ಡಿ.25 ರಂದು ಉಡುಪಿಯಲ್ಲಿ ಅಟಲ್ ಚಿತ್ರ ಬಿಡಿಸುವ ಸ್ಪರ್ಧೆ
ಉಡುಪಿ: ಭಾರತರತ್ನ, ಮಾಜಿ ಪ್ರಧಾನಿ ಅಜಾತಃ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನಮದಿನದ ಅಂಗವಾಗಿ ಡಿಸೆಂಬರ್ 25 ರಂದು ಸಾಯಂಕಾಲ 4 ಗಂಟೆಗೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಟಲ್ ಭಾವಚಿತ್ರವನ್ನು ಬಿಡಿಸುವ ಸ್ಪರ್ಧೆಯನ್ನು ಬಿಜೆಪಿಯು ಆಯೋಜಿಸಿದೆ. ಸ್ಪರ್ಧೆಯು 1 ರಿಂದ 4 ನೇ ತರಗತಿ, 5 ರಿಂದ 7 ನೇ ತರಗತಿ ಹಾಗೂ 8 ರಿಂದ 10 ನೇ ತರಗತಿಯವರೆಗೆ ಮೂರು ವಿಭಾಗದಲ್ಲಿ ನಡೆಯಲಿದೆ. ಉಡುಪಿ ತಾಲೂಕು ವ್ಯಾಪ್ತಿಯ ಶಾಲಾ ಮಕ್ಕಳಿಗೆ ಭಾವಹಿಸುವ ಅವಕಾಶವಿದ್ದು […]
ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪೇಟೆ ಉತ್ಸವಕ್ಕೆ ಚಾಲನೆ
ಉಡುಪಿ : ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 90 ನೇ ಭಜನಾ ಸಪ್ತಾಹದ ಪ್ರಯುಕ್ತ ಪ್ರಧಾನ ಅರ್ಚಕರಾದ ಜಯದೇವ ಭಟ್ , ದೇವರ ಪೇಟೆ ಉತ್ಸವಕ್ಕೆ ವಿಶೇಷ ಹೂಗಳಿಂದ ಅಶ್ವಮೇಧ ಯಾಗದ ಸ್ವರೂಪದ ರಥ ನಿರ್ಮಾಣ ಮಾಡಿ, ಗೋಪಾಲ ಕೃಷ್ಣ ಮೂರುತಿ ದೇವರ ಪೇಟೆ ಉತ್ಸವಕ್ಕೆ ಚಾಲನೆ ನೀಡಿದರು. ದೇವಳದ ಆಡಳಿತ ಮುಕ್ತೇಸರ ಅನಂತ ಪದ್ಮನಾಭ ಕಿಣಿ , ಭಜನಾ ಮಹೋತ್ಸವ ಸಮಿತಿಯ ಅಧ್ಯಕ್ಷರ ಕೆ. ತುಳಸೀದಾಸ್ ಕಿಣಿ , ಸೀತಾರಾಮ್ […]
ಸುಳ್ಳು ಕೇಸ್ ದಾಖಲಿಸಿ ರಿಕ್ಷಾ ಚಾಲಕರ ಶಾಂತಿಯನ್ನು ಕದಡುವ ಯತ್ನ :ಆರೋಪ
ಉಡುಪಿ : ಅನೇಕ ಅಧಿಕೃತ ನೋಂದಾಯಿತ ರಿಕ್ಷಾ ನಿಲ್ದಾಣಗಳಲ್ಲಿ ಪರವಾನಿಗೆಗಳಿಲ್ಲದ, ಅನಧಿಕೃತ ರಿಕ್ಷಾ ಚಾಲಕರು ಬಂದು ಬೇಕಾಬಿಟ್ಟಿಯಾಗಿ ಬಾಡಿಗೆಗಳನ್ನು ಮಾಡುತ್ತಿದ್ದು ಅಧಿಕೃತ ರಿಕ್ಷಾ ಚಾಲಕ ಮಾಲಕರಿಗೆ ಉಪಟಳ ನೀಡುತ್ತಿರುವುದಲ್ಲದೆ ಅವರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಸುಳ್ಳು ಕೇಸುಗಳನ್ನು ದಾಖಲಿಸಿ ರಿಕ್ಷಾ ಚಾಲಕರ ಶಾಂತಿಯನ್ನು ಕದಡುವ ಯತ್ನ ನಡೆಸಲಾಗುತ್ತಿದೆ ಎಂದು ಜಿಲ್ಲಾ ರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟದ ಕಾರ್ಯಾಧ್ಯಕ್ಷ ಸುರೇಶ ಅಮೀನ್ ಆರೋಪಿಸಿದ್ದಾರೆ. ಅವರು ಬುಧವಾರ ಉಡುಪಿ ಠಾಣೆಯಲ್ಲಿ ತಮ್ಮ ಸಂಘಟನೆಗಳ ಒಕ್ಕೂಟದ ಸದಸ್ಯರ ಮೇಲಿನ […]
ಜ.12,13: ಉಡುಪಿಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ
ಉಡುಪಿ: ಸಂಚಲನ ಸಂಸ್ಥೆ ಹಾಗೂ ಉನ್ನತಿ ಕಾರಿಯರ್ ಅಕಾಡೆಮಿ ಸಹಯೋಗದಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳ ಉಡುಪಿ ಅಜ್ಜರಕಾಡಿನ ಡಾ. ಜಿ. ಶಂಕರ್ ಮಜಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಜನವರಿ 12 ಹಾಗೂ 13 ರಂದು ನಡೆಯಲಿದೆ ಎಂದು ಸಂಚಲನ ಸಂಸ್ಥೆ ಅಧ್ಯಕ್ಷ ಪ್ರೇಮ್ ಪ್ರಸಾದ್ ಶೆಟ್ಟಿ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೃಹತ್ ಉದ್ಯೋಗ ಮೇಳದಲ್ಲಿ ಸ್ಥಳೀಯ ಹಾಗೂ ಬೆಂಗಳೂರಿನ ಪ್ರತಿಷ್ಠಿತ 150 ಕಂಪೆನಿಗಳು ಭಾಗವಹಿಸಲಿವೆ. ಸುಮಾರು 5 ಸಾವಿರಕ್ಕೂ ಹೆಚ್ಚಿನ ಉದ್ಯೋಗಾವಕಾಶವನ್ನು ಸೃಷ್ಟಿಸುವ ಗುರಿ ಹೊಂದಲಾಗಿದ್ದು, […]
ವೈರಲ್ ಆದ ವಿಡಿಯೋ ಆಂಧ್ರಪ್ರದೇಶದ್ದು, ಉಡುಪಿ ಉತ್ಸವದ್ದಲ್ಲ :ಉತ್ಸವದ ಮುಖ್ಯಸ್ಥರ ಸ್ಪಷ್ಟನೆ
ಉಡುಪಿ: ತಿರುಗುತ್ತಿರುವ ಜಾಯಿಂಟ್ ವೀಲ್ ತುಂಡಾಗಿ ಮಕ್ಕಳು ಕೆಳಕ್ಕೆ ಬೀಳುವ ದೃಶ್ಯವುಳ್ಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ವೈರಲ್ ಆಗಿತ್ತು. ಘಟನೆ ನಡೆದದ್ದು ಉಡುಪಿಯ ಕಲ್ಸಂಕದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಉಡುಪಿ ಉತ್ಸವದಲ್ಲಿ ಎನ್ನುವ ಸುಳ್ಳು ಸುದ್ದಿಗಳು ಎಲ್ಲೆಡೆ ಹಬ್ಬಿ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ ಉಡುಪಿ ಉತ್ಸವಕ್ಕೂ, ಈ ವಿಡಿಯೋಗೂ ಸಂಬಂಧವೇ ಇಲ್ಲ. ಇದು ಆಂದ್ರಪ್ರದೇಶದಲ್ಲಿ ಯಾವತ್ತೋ ನಡೆದಿದ್ದ ಘಟನೆಯಾಗಿದ್ದು ಉಡುಪಿ ಉತ್ಸವದಲ್ಲಿ ನಡೆದದ್ದಲ್ಲ ಎನ್ನುವ ಸತ್ಯ ಹೊರಬಿದ್ದಿದೆ. ಈ ಕುರಿತು ಉಡುಪಿ ಉತ್ಸವದ ನಿರ್ವಹಣಾ […]