ಜ.12, 13ರಂದು ಹಂಪಿ ಉತ್ಸವ

ಬೆಳಗಾವಿ: ಹಂಪಿ ಉತ್ಸವವನ್ನು ಜ.12, 13ರಂದು ಆಚರಿಸಲು ಬಳ್ಳಾರಿ ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಹೇಳಿದರು. ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಕೆ.ಸಿ. ಕೊಂಡಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖಾ ಕ್ರಿಯಾ ಯೋಜನೆಯಲ್ಲಿ ಉತ್ಸವ ಆಚರಣೆಗಾಗಿ ₹ 60 ಲಕ್ಷ ಅನುದಾನ ತೆಗೆದಿರಿಸಲಾಗಿದೆ, ಉತ್ಸವಕ್ಕಾಗಿ ₹ 8 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಪ್ರಸ್ತಾವ ಸಲ್ಲಿಸಿದ್ದಾರೆ. ₹ 7.40 ಕೋಟಿ ಹೆಚ್ಚುವರಿಯಾಗಿ ಒದಗಿಸುವಂತೆ ಆರ್ಥಿಕ ಇಲಾಖೆಯನ್ನು ಕೋರಲಾಗಿದೆ ಎಂದು ತಿಳಿಸಿದರು.

ದತ್ತ ಜಯಂತಿ: ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ನೇತೃತ್ವದಲ್ಲಿ ಶೋಭಾಯಾತ್ರೆ

ಚಿಕ್ಕಮಗಳೂರು: ದತ್ತ ಜಯಂತ್ಯುತ್ಸವ ಅಂಗವಾಗಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಶೋಭಾಯಾತ್ರೆಯು ಅದ್ಧೂರಿಯಾಗಿ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ರತ್ನಗಿರಿ ರಸ್ತೆಯದಿಂದ ಮಧ್ಯಾಹ್ನ 3.15ಕ್ಕೆ ಶೋಭಾಯಾತ್ರೆ ಹೊರಟಿತು. ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿದ್ದ ದತ್ತಾತ್ರೇಯರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ದತ್ತಭಕ್ತರು ದತ್ತಾತ್ರೇಯ ಸ್ವಾಮಿ ಅಡ್ಡೆಯನ್ನು ಹೊತ್ತು ಸಾಗಿದರು. ಪಟಾಕಿ ಸಪ್ಪಳ, ಧ್ವನಿವರ್ಧಕದ ಅಬ್ಬರ, ಪಟಾಕಿ ಸಪ್ಪಳ, ವೀರಗಾಸೆ, ಗೊಂಬೆಕುಣಿತ, ಸಾಂಸ್ಕೃತಿಕ ಕಲಾತಂಡಗಳ ಮೆರುಗಿನಲ್ಲಿ ವೈಭವಯುತವಾಗಿ ಮೆರವಣಿಗೆ ಸಾಗಿತು. ಪೊಲೀಸ್‌ ಸರ್ಪಗಾವಲು ವ್ಯವಸ್ಥೆ ಮಾಡಲಾಗಿತ್ತು. […]

ಸ.ಹಿ.ಪ್ರಾ. ಶಾಲೆ ಬಾರಾಳಿ :ವಜ್ರಮಹೋತ್ಸವ ಸಂಭ್ರಮ

ಉಡುಪಿ: ಸ.ಹಿ.ಪ್ರಾ. ಶಾಲೆ ಬಾರಾಳಿಯ ವಜ್ರಮಹೋತ್ಸವ ಸಮಾರಂಭವು  ಡಿ .23ರ  ಭಾನುವಾರ ದಂದು ನಡೆಯಲಿದೆ. ಕರ್ನಾಟಕ ಮಾಜಿ ಲೋಕಾಯುಕ್ತ  ಸಂತೋಷ್ ಹೆಗ್ಡೆ ಕಾರ್ಯಕ್ರಮ ಉದ್ಘಾಟನೆ ,  ಕುಂದಾಪುರ ವಿಧಾನಸಭಾ ಕ್ಷೇತ್ರ ಶಾಸಕ ಹಾಲಾಡಿ  ಶ್ರೀನಿವಾಸ ಶೆಟ್ಟಿ ಸಭಾಧ್ಯಕ್ಷತೆ ,ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ  ಶಾಲಾ ವೆಬ್ಸೈಟ್ ಉದ್ಘಾಟನೆ , ವಿಧಾನ ಪರಿಷತ್ ವಿಪಕ್ಷ ನಾಯಕ  ಕೋಟ ಶ್ರೀನಿವಾಸ್ ಪೂಜಾರಿ ,ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ,ದಿನಕರ್ ಬಾಬು,ಪ್ರತಾಪ್ ಹೆಗ್ಡೆ ಮಾರಾಳಿ ,ಅರುಣ್  ನಾಯಕ್ , ಗಣೇಶ್ ಶೆಟ್ಟಿ, […]