ಗೆಳೆಯ ಮಧುಕರ್ ಶೆಟ್ಟಿಯವರ ಸ್ಮಾರಕ ನಿರ್ಮಿಸಲು ಸರಕಾರದ ಚಿಂತನೆ : ಸಚಿವ ಖಾದರ್

ಕುಂದಾಪುರ: ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿಯವರ ಸ್ಮಾರಕ ನಿರ್ಮಿಸಲು ಸಂತೋಷ್ ಹೆಗ್ಡೆಯವರು ಆಗ್ರಹಿಸಿದ್ದಾರೆ. ಸಂತೋಷ್ ಹೆಗ್ಡೆಯವರ ಮಾತಿಗೆ ನನ್ನ ಸಂಪೂರ್ಣ ಬೆಂಬಲಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಹೇಳಿದರು. ಭಾನುವಾರ ಯಡಾಡಿಗೆ ಭೇಟಿ ನೀಡಿ ಐಪಿಎಸ್ ಮಧುಕರ್ ಶೆಟ್ಟಿ ಪಾರ್ಥೀವ ಶರೀರ ದರ್ಶನ ಮಾಡಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಗೆಳೆಯನನ್ನು ಕಳೆದುಕೊಂಡ ದುಃಖ: ಐದನೇ ತರಗತಿಯಿಂದ ಜೊತೆಯಾಗಿ ಓದಿದ್ದೆವು. ನನ್ನ […]

ದಕ್ಷ ಅಧಿಕಾರಿಯ ಅಂತಿಮ ದರ್ಶನಕ್ಕೆ ಕಣ್ಣೀರಾದ ಯಡಾಡಿ:ಹುಟ್ಟೂರ ಮಣ್ಣಲ್ಲಿ ಮಧುಕರ್ ಶೆಟ್ಟಿ ಲೀನ

 ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಲೋಕ ಬಿಟ್ಟು ಹೋಗಿಲ್ಲ, ಹುಟ್ಟೂರ  ಮಣ್ಣಲ್ಲೇ ಇದ್ದಾರೆ ಮತ್ತೆ ಹುಟ್ಟಿ ಬಂದೇ ಬರುತ್ತಾರೆ ಎಂದು ಕಣ್ಣೀರಾಗುತ್ತ ಯಡಾಡಿ ಭಾನುವಾರ ಮತ್ತಷ್ಟು ಮೌನವಾಯಿತು. ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪಾರ್ಥೀವ ಶರೀರದ ಅಂತಿಮ ಸಂಸ್ಕಾರ ಹುಟ್ಟೂರಾದ ಯಡಾಡಿ-ಮತ್ಯಾಡಿಯ ಮನೆಯಲ್ಲಿ ಭಾನುವಾರ ನೆರವೇರಿತು. ಬೆಳಿಗ್ಗೆ ೮ ಗಂಟೆಗೆ ಮಧುಕರ್ ಶೆಟ್ಟಿಯವರ ಪಾರ್ಥೀವ ಶರೀರ ಯಡಾಡಿ ಮತ್ಯಾಡಿಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. […]

ಕೋಟ ಮೂರ್ತೆದಾರರ ಸಂಘ: ಇ-ಸ್ಟಾಂಪಿಂಗ್ ,ಆರ್ ಟಿ ಸಿ ಸೌಲಭ್ಯ ಉದ್ಘಾಟನೆ

ಕೋಟ: ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ.  ಕೋಟ ,ಇಲ್ಲಿ  ಇ-ಸ್ಟಾಂಪಿಂಗ್  ,ಪಹಣಿಪತ್ರ  ಸೌಲಭ್ಯ ಉದ್ಘಾಟನೆ ಸಮಾರಂಭ ಡಿಸೆಂಬರ್ 30 ರಂದು ನಡೆಯಿತು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಇ-ಸ್ಟಾಂಪಿಂಗ್ ಹಾಗೂ ಕೋಟ ಕರ್ನಾಟಕ ಬ್ಯಾಂಕ್ ನ  ಮ್ಯಾನೇಜರ್ ಗಣೇಶ್ ಹೊಳ್ಳ ಪಹಣಿಪತ್ರ  ಸೌಲಭ್ಯ ಉದ್ಘಾಟಿಸಿದರು .ಮುಖ್ಯ ಅತಿಥಿಗಳಾಗಿ ಸಿಎ ಬ್ಯಾಂಕ್ ನ   ಅಧ್ಯಕ್ಷ  ಜಿ. ತಿಮ್ಮ ಪೂಜಾರಿ ಹಾಗೂ ವಕೀಲರಾದ ಅನಂತಪದ್ಮನಾಭ ಐತಾಳ್ ,ಸೋಮನಾಥ್ ಹೆಗಡೆ, ಜಿ ರಾಮಣ್ಣ ಶೆಟ್ಟಿ ,ಟಿ ಮಂಜುನಾಥ್, […]

ಸೂರು ಕೊಡಿಸಿದ ಅಧಿಕಾರಿಗೆ ಕೃತಜ್ಞತೆ

ಕುಂದಾಪುರ: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಅಂತ್ಯಕ್ರಿಯೆ ಭಾನುವಾರ ಕುಂದಾಪುರ ತಾಲೂಕಿನ ಯಡಾಡಿ -ಮತ್ಯಾಡಿ ಗ್ರಾಮದ ಫಾರ್ಮ್ ಹೌಸ್ ನಲ್ಲಿ ನೆರವೇರಿತು.ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ ,ತಾಯಿ ಪ್ರಫುಲ್ಲ  ಶೆಟ್ಟಿ ಅವರ ಸಮಾಧಿಯ ಪಕ್ಕದಲ್ಲಿ ಮಧುಕರ ಶೆಟ್ಟಿಯವರ ಅಂತ್ಯ ಸಂಸ್ಕಾರ ನಡೆಯಿತು.ದಕ್ಷ ಅಧಿಕಾರಿಯ ಸಾವಿಗೆ ಸಾವಿರಾರು ಜನರು ಕಂಬನಿ ಮಿಡಿದರು. ಮಧುಕರ್ ಶೆಟ್ಟಿ ಚಿಕ್ಕಮಗಳೂರು ಜಿಲ್ಲೆಯ ಎಸ್ಪಿ ಆಗಿದ್ದಾಗ ಯಲಗುಡಿಗೆ  ಗ್ರಾಮದ ಬಳಿ ಭೂಮಾಲೀಕನೊಬ್ಬನ ಒತ್ತುವರಿ ತೆರವುಗೊಳಿಸಿ ಮೂಲನಿವಾಸಿಗಳಿಗೆ ಜಮೀನು ಬಿಡಿಸಿ ಕೊಟ್ಟಿದ್ದರು. ಮಧುಕರ್ ಶೆಟ್ಟಿ […]

ಪೌಷ್ಟಿಕ ಆಹಾರವೂ ವಿಷವಾಗಬಹುದು ಜೋಕೆ ! ವಿರುದ್ದ ಆಹಾರ ಸೇವನೆ ಬಗ್ಗೆ ಡಾ.ಹರ್ಷಾ ಕಾಮತ್ ಹೇಳ್ತಾರೆ ಕೇಳಿ

ಆಯುರ್ವೇದದಲ್ಲಿ ಆಹಾರಕ್ಕೆ ಅಪಾರ ಮಹತ್ವವಿದೆ. ಆರೋಗ್ಯಕ್ಕೆ ಪೂರಕವಾದ ಆಹಾರ ಕ್ರಮವು ನಮ್ಮ ಆಯುಷ್ಯವನ್ನು ಹೆಚ್ಚಿಸುತ್ತದೆ. ಆದರೆ ನಿಮಗೆ ಗೊತ್ತಾ? ನಾವು ಸೇವಿಸುವ ಪೌಷ್ಟಿಕ ಆಹಾರ ಕೂಡ ವಿಷವಾಗಿ ಪರಿಣಮಿಸಬಹುದು,ಮತ್ತು ನಮ್ಮಆರೋಗ್ಯಕ್ಕೆ ಮಾರಕವಾಗಬಲ್ಲದು! ಹೌದು ಇದು ನಿಜ. ಇದರ ಉಲ್ಲೇಖ ಆಯುರ್ವೇದದಲ್ಲಿದೆ. ಬೇರೆಬೇರೆ ಕಾರಣಗಳಿಂದ ದಿನ ನಿತ್ಯದಲ್ಲಿ ಸೇವಿಸುವ ಆಹಾರವೇ ನಮ್ಮ ದೇಹದೊಳಗೆ ನಂಜಾಗಿ ಪರಿವರ್ತಿತವಾಗಿ ಕಾಲಕ್ರಮೇಣ ಬೇರೆ ಬೇರೆ ರೋಗಗಳನ್ನು ಉಂಟುಮಾಡಬಲ್ಲದು. ಇದನ್ನು ವಿರುದ್ಧ ಅನ್ನ ಅಥವಾ ವಿರುದ್ಧ ಆಹಾರ ಅಂತ ಕರೆಯುತ್ತೇವೆ. ಏನು ಹೇಳುತ್ತೆ ಆಯುರ್ವೇದ? […]