ಕಟ್ಟಡದ 8 ನೇ ಮಹಡಿಯ ಮೇಲೆ, ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆ

ಉಡುಪಿ:ನಗರದ ಕಲ್ಸಂಕ ಬಳಿಯ ನಿರ್ಮಾಣ ಹಂತದಲ್ಲಿರುವ ಕಟ್ಟಡದ 8 ನೇ ಮಹಡಿಯಲ್ಲಿ ಅಪರಿಚಿತ ಸುಮಾರು 22 ವರ್ಷದ ಯುವಕನೊರ್ವನ ಶವವು ನೇಣು ಕುಣಿಕೆಯಲ್ಲಿ ನೆಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ನಡೆದಿದೆ. ವ್ಯಕ್ತಿ ಮೃತಪಟ್ಟು ಕೆಲವು ದಿನಗಳಾದರಿಂದ ಶವ ಕೊಳೆತು ಹುಳಗಳಾಗಿ ಗಬ್ಬು ವಾಸನೆಯಿಂದ ನಾರುತಿತ್ತು. ವಿಷಯ ತಿಳಿದ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಶವ ಮಹಜರು ನಡೆಸಿ ತನಿಖೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯು ಹೊರ ರಾಜ್ಯದ ವಿದ್ಯಾರ್ಥಿ ಇರಬೇಕೆಂದು ಶಂಕಿಸಲಾಗಿದೆ.
ನಿರ್ಮಾಣದ ಹಂತದ ಕಟ್ಟಡವಾದರಿಂದ ಕಟ್ಟಡಕ್ಕೆ ಎಂಟನೇ ಮಹಡಿಯಿಂದ ಶವವನ್ನು ತಳ ಭಾಗಕ್ಕೆ ತರುಲು ಲಿಪ್ಟಿನ ವ್ಯವಸ್ಥೆ ಇರಲಿಲ್ಲ. ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ ಅಂಬಲಪಾಡಿ, ತಾರಾನಾಥ್ ಮೇಸ್ತ ಶಿರೂರು, ಶವವನ್ನು  ಎಂಟನೇ ಮಹಡಿಯಿಂದ ಮೆಟ್ಟಿಲುಗಳ ಮೂಲಕ ಹೊತ್ತು ತಂದು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರ ಸಾಗಿಸುವರೆಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಉಚಿತ ಅಂಬುಲೇನ್ಸ್ ಸೇವೆ ಒದಗಿಸಿತು.