ಜೋಕೆ ನಾನು ಬಳ್ಳಿಯ ಮಿಂಚು;ಉಡುಪಿ ಪ್ರತಿಭೆ ಐರಾ ಅಚಾರ್ಯ ಹಾಡಿದ ಕೆಜಿಎಫ್ ಹಾಡು ಈಗ ಸೂಪರ್ ಹಿಟ್

ಉಡುಪಿ: ಪ್ರಶಾಂತ ನೀಲ್‌ ನಿರ್ದೇಶನ,ಯಶ್‌ ನಾಯಕ ನಟನಾಗಿರುವ “ಕೆಜಿಎಫ್’ ಬಹುಭಾಷಾ ಸಿನೆಮಾದಲ್ಲಿ ಉಡುಪಿಯ ಎಂಜಿಎಮ್ ಕಾಲೇಜ್ ಪಿಯು ವಿದ್ಯಾರ್ಥಿನಿ  ಐರಾ ಆಚಾರ್ಯ ಹಾಡಿರುವ “ಜೋಕೆ ನಾನು ಬಳ್ಳಿಯ ಮಿಂಚು’ ಹಾಡನ್ನು ಸಿನೆಮಾ ಬಿಡುಗಡೆಯಾಗುವ ಮೊದಲೇ ಯೂಟ್ಯೂಬ್‌ನಲ್ಲಿ 1.8 ಮಿಲಿಯ ಮಂದಿ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಚಿತ್ರಕ್ಕೆ ರವಿ ಬಸ್ರುರ್ ಅವರ ಸಂಗೀತವಿದ್ದು 1970ರ ದಶಕದಲ್ಲಿ ಡಾ.ರಾಜ್‌ಕುಮಾರ್‌ ಅಭಿನಯಿಸಿದ್ದ “ಪರೋಪಕಾರಿ’ ಚಿತ್ರದಲ್ಲಿ ಎಲ್‌.ಆರ್‌. ಈಶ್ವರಿ ಈ ಹಾಡನ್ನು ಹಾಡಿದ್ದರು. ಇದೀಗ ಐರಾ ಆಚಾರ್ಯ ಅವರು “ಕೆಜಿಎಫ್’ನಲ್ಲಿ ವಿಭಿನ್ನ ಶೈಲಿಯಲ್ಲಿ […]

ಜ.4 :ನಿಟ್ಟೆ ಕ್ಯಾಂಪಸ್ ನಲ್ಲಿ ನೇರ ನೇಮಕಾತಿ ಕಾರ್ಯಕ್ರಮ

ಕಾರ್ಕಳ: ಬೆಂಗಳೂರಿನ ಪ್ರತಿಷ್ಠಿತ ಅಕ್ಸೆoಚರ್  ಸಂಸ್ಥೆ ಜ.4ರಂದು ಬೆಳಗ್ಗೆ 9ಕ್ಕೆ ಕಾರ್ಕಳದ ಡಾ. ನಿಟ್ಟೆ ಶಂಕರ ಅಡ್ಯಂತಾಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ಯಾಂಪಸ್ ನೇರ ನೇಮಕಾತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಕಳ, ಮಂಗಳೂರು,ಉಡುಪಿ ಆಸುಪಾಸಿನ ಯಾವುದೇ ಪದವಿ ಹೊಂದಿರುವ ವಿದ್ಯಾರ್ಥಿಗಳು ನೇರ ನೇಮಕಾತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ . ಮಾಹಿತಿಗೆ ಡಾ.ನಿಟ್ಟೆ ಶಂಕರ ಅಡ್ಯಂತಾಯ ಪ್ರಥಮ ದರ್ಜೆ ಕಾಲೇಜಿನ ನೇಮಕಾತಿ ವಿಭಾಗವನ್ನು ಸಂಪರ್ಕಿಸಬಹುದು ;9448638210 , 7892371993  

ರವಿಕಟಪಾಡಿ ಸ್ನೇಹಿತರ ಬಳಗದಿಂದ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ 16 ಲಕ್ಷ ಧನಸಹಾಯ

ಉಡುಪಿ: ಅನಾರೋಗ್ಯ ಪೀಡಿತ ಮಕ್ಕಳಿಗೆ ಧನಸಹಾಯ ಮಾಡುವ ಉದ್ದೇಶದಿಂದ ಶ್ರೀಕೃಷ್ಣಾಜನ್ಮಾಷ್ಟಮಿಯ ವೇಷಧಾರಿ ರವಿ ಕಟಪಾಡಿ ಹಾಗೂ ಅವರ ಸ್ನೇಹಿತರು ಸ್ಥಾಪಿಸಿದ ಮಿಲಾಪ್ ಅಭಿಯಾನಕ್ಕೆ ಜಗತ್ತಿನಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಒಟ್ಟು 16 ಲಕ್ಷ ರೂಪಾಯಿಗಳು ದೇಣಿಗೆಯ ರೂಪದಲ್ಲಿ ಸಂಗ್ರಹವಾಗಿದೆ ಎಂದು ಸಮಾಜ ಸೇವಕ ಮಹೇಶ್ ಶೆಣೈ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಮೊತ್ತವನ್ನು ರವಿ ಕಟಪಾಡಿ ಸ್ನೇಹಿತರು ಡಿ. 24ರಂದು ಸಂಜೆ 4.30ಕ್ಕೆ ಕಟಪಾಡಿ ವಿಜಯ ಬ್ಯಾಂಕ್ ಬಳಿ ನಡೆಯುವ ಕಾರ್ಯಕ್ರಮದಲ್ಲಿ ಊರಿನ ಹಿರಿಯರು, ನಾಗರಿಕರ ಸಮ್ಮುಖದಲ್ಲಿ 5 ಮಂದಿ ಅನಾರೋಗ್ಯ ಪೀಡಿತ […]

ಕಾಪು: ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕೊಲೆಗೈದಿರುವ ಶಂಕೆ

  ಕಾಪು: ಕಾಪುವಿನ ಮಾರ್ಕೆಟ್ ಬಳಿ ಇಂದು ಮುಂಜಾನೆ ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತದೇಹದ ಬಳಿ ರಕ್ತದ ಕಲೆ ಅಂಟಿಕೊಂಡಿರುವ ಕಲ್ಲು ಸಿಕ್ಕಿದ್ದು, ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಕಾಪು ಠಾಣೆಯ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಉಡುಪಿಯಲ್ಲಿ ಭರತಮುನಿ ಜಯಂತ್ಯುತ್ಸವ

  ಉಡುಪಿ: ರಾಧಾಕೃಷ್ಣ ನೃತ್ಯನಿಕೇತನ ಸಂಸ್ಥೆಯು ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಡಿ. 25ರಂದು ಬೆಳಗ್ಗೆ 11 ಗಂಟೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಭರತಮುನಿ ಜಯಂತ್ಯುತ್ಸವವನ್ನು ಆಯೋಜಿಸಿದೆ.  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನೃತ್ಯಗುರು ವಿದುಷಿ ವೀಣಾ ಎಂ. ಸಾಮಗ, ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಅದಮಾರು ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅಧ್ಯಕ್ಷತೆಯನ್ನು ವಹಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ […]