ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪೇಟೆ ಉತ್ಸವಕ್ಕೆ  ಚಾಲನೆ

ಉಡುಪಿ : ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ   90 ನೇ ಭಜನಾ ಸಪ್ತಾಹದ ಪ್ರಯುಕ್ತ   ಪ್ರಧಾನ ಅರ್ಚಕರಾದ  ಜಯದೇವ ಭಟ್ , ದೇವರ ಪೇಟೆ ಉತ್ಸವಕ್ಕೆ ವಿಶೇಷ ಹೂಗಳಿಂದ ಅಶ್ವಮೇಧ ಯಾಗದ ಸ್ವರೂಪದ ರಥ ನಿರ್ಮಾಣ ಮಾಡಿ, ಗೋಪಾಲ ಕೃಷ್ಣ ಮೂರುತಿ ದೇವರ  ಪೇಟೆ ಉತ್ಸವಕ್ಕೆ  ಚಾಲನೆ ನೀಡಿದರು.            

ದೇವಳದ ಆಡಳಿತ ಮುಕ್ತೇಸರ  ಅನಂತ ಪದ್ಮನಾಭ ಕಿಣಿ , ಭಜನಾ ಮಹೋತ್ಸವ ಸಮಿತಿಯ ಅಧ್ಯಕ್ಷರ ಕೆ. ತುಳಸೀದಾಸ್ ಕಿಣಿ , ಸೀತಾರಾಮ್ ಭಟ್, ಶ್ರೀನಿವಾಸ್ ಮಲ್ಯ, ದತ್ತಾತ್ರೇಯ ಕಿಣಿ , ಅರವಿಂದ ಬಾಳಿಗಾ , ಪಾಂಡುರಂಗ ಕಿಣಿ ,ಗಣಪತಿ ಭಟ್ ,ಮಹೇಶ್ ಭಟ್ , ಸುಬ್ಬಣ್ಣ ಪೈ,  ಲಕ್ಷ್ಮೀಶ ಭಟ್ , ಸಮಾಜ ಬಾಂದವರು, ಜಿ ಎಸ್ ಬಿ  ಮಹಿಳಾ ತಂಡ , ಜಿ ಎಸ್ ಬಿ  ಸಭಾ  ಸದಸ್ಯರ  ಉಪಸ್ಥಿತಿಯಲ್ಲಿ  ಕಾರ್ಯಕ್ರಮ ನಡೆಯತು.