ಪೇಜಾವರ ಶ್ರೀಪಾದರ ಬಗ್ಗೆ ಅಮೀನ್ ಮಟ್ಟು ಹೇಳಿಕೆ ಖಂಡನೀಯ :ಕೋಟ
ಉಡುಪಿ: ಪೇಜಾವರ ಶ್ರೀಪಾದರ ಬಗ್ಗೆ ಚಿಂತಕ ದಿನೇಶ್ ಅಮೀನ್ ಮಟ್ಟು ಆಡಿದ ಅವಹೇಳನಕಾರಿ ಮಾತಿನಿಂದ ಸಮಸ್ತ ಹಿಂದೂ ಧರ್ಮಕ್ಕೆ ನೋವಾಗಿದೆ. ಮಟ್ಟು ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉಡುಪಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಚಿಂತಕ ದಿನೇಶ್ ಅಮೀನ್ ಮಟ್ಟು ‘ಪೇಜಾವರ ಶ್ರೀಗಳಿಗೆ ಅರಳುಮರಳು’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಖಂಡನೆ ವ್ಯಕ್ತಪಡಿಸಿದ ಕೋಟ, ಅಖಂಡ ಹಿಂದೂ ಧರ್ಮದ ಶ್ರೇಷ್ಠ ಸಂನ್ಯಾಸಿ ಪೇಜಾವರ […]
ಮಲ್ಪೆ ಮೀನುಗಾರಿಕಾ ದೋಣಿ ನಾಪತ್ತೆ ಪ್ರಕರಣ :ತನಿಖಾದಳ ರಚಿಸಲು ಪ್ರಮೋದ್ ಮಧ್ವರಾಜ್ ಆಗ್ರಹ
ಉಡುಪಿ: ಡಿ.13ರಂದು ಆಳ ಸಮುದ್ರ ಮೀನುಗಾರಿಕೆ ನಡೆಸಲು “ಸುವರ್ಣ ತ್ರಿಬುಜ” ಮೀನುಗಾರಿಕಾ ದೋಣಿಯಲ್ಲಿ 8 ಜನರ ತಂಡವು ತೆರಳಿದ್ದು ಡಿ. 15ರ ವರೆಗೆ ಮೀನುಗಾರರು ಸಂಪರ್ಕದಲ್ಲಿದ್ದರೂ ಬಳಿಕ ಸಂಪರ್ಕಕ್ಕೆ ಸಿಗದೇ ದೋಣಿ ಸಹಿತ ಮೀನುಗಾರರು ಕಾಣೆಯಾಗಿರುವ ಬಗ್ಗೆ ಪ್ರಮೋದ್ ಮಧ್ವರಾಜ್ ಅವರ ಮನೆಗೆ ತೆರಳಿ ಮೀನುಗಾರ ಮುಖಂಡರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್, ಕುಮಾರಸ್ವಾಮಿ ಮತ್ತು ಡಿಜಿಪಿ ನೀಲಮಣಿ ರಾಜು ಅವರಿಗೆ ಫೋನ್ ಮುಖಾಂತರ ಸಂಪರ್ಕಿಸಿ ಈ ವಿಚಾರವನ್ನು ಸರಕಾರ […]
ಜ.೧೧ಕ್ಕೆ ‘ದೇಯಿ ಬೈದಿತಿ – ಗೆಜ್ಜೆ ಗಿರಿ ನಂದನೊಡು’ ಚಿತ್ರ ತೆರಿಗೆ
ಉಡುಪಿ: ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದಿತಿ ಅವರ ಜೀವನದ ಕಥೆ ಆದರಿತ ‘ದೇಯಿ ಬೈದೆತಿ– ಗೆಜ್ಜೆ ಗಿರಿ ನಂದನೊಡು’ ಚಿತ್ರ ಜನವರಿ ೧೧ಕ್ಕೆ ತೆರೆಗೆ ಬರಲಿದೆ. ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿ ಯು ಪ್ರಮಾಣಪತ್ರವನ್ನು ನೀಡಿದ್ದಾರೆ. ದೇಯಿ ಪಟ್ಟ ಶ್ರಮದ ಚಿತ್ರ ಐನೂರು ವರ್ಷಗಳ ಹಿಂದೆ ಓರ್ವ ಮಹಿಳೆ ತನ್ನ ನಾಡಿಗೋಸ್ಕರ ಯಾವ ರೀತಿ ತನ್ನ ಜೀವನವನ್ನೇ ಬಲಿದಾನ ಮಾಡುತ್ತಾರೆ ಎನ್ನುವುದೇ ಚಿತ್ರದ ಥೀಮ. ಕೋಟಿ-ಚೆನ್ನಯರ […]
ಬಾರಾಳಿ ಸ.ಹಿ.ಪ್ರಾ. ಶಾಲಾ ವಜ್ರಮಹೋತ್ಸವ ಸಂಭ್ರಮ : ಹಳೆವಿದ್ಯಾರ್ಥಿಗಳ ಸಮ್ಮಿಲನ, ಸಾಧಕರಿಗೆ ಸಮ್ಮಾನ
ಉಡುಪಿ: ಬಾರಾಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಜ್ರಮಹೋತ್ಸವ ಸಮಾರಂಭ ಹಾಗೂ ಹಳೆವಿದ್ಯಾರ್ಥಿಗಳ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಡಿ.23ರಂದು ಶಾಲಾ ವಠಾರದ ದಿ| ಸದಾಶಿವ ಹೆಗ್ಡೆ ಬಾಳ್ಕುದ್ರು ಕೆಳಮನೆ ವೇದಿಕೆಯಲ್ಲಿ ಜರಗಿತು.ಸಭಾಕಾರ್ಯಕ್ರಮವನ್ನು ಮಾಜಿ ಲೋಕಾಯುಕ್ತ ನ್ಯಾ|ಮೂ| ಎನ್. ಸಂತೋಷ್ ಹೆಗ್ಡೆ ಉದ್ಘಾಟಿಸಿದರು. ಹೆಗ್ಗುಂಜೆ ಗ್ರಾ.ಪಂ .ಅಧ್ಯಕ್ಷ ಗಣೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನಾ ಇಲಾಖೆಯ ಅಪರ ನಿರ್ದೇಶಕ ಶಾನಾಡಿ ಅಜಿತ್ ಕುಮಾರ್ ಶೆಟ್ಟಿ, ವಜ್ರಮಹೋತ್ಸವ ಸಮಿತಿ ಅಧ್ಯಕ್ಷ […]
ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ವಿಫಲ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಫಲವಾಗಿಲ್ಲ, ಇದರ ವಿಫಲತೆ ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಜಾಹೀರಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಜಂಟಿ ಸರ್ಕಾರ ಮೊದಲು ರೂ.53 ಸಾವಿರ ಕೋಟಿ ರೈತರ ಕೃಷಿ ಸಾಲಮನ್ನಾ ಮಾಡುವ ಭರವಸೆ ನೀಡಿತ್ತು, ಆದರೆ ಬಳಿಕ ಅದನ್ನು ರೂ. 34 ಸಾವಿರ ಕೋಟಿಗೆ ಇಳಿಸಿತ್ತು. ಅದನ್ನು ಕಳೆದ ಬಜೆಟ್ನಲ್ಲಿ ರೂ. 6.5 […]