ಮಲ್ಪೆ ಮೀನುಗಾರಿಕಾ ದೋಣಿ ನಾಪತ್ತೆ ಪ್ರಕರಣ :ತನಿಖಾದಳ ರಚಿಸಲು ಪ್ರಮೋದ್ ಮಧ್ವರಾಜ್ ಆಗ್ರಹ

 
ಉಡುಪಿ: ಡಿ.13ರಂದು ಆಳ ಸಮುದ್ರ ಮೀನುಗಾರಿಕೆ ನಡೆಸಲು “ಸುವರ್ಣ ತ್ರಿಬುಜ” ಮೀನುಗಾರಿಕಾ ದೋಣಿಯಲ್ಲಿ 8 ಜನರ ತಂಡವು ತೆರಳಿದ್ದು ಡಿ. 15ರ ವರೆಗೆ ಮೀನುಗಾರರು ಸಂಪರ್ಕದಲ್ಲಿದ್ದರೂ ಬಳಿಕ ಸಂಪರ್ಕಕ್ಕೆ ಸಿಗದೇ ದೋಣಿ ಸಹಿತ ಮೀನುಗಾರರು ಕಾಣೆಯಾಗಿರುವ ಬಗ್ಗೆ  ಪ್ರಮೋದ್ ಮಧ್ವರಾಜ್ ಅವರ ಮನೆಗೆ ತೆರಳಿ ಮೀನುಗಾರ ಮುಖಂಡರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್,  ಕುಮಾರಸ್ವಾಮಿ ಮತ್ತು ಡಿಜಿಪಿ ನೀಲಮಣಿ ರಾಜು ಅವರಿಗೆ ಫೋನ್ ಮುಖಾಂತರ ಸಂಪರ್ಕಿಸಿ ಈ ವಿಚಾರವನ್ನು ಸರಕಾರ ಗಂಬೀರವಾಗಿ ಪರಿಗಣಿಸಿ ಕರಾವಳಿ ಕಾವಲುಪಡೆ, ಪೋಲಿಸ್ ಇಲಾಖೆಯು ಮೀನುಗಾರರ ಸಹಕಾರದೊಂದಿಗೆ ಮೀನುಗಾರರ ಪತ್ತೆಗೆ ವಿಶೇಷ ತನಿಖಾ ದಳವನ್ನು ಶೀಘ್ರ ರಚಿಸಿ ಅವರು ಕ್ಷೇಮದಿಂದ ಮರಳಿ ಬರಲು ಕ್ರಮವಹಿಸುವಂತೆ ಆಗ್ರಹಿಸಿದ್ದಾರೆ. ಜೊತೆಗೆ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಮತ್ತು ಕರಾವಳಿ ಕಾವಲು ಪಡೆ ಪೋಲಿಸ್ ವರಿಷ್ಟಾಧಿಕಾರಿಯವರಿಗೆ ಕರೆ ಮಾಡಿ ತನಿಖೆ ಚುರುಕುಗೊಳಿಸುವಂತೆ ತಿಳಿಸಿದ್ದಾರೆ.
ಪ್ರಮೋದ್ ಮಧ್ವರಾಜ್ ರವರು ಮೀನುಗಾರ ಮುಖಂಡರಿಗೆ ಧೈರ್ಯ ತುಂಬಿ ಸರಕಾರದ ಮೂಖೇನ ಅಗತ್ಯ ಕ್ರಮವಹಿಸಲು ಎಲ್ಲಾ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದೇನೆ ಎಂದವರು ಹೇಳಿದ್ದಾರೆ.