‘ಮೀನುಗಾರಿಕೆ ಬೋಟ್ ನಾಪತ್ತೆ ಪ್ರಕರಣ’ ಬೋಟ್ ಶೀಘ್ರ ಪತ್ತೆಗೆ ಅಗತ್ಯ ಕ್ರಮ: ಶಾಸಕ ಕೆ. ರಘುಪತಿ ಭಟ್

ಉಡುಪಿ: ಮಲ್ಪೆಯ ಬಂದರಿನಿಂದ ಡಿ.13ರಂದು ಎಂಟು ಮಂದಿ ಮೀನುಗಾರರನ್ನು ಹೊತ್ತು ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ಶಾಸಕ ಕೆ. ರಘುಪತಿ ಭಟ್ ಮಂಗಳವಾರ ಮೀನುಗಾರರೊಂದಿಗೆ ಸಭೆ ನಡೆಸಿದರು. ಬಳಿಕ ಮಾತನಾಡಿದ ಶಾಸಕರು, ಬೋಟ್ ಪತ್ತೆ ಹಚ್ಚಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ, ಕೋಸ್ಟ್ ಗಾರ್ಡ್, ಗೋವಾ ಪೊಲೀಸರು, ಕೇಂದ್ರ ಸರ್ಕಾರದೊಂದಿಗೆ ಸಹಿತ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಜೊತೆಗೂ ಮಾತುಕತೆ ನಡೆಸಿದ್ದೇವೆ. ಈ ಬಗ್ಗೆ ಶೀಘ್ರ ಸ್ಪಂದಿಸಿದ ಕೇಂದ್ರ ಸಚಿವ ಡಿ.ವಿ […]

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಕಡಿಯಾಳಿ ದೇಗುಲದಲ್ಲಿ ಸಾಮೂಹಿಕ ರಾಮತಾರಕ ಮಂತ್ರ ಜಪಪಠಣ 

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ವತಿಯಿಂದ ಕಡಿಯಾಳಿಯ ಮಹಿಷಮರ್ಧಿನಿ ದೇವಸ್ಥಾನದ ಕಾತ್ಯಾಯಿನಿ ಮಂಟಪದಲ್ಲಿ ಮಂಗಳವಾರ ಸಾಮೂಹಿಕ ರಾಮತಾರಕ ಮಂತ್ರ ಜಪಪಠಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹನುಮಾನ್ ಚಾಲೀಸ್ ಪಠಣ, ಶ್ರೀರಾಮ ಸಂಕೀರ್ತನೆ ನಡೆಯಿತು. ರಾಮದೇವರ ಪ್ರತಿಷ್ಠೆ, ಗಣಹೋಮ ಜರುಗಿತು. ಬಳಿಕ ನಡೆದ ಧಾರ್ಮಿಕ ಸಭಾಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದು ಪರಿಷತ್ ದಕ್ಷಿಣ ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ರಾಮಮಂದಿರ ಭಾರತ ದೇಶದ ಪರಂಪರೆಯ ಪ್ರತೀಕ. ಹಾಗಾಗಿ ಧಾರ್ಮಿಕ ಅನುಷ್ಠಾನಗಳ ಮೂಲಕ ರಾಮಮಂದಿರ […]

ಸಿಬಿಐ ಅಧಿಕಾರಿಗಳೆಂದು ಹೇಳಿ 50 ಸಾವಿರ ಮೌಲ್ಯದ ಚಿನ್ನದ ಸರ ದೋಚಿದ ಖದೀಮರು

ಉಡುಪಿ: ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಗಮನವನ್ನು ಬೇರೆಡೆಗೆ ಸೆಳೆದು ಅವರ ಗುತ್ತಿಗೆಯಲ್ಲಿದ್ದ 50 ಸಾವಿರ ಮೌಲ್ಯದ 24 ಗ್ರಾಂ ನ ಚಿನ್ನದ ಚೈನ್ ಅನ್ನು ಲೂಟಿ ಮಾಡಿದ ಘಟನೆ ಮಂಗಳವಾರ ಬೆಳಗ್ಗೆ ಅಂಬಾಗಿಲು ಜಂಕ್ಷನ್ ನ ಮೀನುಮಾರುಕಟ್ಟೆಯ ಬಳಿ ನಡೆದಿದೆ. ಚಿನ್ನದ ಚೈನ್ ಕಳೆದುಕೊಂಡವರನ್ನು ತಾಂಗದಡಿ ಮಾಂಡವಿ ಪ್ರಿನ್ಸ್ ಪ್ಯಾಲೇಸ್ ನಿವಾಸಿ ವೆಂಕಟರಮಣ್ಣ ಆಚಾರ್ಯ (68) ಎಂದು ಗುರುತಿಸಲಾಗಿದೆ. ಅವರು ಇಂದು ಬೆಳಗ್ಗೆ 8.45 ಸುಮಾರಿಗೆ ಹೂವು ತರಲೆಂದು ಅಂಬಾಗಿಲು ಜಂಕ್ಷನ್ […]

ಪೇಜಾವರ ಶ್ರೀಗಳ ಅಭಿನಂದನಾ ಸಮಾರಂಭಕ್ಕೆ ರಾಷ್ಟ್ರಪತಿ ಆಗಮನ

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಸನ್ಯಾಸಾಶ್ರಮ ಸ್ವೀಕರಿಸಿ 80ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಶ್ರೀಗಳ ಶಿಷ್ಯರು ಹಾಗೂ ಅಭಿಮಾನಿಗಳು ಡಿ. 27 ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ನಾಗರಿಕ ಅಭಿನಂದನಾ ಸಮಾರಂಭವನ್ನು ಪೇಜಾವರ ಮಠದ ಎದುರಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಅಭಿವಂದನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಗವಹಿಸುತ್ತಿರುವುದರಿಂದ ಕಾರ್ಯಕ್ರಮದ ಸ್ಥಳ ನಿಗದಿಯ ಕುರಿತು ಪೊಲೀಸ್ ಇಲಾಖೆ ಹಾಗೂ ಮಠದ ಸಿಬ್ಬಂದಿ ಹಲವು ಸಭೆಗಳನ್ನು ನಡೆಸಿದ್ದರು. ಈ ಹಿಂದೆ ಭದ್ರತೆ ಹಾಗೂ ಇತರ ಕಾರಣಗಳಿಂದ ಮಠದ ರಾಜಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ರಾಷ್ಟ್ರಪತಿ ಭವನದ […]

ಡಿ.27: ಬೆಳಿಗ್ಗೆ 7ರಿಂದ 2ರ ವರೆಗೆ ಶ್ರೀಕೃಷ್ಣಮಠದಲ್ಲಿ ದೇವರ ದರ್ಶನ ಇಲ್ಲ

ಉಡುಪಿ: ಉಡುಪಿ ಶ್ರೀಕೃಷ್ಣಮಠಕ್ಕೆ ಡಿ. 27ರಂದು ರಾಷ್ಟ್ರಪತಿಗಳು ಭೇಟಿ ನೀಡಲಿರುವುದರಿಂದ ಅಂದು ಬೆಳಿಗ್ಗೆ 7ಗಂಟೆಯಿಂದ 2ರ ವರೆಗೆ ದೇವರ ದರ್ಶನ ಇರುವುದಿಲ್ಲ. 2 ಗಂಟೆಯ ಬಳಿಕ ಭಕ್ತಾದಿಗಳಿಗೆ ಭೋಜನ ಪ್ರಸಾದದ ವ್ಯವಸ್ಥೆ ಇರುತ್ತದೆ ಎಂದು ಮಠದ ಪ್ರಕಟಣೆ ತಿಳಿಸಿದೆ.