತ್ತು. ಆದರೆ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು.ಆಸ್ಪ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು 2-1ರ ಅಂತರದಲ್ಲಿ ಗೆದ್ದು ಇತಿಹಾಸ ಬರೆದಿದ್ದ ಟೀಂ ಇಂಡಿಯಾ ತಂಡಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಣೆ ಮಾಡಿದೆ.ಟೆಸ್ಟ್ ಸರಣಿಯ ಗೆದ್ದ ಸಂತಸದಲ್ಲಿದ್ದ ತಂಡದ ಆಟಗಾರರು ಹಾಗೂ ಟೀಂ ಮ್ಯಾನೇಜ್‍ಮೆಂಟ್ ಸಿಬ್ಬಂದಿ ಕೂಡ ನಗದು ಬಹುಮಾನ ಪಡೆಯಲಿದ್ದಾರೆ. ಪ್ರಮುಖವಾಗಿ ಆಡುವ 11ರ […]

ಫೆ.3: ಬಿಲ್ಲ‌ವ‌  ಮ‌ಹಾ  ಸ‌ಮಾವೇಶ‌ 

ಬ್ರಹ್ಮಾವರ ;ಬಿಲ್ಲ‌ವ‌ ಮ‌ಹಾ ಸ‌ಮಾವೇಶ‌  ಫೆಬ್ರ‌ವ‌ರಿ 3ರ  ರ‌ವಿವಾರ‌ದಂದು  ಮ‌ಧ್ಯಾಹ್ನ‌  2.00ಕ್ಕೆ ಬ್ರ‌ಹ್ಮಾವ‌ರ‌ ಗಾಂಧಿ  ಮೈದಾನ‌ದಲ್ಲಿ , ಬಿ.ಎನ್. ಶಂಕರ  ಪೂಜಾರಿಯ‌ವ‌ರ‌ ಸಾರ‌ಥ್ಯ‌ ಮತ್ತು ಉಡುಪಿ ಜಿಲ್ಲಾ ಬಿಲ್ಲ‌ವ‌ ಯುವ‌ ವೇದಿಕೆ(ರಿ.) ಇದ‌ರ‌ ನೇತ್ರ‌ತ್ವ‌ದ‌ಲ್ಲಿ ,ರಾಜ್ಯ‌ದ‌ ಮುಖ್ಯ‌ ಮ‌ಮಂತ್ರಿ , ಉಪ‌ ಮುಖ್ಯ‌ ಮಂತ್ರಿ  ಹಾಗೂ ಬಿಲ್ಲ‌ವ‌ ಸ‌ಮಾಜ‌ದ‌ ಸ‌ಮ‌ಸ್ತ‌ ರಾಜ‌ಕೀಯ‌ ಹಾಗೂ ಸಾಮಾಜಿಕ‌ ಮುಖಂಡರ  ಘ‌ನ‌ ಉಪ‌ಸ್ಥಿತಿಯ‌ಲ್ಲಿ ಕಾರ್ಯಕ್ರಮ  ಜರಗಲಿದೆ.

ವಾಟ್ಸಪ್‌ಗೆ ಬರುತ್ತಿದೆ ‘ಫಿಂಗರ್ ಪ್ರಿಂಟ್’ ಹೊಸ ಫೀಚರ್!

ನವದೆಹಲಿ: ಫೇಸ್‍ಬುಕ್ ಮಾಲೀಕತ್ವದ ದೇಶದ ಜನಪ್ರಿಯ ಮೆಸೆಜಿಂಗ್ ಆ್ಯಪ್ ವಾಟ್ಸಪ್, ಹೊಸ ಫೀಚರ್ ಸೇರಿಸಲು ಸಿದ್ಧತೆ ನಡೆಸುತ್ತಿದೆ. ತನ್ನ ಬಳಕೆದಾರರ ಖಾಸಗಿತನ ಹಾಗೂ ಹೆಚ್ಚಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಟ್ಸಪ್ ಅತಿ ನೂತನ ಫೀಚರ್ ನ್ನು ಸಿದ್ದಪಡಿಸಿದೆ.ಈಗಿರುವ ಫೀಚರ್ ನಲ್ಲಿ ಫೋನ್ ಲಾಕ್ ಓಪನ್ ಮಾಡಿದರೆ ಯಾರೂ ಬೇಕಾದರೂ ವಾಟ್ಸಪ್ ಓಪನ್ ಮಾಡಿ ಚಾಟ್ ಗಳನ್ನು ಓದಬಹುದು. ಹೀಗಾಗಿ ಖಾಸಗಿತನ ಇಲ್ಲದ ಕಾರಣ ಬಳಕೆದಾರರ ಮಾಹಿತಿ ಮತ್ತು ಖಾತೆ ದುರುಪಯೋಗ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ರೀತಿಯ ದುರುಪಯೋಗ […]

ಕುಂದಾಪುರ ಸಾರ್ವತ್ರಿಕ ಮುಷ್ಕರ :೨ನೇ ದಿನ ಬೃಹತ್ ಮೆರವಣಿಗೆ

ಕುಂದಾಪುರ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿಯಾಗಿ ನಡೆದುಕೊಂಡರೆ, ಕಾರ್ಮಿಕ ಕಾನೂನುಗಳನ್ನು ಮುಟ್ಟಲಿಕ್ಕೆ ಬಂದರೆ  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕುದಾದ ಪಾಠವನ್ನು ಕಲಿಸುತ್ತಾರೆ. ಆ ತಾಕತ್ತು, ಆ ಸಾಮರ್ಥ್ಯ ಕಾರ್ಮಿಕ ವರ್ಗಕ್ಕೆ ಇದೆ ಎಂದು ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಹೇಳಿದ್ದಾರೆ. ರಾಷ್ಟ್ರವ್ಯಾಪಿ ನಡೆಸುತ್ತಿರುವ ಎರಡು ದಿನಗಳ ಸಾರ್ವತ್ರಿಕ ಮುಷ್ಕರದ ಎರಡನೇ ದಿನವಾದ ಬುಧವಾರ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ನಡೆದ ಬೃಹತ್ ರ್‍ಯಾಲಿಯ ಬಳಿಕ […]

ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ “ಲಂಗೋಟಿ ಪ್ರತಿಭಟನೆ”

ಉಡುಪಿ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಕಮಲೇಶ್ ಚಂದ್ರ ಸಮಿತಿ ವರದಿಯನ್ನು ಜಾರಿಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಅಂಚೆ ನೌಕರರ ಸಂಘ ಹಾಗೂ ರಾಷ್ಟ್ರೀಯ ಅಂಚೆ ನೌಕರರ ಸಂಘದ ಉಡುಪಿ ವಿಭಾಗ ವತಿಯಿಂದ ಬುಧವಾರ ಉಡುಪಿಯ ಮುಖ್ಯ ಅಂಚೆ ಕಚೇರಿ ಎದುರು ವಿನೂತನ ಲಂಗೋಟಿ ಪ್ರತಿಭಟನೆ ನಡೆಯಿತು. ಕೇಂದ್ರ ಸರಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅಂಚೆ ನೌಕರರ ಬೇಡಿಕೆ ಈಡೇರಿಸದೆ ವಂಚಿಸುತ್ತಿದೆ ಎಂದು ಟೀಕಿಸುವ ರೀತಿಯಲ್ಲಿ ಅಂಚೆ ನೌಕರ ರಾಘವೇಂದ್ರ ಪ್ರಭು […]