ಉಡುಪಿ: ಪ್ರಶಾಂತ ನೀಲ್ ನಿರ್ದೇಶನ,ಯಶ್ ನಾಯಕ ನಟನಾಗಿರುವ “ಕೆಜಿಎಫ್’
ಬಹುಭಾಷಾ ಸಿನೆಮಾದಲ್ಲಿ ಉಡುಪಿಯ ಎಂಜಿಎಮ್ ಕಾಲೇಜ್ ಪಿಯು ವಿದ್ಯಾರ್ಥಿನಿ ಐರಾ ಆಚಾರ್ಯ ಹಾಡಿರುವ “ಜೋಕೆ ನಾನು ಬಳ್ಳಿಯ ಮಿಂಚು’ ಹಾಡನ್ನು ಸಿನೆಮಾ ಬಿಡುಗಡೆಯಾಗುವ ಮೊದಲೇ ಯೂಟ್ಯೂಬ್‌ನಲ್ಲಿ 1.8 ಮಿಲಿಯ ಮಂದಿ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಚಿತ್ರಕ್ಕೆ ರವಿ ಬಸ್ರುರ್ ಅವರ ಸಂಗೀತವಿದ್ದು 1970ರ ದಶಕದಲ್ಲಿ ಡಾ.ರಾಜ್‌ಕುಮಾರ್ ಅಭಿನಯಿಸಿದ್ದ “ಪರೋಪಕಾರಿ’ ಚಿತ್ರದಲ್ಲಿ ಎಲ್.ಆರ್. ಈಶ್ವರಿ ಈ ಹಾಡನ್ನು ಹಾಡಿದ್ದರು. ಇದೀಗ ಐರಾ ಆಚಾರ್ಯ ಅವರು “ಕೆಜಿಎಫ್’ನಲ್ಲಿ ವಿಭಿನ್ನ ಶೈಲಿಯಲ್ಲಿ ಹಾಡಿ ಮೆಚ್ಚುಗೆ ಗಳಿಸಿದ್ದಾರೆ. ಈ ಸಿನೆಮಾ ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಗಳಿಗೂ ಡಬ್ ಆಗಿದ್ದು ಉಡುಪಿಯ ಐರಾ ಅವರೇ ಹಿನ್ನೆಲೆ ಗಾಯನ ನೀಡಿದ್ದಾರೆ.