ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಚಾಂಪಿಯನ್

ಮುಂಬೈ:  ಪ್ರೊ ಕಬಡ್ಡಿ ಆರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೆಂಗಳೂರು ಬುಲ್ಸ್ 38-33 ಅಂಕಗಳಿಂದ ಗುಜರಾತ್ ಫಾರ್ಚ್ಯೂನ್’ ಜೈಂಟ್ಸ್ ತಂಡವನ್ನು ಮಣಿಸಿತು. ಈ ಮೂಲಕ ರೋಹಿತ್ ಕುಮಾರ್ ನೇತೃತ್ವದ ಬೆಂಗಳೂರು ಬುಲ್ಸ್ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿತು. ಪವನ್ ಕುಮಾರ್ ಶೆರಾವತ್ 22 ಅಂಕ ಕಲೆಹಾಕುವ ಮೂಲಕ ಬುಲ್ಸ್ ಗೆಲುವಿನ ರೂವಾರಿ ಎನಿಸಿದರು.

ನಾಪತ್ತೆಯಾಗಿರುವ ಮೀನುಗಾರರ ಮನೆಗೆ ಉಸ್ತುವಾರಿ ಸಚಿವೆ ಜಯಮಾಲ ಭೇಟಿ ನೀಡಿ ಸಾಂತ್ವನ

ಮಲ್ಪೆ: ನಾಪತ್ತೆಯಾಗಿರುವ ಮೀನುಗಾರರ ಮನೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಭೇಟಿ ನೀಡಿ ಸಾಂತ್ವನ ಹೇಳಿದರು. ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್ ಮಾಲೀಕನಾಗಿರುವ ಬಡನಿಡಿಯೂರಿನ ಪಾವಂಜಿಗುಡ್ಡೆಯ ಚಂದ್ರಶೇಖರ್ ಅವರ ಮನೆಗೆ ತೆರಳಿದ ಸಚಿವರು, ಚಂದ್ರಶೇಖರ್ ಅವರ ಪತ್ನಿ ಶ್ಯಾಮಲಾರಿಗೆ ಸಾಂತ್ವನ ಹೇಳಿದರು. ಸರಕಾರ ವಿಷಯ ತಿಳಿದ ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ  ಜೊತೆ  ಮಾತನಾಡಿ, ನಾಪತ್ತೆಯಾದ ಮೀನುಗಾರರ ಹುಡುಕಾಟಕ್ಕೆ  ಬೇಕಾದ ಎಲ್ಲಾ  ಕ್ರಮಕೈಗೊಳ್ಳಲು ನಿರ್ದೇಶನ ನೀಡಿದೆ ಎಂದು ತಿಳಿಸಿದರು. ನಿಮ್ಮ ಪತಿ ಕಾಣೆಯಾದದ್ದು ನಮಗೂ ನೋವಿದೆ. […]

ಮೀನುಗಾರರನ್ನು ಸುರಕ್ಷಿತವಾಗಿ ಕರೆತರಲು ಪ್ರಾಮಾಣಿಕ ಪ್ರಯತ್ನ:ಎಂ.ಬಿ ಪಾಟೀಲ್

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಎಲ್ಲ ರೀತಿಯ ಶೋಧ ಕಾರ್ಯವನ್ನು ಮಾಡುತ್ತಿದೆ. ಮೀನುಗಾರರನ್ನು ಸುರಕ್ಷಿತವಾಗಿ ಕರೆತರಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದರು. ಅವರು ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಈ ವಿಚಾರದಲ್ಲಿ ರಾಜಕೀಯ ಬೇಡ. ಎರಡು ಸರಕಾರಗಳು ಮೀನುಗಾರರ ಹುಡುಕಾಟಕ್ಕೆ ಶಕ್ತಿಮೀರಿ ಪ್ರಯತ್ನ ಮಾಡುತ್ತಿದೆ ಎಂದರು. ಈಗಾಗಲೇ ದಿನಕ್ಕೆ ನಾಲ್ಕು […]

ಶಬರಿಮಲೆಗೆ ಮಹಿಳಾ ಪ್ರವೇಶ ವಿರೋಧಿಸಿ ಮೌನ ಮೆರವಣಿಗೆ

ಉಡುಪಿ: ಶಬರಿಮಲೆಗೆ ಮಹಿಳಾ ಪ್ರವೇಶವನ್ನು ವಿರೋಧಿಸಿ ಶ್ರೀರಾಮ ಸೇನೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮಣಿಪಾಲದ ಉಪೇಂದ್ರ ಪೈ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಶನಿವಾರ ಮೌನ ಮೆರವಣಿಗೆ ನಡೆಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು. ಕೇರಳದ ಶಬರಿಮಲೆ ದೇಗುಲ ತನ್ನದೇ ಆದ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿದೆ. ಅದಕ್ಕೆ ಕಾನೂನಿನ ಮೂಲಕ ತಡೆಯೊಡ್ಡುವುದು ಸರಿಯಲ್ಲ. ಆದ್ದರಿಂದ ಕೇಂದ್ರ ಸರಕಾರ ಸುಗ್ರಿವಾಜ್ಞೆ ಹೊರಡಿಸಿ, ಸುಪ್ರೀಂ ಕೋರ್ಟ್ ನ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ವಿದ್ಯಾಕುಮಾರಿ […]

ಕಟ್ಟಡದ 8 ನೇ ಮಹಡಿಯ ಮೇಲೆ, ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆ

ಉಡುಪಿ:ನಗರದ ಕಲ್ಸಂಕ ಬಳಿಯ ನಿರ್ಮಾಣ ಹಂತದಲ್ಲಿರುವ ಕಟ್ಟಡದ 8 ನೇ ಮಹಡಿಯಲ್ಲಿ ಅಪರಿಚಿತ ಸುಮಾರು 22 ವರ್ಷದ ಯುವಕನೊರ್ವನ ಶವವು ನೇಣು ಕುಣಿಕೆಯಲ್ಲಿ ನೆಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ನಡೆದಿದೆ. ವ್ಯಕ್ತಿ ಮೃತಪಟ್ಟು ಕೆಲವು ದಿನಗಳಾದರಿಂದ ಶವ ಕೊಳೆತು ಹುಳಗಳಾಗಿ ಗಬ್ಬು ವಾಸನೆಯಿಂದ ನಾರುತಿತ್ತು. ವಿಷಯ ತಿಳಿದ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಶವ ಮಹಜರು ನಡೆಸಿ ತನಿಖೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯು ಹೊರ ರಾಜ್ಯದ ವಿದ್ಯಾರ್ಥಿ ಇರಬೇಕೆಂದು ಶಂಕಿಸಲಾಗಿದೆ. ನಿರ್ಮಾಣದ ಹಂತದ […]