ಕೋಟ ಮೂರ್ತೆದಾರರ ಸಂಘ: ಇ-ಸ್ಟಾಂಪಿಂಗ್ ,ಆರ್ ಟಿ ಸಿ ಸೌಲಭ್ಯ ಉದ್ಘಾಟನೆ

ಕೋಟ: ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ.  ಕೋಟ ,ಇಲ್ಲಿ  ಇ-ಸ್ಟಾಂಪಿಂಗ್  ,ಪಹಣಿಪತ್ರ  ಸೌಲಭ್ಯ ಉದ್ಘಾಟನೆ ಸಮಾರಂಭ ಡಿಸೆಂಬರ್ 30 ರಂದು ನಡೆಯಿತು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಇ-ಸ್ಟಾಂಪಿಂಗ್ ಹಾಗೂ ಕೋಟ ಕರ್ನಾಟಕ ಬ್ಯಾಂಕ್ ನ  ಮ್ಯಾನೇಜರ್ ಗಣೇಶ್ ಹೊಳ್ಳ ಪಹಣಿಪತ್ರ  ಸೌಲಭ್ಯ ಉದ್ಘಾಟಿಸಿದರು .ಮುಖ್ಯ ಅತಿಥಿಗಳಾಗಿ ಸಿಎ ಬ್ಯಾಂಕ್ ನ   ಅಧ್ಯಕ್ಷ  ಜಿ. ತಿಮ್ಮ ಪೂಜಾರಿ ಹಾಗೂ ವಕೀಲರಾದ ಅನಂತಪದ್ಮನಾಭ ಐತಾಳ್ ,ಸೋಮನಾಥ್ ಹೆಗಡೆ, ಜಿ ರಾಮಣ್ಣ ಶೆಟ್ಟಿ ,ಟಿ ಮಂಜುನಾಥ್, ರಾಜು ಶ್ರೀಯಾನ್ ,ರವೀಂದ್ರ ಪೂಜಾರಿ ಹಾಗೂ ಸಂಘದ ಅಧ್ಯಕ್ಷ ಕೊರಗ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು ,ಸಂಘದ ಉಪಾಧ್ಯಕ್ಷರು ಹಾಗೂ ನಿರ್ದೇಶಕರು ,ಸಿಬ್ಬಂದಿ ವರ್ಗ ದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.