ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಚಾಂಪಿಯನ್

ಮುಂಬೈ:  ಪ್ರೊ ಕಬಡ್ಡಿ ಆರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬೆಂಗಳೂರು ಬುಲ್ಸ್ 38-33 ಅಂಕಗಳಿಂದ ಗುಜರಾತ್ ಫಾರ್ಚ್ಯೂನ್’ ಜೈಂಟ್ಸ್ ತಂಡವನ್ನು ಮಣಿಸಿತು. ಈ ಮೂಲಕ ರೋಹಿತ್ ಕುಮಾರ್ ನೇತೃತ್ವದ ಬೆಂಗಳೂರು ಬುಲ್ಸ್ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿತು. ಪವನ್ ಕುಮಾರ್ ಶೆರಾವತ್ 22 ಅಂಕ ಕಲೆಹಾಕುವ ಮೂಲಕ ಬುಲ್ಸ್ ಗೆಲುವಿನ ರೂವಾರಿ ಎನಿಸಿದರು.