ಅವನ್‌ ಮೋಟರ್ಸ್‌- ವಿದ್ಯುತ್‌ ಚಾಲಿತ ಸ್ಕೂಟರ್‌ ಮಾರುಕಟ್ಟೆಗೆ

 ಬೆಂಗಳೂರು: ವಿದ್ಯುತ್‌ ಚಾಲಿತ ಸ್ಕೂಟರ್‌ ತಯಾರಿಕಾ ಸಂಸ್ಥೆ ಅವನ್‌ ಮೋಟರ್ಸ್‌, ಲಿಥಿಯಂ ಬ್ಯಾಟರಿ ಚಾಲಿತ ಸ್ಕೂಟರ್‌ಗಳನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ. ಪುಣೆಯ ತಯಾರಿಕಾ ಘಟಕದಲ್ಲಿ ಈ ಸ್ಕೂಟರ್‌ ತಯಾರಿಸಲಾಗುತ್ತಿದೆ. ಸುಮಾರು 70 ಕೆ.ಜಿ ತೂಕದ ಈ ಸ್ಕೂಟರ್‌ನಲ್ಲಿ ಇಬ್ಬರು ಆರಾಮವಾಗಿ ಪ್ರಯಾಣಿಸಬಹುದು. 4 ಗಂಟೆ ಕಾಲ ಚಾರ್ಜ್‌ ಮಾಡಿದರೆ 60 ಕಿ. ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಎಂದು ಸಂಸ್ಥೆಯ ವಹಿವಾಟು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಪಂಕಜ್ ತಿವಾರಿ ಅವರು ತಿಳಿಸಿದ್ದಾರೆ. ಈ ಸ್ಕೂಟರ್‌ನ ಎಕ್ಸ್‌ಷೋರೂಂ […]

ಕೆಲಸದಲ್ಲಿ ವಿಳಂಬವಾಗುವುದೂ ಭ್ರಷ್ಟಾಚಾರ: ಸುನಿಲ್ ಕುಮಾರ್

ಕಾರ್ಕಳ : ಸರಕಾರಿ ನೌಕರರು ಜನಸೇವೆ ಮಾಡಲು ಹಣ ಪಡೆದುಕೊಂಡರೆ ಅದು ಭ್ರಷ್ಟಾಚಾರ. ಜತೆಗೆ ಕರ್ತವ್ಯದ ಕೆಲಸ ವಿಳಂಬವಾಗಿ ಮಾಡಿದರೂ ಭ್ರಷ್ಟಾಚಾರಕ್ಕೆ ಪರೋಕ್ಷ ಪ್ರೋತ್ಸಾಹ ನೀಡಿದಂತೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಅವರು ಹೇಳಿದರು. ಬೆಳ್ಮಣ್ ಜಿ.ಪಂ. ಕ್ಷೇತ್ರದ ಪಿಡಿಒ, ಗ್ರಾಮ ಲೆಕ್ಕಿಗರ ಹಾಗೂ ಇತರ ಪಂಚಾಯತ್ ಸಿಬಂದಿಗೆ ಡಿ. ೨೫ರಂದು ತಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ ಒಂದು ದಿನದ ಪುನಶ್ಚೇತನ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಸರಕಾರಿ ನೌಕರರು ತಾವು ಮಾದರಿಯಾಗಿ, ಯಶಸ್ವಿ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದೆವೆಯೆ? […]

ಯೋಗದಲ್ಲಿ ದೇಶಕ್ಕೆ ಕೀರ್ತಿ ತಂದಳು, ನಿಟ್ಟೆಯ ಹೆಣ್ಣುಮಗಳು: ಈಕೆಯ ಕನಸಿಗೆ ನೀವೂ ಬೆಳಕಾಗಿ,ಹಳ್ಳಿ ಪ್ರತಿಭೆಗೆ ನೆರವಾಗಿ

ನಾಝಿಯಾ. ನಾಲ್ಕು ಮಕ್ಕಳ ತಾಯಿ. ಎರಡು ವರ್ಷದ ಹಿಂದೆ ಗಂಡನನ್ನು ಕಳೆದುಕೊಂಡಿರುವ ಇವರದು ಟೈಲರಿಂಗ್ ವೃತ್ತಿ. ಮೊದಲ ಮಗನದು ಫೋಟೋಗ್ರಫಿ ಉದ್ಯೋಗ. ಉಳಿದವರು ಬಿ.ಕಾಂ, ನರ್ಸಿಂಗ್ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳು. 41 ವರ್ಷದ ನಾಝಿಯಾ ಅವರಿಗೆ ಕುಟುಂಬ ನಿರ್ವಹಣೆಯೇ ದೊಡ್ಡ ಸವಾಲು. ಅದರ ನಡುವೆಯೂ ಅವರ ಸಾಧನೆಯ ಕನಸು ಯಾರನ್ನೂ ಬೆರಗುಗೊಳಿಸುವಂತದ್ದು. ಯೋಗಾಸನ ಸ್ಪರ್ಧೆಗಳಲ್ಲಿ ರಾಜ್ಯ, ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಅವರೀಗ 2019ರ ಮೇ ತಿಂಗಳಲ್ಲಿ ಥಾಯ್ಲೆಂಡಿನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅವಕಾಶವೇ ನನಗೆ […]

ಕುರ್ಕಾಲು ಗ್ರಾಮ  ಪಂಚಾಯತ್ ಮಹಿಳಾ  ತಂಡಕ್ಕೆ ಅಭಿನಂದನ ಕಾರ್ಯಕ್ರಮ

ಉಡುಪಿ: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ ಶಿವರಾಮ ಕಾರಂತ ಪ್ರತಿಷ್ಠಾನ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತದ ಜನಪ್ರತಿನಿಧಿಗಳಿಗಾಗಿ ನಡೆದ ಕ್ರೀಡಾಕೂಟದಲ್ಲಿ ತ್ರೋ ಬಾಲ್ ಪಂದ್ಯದಲ್ಲಿ  ಸತತ ಮೂರನೇ ಬಾರಿಗೆ ಪ್ರಥಮ ಪ್ರಶಸ್ತಿ ಗೆದ್ದುಕೊಂಡ  ಕುರ್ಕಾಲು ಗ್ರಾಮ  ಪಂಚಾಯತ್ ಮಹಿಳಾ  ತಂಡಕ್ಕೆ ಅಭಿನಂದನ ಕಾರ್ಯಕ್ರಮ ಮಂಗಳವಾರ ಕುರ್ಕಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ  ತರಬೇತುದಾರರಾದ ಸಂತೋಷ್  ಶೆಟ್ಟಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.  ಕುರ್ಕಾಲು ಗ್ರಾಮ ಪಂಚಾಯತ್  ಸದಸ್ಯ  ದಿನಕರ ಶೆಟ್ಟಿ, ಕಾರ್ಯಕ್ರಮವನ್ನು ಉದ್ದೇಶಿಸಿ […]

ಉಡುಪಿ :ರಾಷ್ಟ್ರೀಯ ಗ್ರಾಹಕರ ದಿನಾಚರಣೆ 

ಉಡುಪಿ: ಇಲ್ಲಿನ ಕಡಿಯಾಳಿ ಕಮಲಾ ಬಾಯಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಯಿತು.  ಕಾರ್ಯಕ್ರಮವನ್ನು ಕಮಲಾ ಬಾಯಿ ಹೈಸ್ಕೂಲ್‍ನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲತಾ ಆನಂದ ಶೇರೆಗಾರ್ ಉದ್ಘಾಟಿಸಿ, ಗ್ರಾಹಕರು ವಸ್ತುಗಳನ್ನು ಖರೀದಿಸುವ ಮುನ್ನ ಸಮಗ್ರವಾಗಿ ಪರಿಶೀಲಿಸಬೇಕು. ಪ್ಯಾಕೆಟ್  ಮೇಲಿನ ಅವಧಿ ಮೀರುವ ದಿನಾಂಕ, ಉತ್ಪಾದನಾ ದಿನಾಂಕಗಳನ್ನು ಪರಿಶೀಲಿಸಿ ವಸ್ತುಗಳನ್ನು ಖರೀದಿಸಬೇಕು. ಖರೀದಿಸುವ ವಸ್ತುಗಳಲ್ಲಿ ಯಾವುದೇ ದೋಷಗಳಿದ್ದರೆ ಗ್ರಾಹಕ ವೇದಿಕೆಗಳ ಮೂಲಕ ದೂರು ದಾಖಲಿಸಿ ಪರಿಹಾರ ಪಡೆಯಬಹುದಾಗಿದ್ದು, ವ್ಯಾಪಾರಿಗಳಿಂದ ಮೋಸ ಹೋಗದಂತೆ ಸದಾ […]