ಬಾರಾಳಿ ಸ.ಹಿ.ಪ್ರಾ. ಶಾಲಾ ವಜ್ರಮಹೋತ್ಸವ ಸಂಭ್ರಮ : ಹಳೆವಿದ್ಯಾರ್ಥಿಗಳ ಸಮ್ಮಿಲನ, ಸಾಧಕರಿಗೆ ಸಮ್ಮಾನ

ಉಡುಪಿ: ಬಾರಾಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಜ್ರಮಹೋತ್ಸವ ಸಮಾರಂಭ ಹಾಗೂ ಹಳೆವಿದ್ಯಾರ್ಥಿಗಳ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಡಿ.23ರಂದು ಶಾಲಾ ವಠಾರದ ದಿ| ಸದಾಶಿವ ಹೆಗ್ಡೆ ಬಾಳ್ಕುದ್ರು ಕೆಳಮನೆ ವೇದಿಕೆಯಲ್ಲಿ ಜರಗಿತು.
ಸಭಾಕಾರ್ಯಕ್ರಮವನ್ನು ಮಾಜಿ ಲೋಕಾಯುಕ್ತ ನ್ಯಾ|ಮೂ| ಎನ್. ಸಂತೋಷ್ ಹೆಗ್ಡೆ ಉದ್ಘಾಟಿಸಿದರು. ಹೆಗ್ಗುಂಜೆ ಗ್ರಾ.ಪಂ .ಅಧ್ಯಕ್ಷ ಗಣೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನಾ ಇಲಾಖೆಯ ಅಪರ ನಿರ್ದೇಶಕ ಶಾನಾಡಿ ಅಜಿತ್ ಕುಮಾರ್ ಶೆಟ್ಟಿ, ವಜ್ರಮಹೋತ್ಸವ ಸಮಿತಿ  ಅಧ್ಯಕ್ಷ ವಿಜಯನಾಥ್ ಹೆಗ್ಡೆ, ಜಿ.ಪಂ. ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಗಣೇಶ್ ಕ್ಯಾಶ್ಯೂ ಇಂಡಸ್ಟ್ರಿಯ ಗಣೇಶ್ ಕಿಣಿ ಬೆಳ್ವೆ, ಟೀಚರ್ಸ್ ಕೋ-ಅಪರೇಟಿವ್ ಬ್ಯಾಂಕ್‍ನ ಅಧ್ಯಕ್ಷ ಕಿಶನ್‍ರಾಜ್ ಶೆಟ್ಟಿ , ರಾಘವ ಶೆಟ್ಟಿ , ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಿಯದರ್ಶನ್ ಶೆಟ್ಟಿ , ಎಸ್‍ಡಿಎಂಸಿ ಅಧ್ಯಕ್ಷ ರಮೇಶ್ ಅಚಾರ್ಯ, ಹರಿಪ್ರಸಾದ್ ಶೆಟ್ಟಿ , ಗಣೇಶ್ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ದಲ್ಲಿ ಶಾಲೆಯ ವೆಬ್‍ಸೈಟ್ www.ghpsbarali.inಅನ್ನು ಲೋಕಾರ್ಪಣೆಗೊಳಿಸಲಾಯಿತು.

ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕರಾದ ಕೃಷ್ಣಮೂರ್ತಿ ರಾವ್, ರಮೇಶ್ ಹೆಗ್ಡೆ , ರಘುರಾಮ್ ಶೆಟ್ಟಿ , ಗಣಪತಿ.ಎಂ., ಚಂದ್ರ ಜಿ.ಶೆಟ್ಟಿ , ಪದ್ಮಿನಿ ಅವರನ್ನು ಸಂಸ್ಥೆ ಹಾಗೂ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಲೋಕೇಶ್(ಕ್ರೀಡೆ), ಮಣಿಕಂಠ (ಕ್ರೀಡೆ), ಚೈತ್ರಾ .ಜೆ ಶೆಟ್ಟಿ (ಶಿಕ್ಷಣ), ಡಾ| ರಿತೇಶ್ ಶೆಟ್ಟಿ (ವೈದ್ಯಕೀಯ), ಮಮತಾ ಹೆಗ್ಡೆ (ಸಾಹಿತ್ಯ), ನರಸಿಂಹ ಮರಕಾಲ(ಕಲೆ), ರಾಜಾರಾಮ್ (ದೈಹಿಕ ಶಿಕ್ಷಕ)ಅವರನ್ನು ಸಂಸ್ಥೆ ಹಾಗೂ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.