ಡಿ.22, 23 : ಸನ್‌ಶೈನ್ ದಶಮಾನೋತ್ಸವ, ವಿಶಿಷ್ಠ ವ್ಯಕ್ತಿಗಳಿಗೆ ಸಮ್ಮಾನ

ಉಡುಪಿ:  ಸಾಮಾಜಿಕ, ಸಾಂಸ್ಕೃತಿ, ಕ್ರೀಡಾ, ಶೈಕ್ಷಣಿಕ, ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಅಚ್ಲಾಡಿಯ ಸನ್‌ಶೈನ್ ಗೆಳೆಯರ ಬಳಗ, ಕ್ರೀಡಾಸಂಘ ಅಚ್ಲಾಡಿ. ಈ ಸಂಸ್ಥೆಯ  ದಶಮಾನೋತ್ಸವದ ಸಂಭ್ರಮದ ಪ್ರಯುಕ್ತ,  ಸಂಘದ ಆಶ್ರಯದಲ್ಲಿ  ಡಿ.22 ಹಾಗೂ 23 ರಂದು ಅಚ್ಲಾಡಿ ಸನ್ ಶೈನ್ ಕ್ರೀಡಾಂಗಣದಲ್ಲಿ  ದಶಮಾನೋತ್ಸವ ಕಾರ್ಯಕ್ರಮ “ಹತ್ತುಹೆಜ್ಜೆ” ನಡೆಯಲಿದೆ. ಈ ಸಂದರ್ಭ ನಾಲ್ವರು ವಿಶಿಷ್ಠ ವ್ಯಕ್ತಿಗಳನ್ನು  ಗುರುತಿಸಿ ಗೌರವಿಸಲಾಗುತ್ತದೆ. ವಿಶೇಷ ವ್ಯಕ್ತಿಗಳಿಗೆ ಸನ್ಮಾನ: ಸಾಸ್ತಾನ ಸಮೀಪದ ಪಾಂಡೇಶ್ವರದ ಐಸ್ ಕ್ಯಾಂಡಿ ಗೋಪಾಲಣ್ಣ (ಗೋಪಾಲ ದೇವಾಡಿಗ).ಕಳೆದ ೩೫ವರ್ಷಗಳಿಂದಲೂ ತಮ್ಮ ವೃತ್ತಿಯನ್ನು ದುಡ್ಡಿನ […]

ಉಡುಪಿಯಲ್ಲಿ ಕೆಜಿಎಫ್ ಗೆ ಟಿಕೆಟ್ ಸಿಗದ ಹಿನ್ನೆಲೆ :ಯಶ್ ಅಭಿಮಾನಿಗಳಿಂದ ದಾಂದಲೆ

ಉಡುಪಿ: ಉಡುಪಿಯಲ್ಲಿ ಕೆಜಿಎಫ್  ಚಲನಚಿತ್ರ ಟಿಕೆಟ್  ಸಿಗದ ಹಿನ್ನೆಲೆ ಯಶ್  ಅಭಿಮಾನಿಗಳು  ದಾಂದಲೆ ನಡೆಸಿದ  ಘಟನೆ ಅಲಂಕಾರ್ ಚಿತ್ರಮಂದಿರದಲ್ಲಿ  ನಡೆದಿದೆ. ಕೆಜಿಎಫ್ ಚಲನಚಿತ್ರ  ರಾಜ್ಯಾದ್ಯಂತ  ಮಾತ್ರವಲ್ಲದೆ   ದೇಶವಿದೇಶಗಳಲ್ಲಿ   ಶುಕ್ರವಾರ ಬಿಡುಗಡೆ ಗೊಂಡಿದೆ . ಉಡುಪಿಯ  ಅಲಂಕಾರ್ ಚಿತ್ರಮಂದಿರದಲ್ಲಿ   ಪ್ರಥಮ ಪ್ರದರ್ಶನ ಮುಂಜಾನೆ ೧೦ ಕ್ಕೆ  ಪ್ರಾರಂಭವಾಗಿತ್ತು. ಆದಾಗಲೇ  ೧೦೦ಕ್ಕೂ ಹೆಚ್ಚು  ಯಶ್ ಅಭಿಮಾನಿಗಳು  ನಿರಾಸೆಗೊಂಡಿದ್ದರು . ಮಧ್ಯಾಹ್ನದ  ಟಿಕೆಟ್  ಈಗಾಗಲೇ ನೀಡಬೇಕೆಂದು   ಚಲನಚಿತ್ರದ ಮಂದಿರದ   ಸಿಬ್ಬಂದಿಗಳಲ್ಲಿ ವಾಗ್ವಾದಕ್ಕೆ ಇಳಿದರು.  ಮಾತ್ರವಲ್ಲದೆ    ಭದ್ರತೆಗೆ  ಅಳವಡಿಸಿದ   ಗೇಟ್ ಗಳನ್ನು  […]

ಡಿ.23: ಮರಾಠಿ ಸಮಾಜ ಸೇವಾ ಸಂಘದ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಕಾರ್ಕಳ: ತಾಲ್ಲೂಕು ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ಸಂಘದ ರಜತ ಮಹೋತ್ಸವ ಹಾಗೂ ಶಿವಾಜಿ ಜಯಂತಿಯ ಅಂಗವಾಗಿ ತಾಲ್ಲೂಕು ಮಟ್ಟದ ಕ್ರೀಡಾಕೂಟ ಕಾರ್ಕಳ ಭುವನೇಂದ್ರ ಕಾಲೇಜಿನ ಬಳಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಡಿ. 23ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಘವ ನಾಯ್ಕ್ ಹೇಳಿದರು. ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಅನಂತ ನಾಯ್ಕ್ ಬೆಳಗ್ಗೆ 9 ಗಂಟೆಗೆ ಕ್ರೀಡಾಕೂಟವನ್ನು ಉದ್ಘಾಟಿಸುವರು. ಕಾರ್ಕಳ ಯುವಜನ ಸೇವೆಯ ಸಹಾಯಕ ಕ್ರೀಡಾಧಿಕಾರಿಯ ಫ್ರೆಡ್ರಿಕ್ ರೆಬೆಲ್ಲೋ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. […]

ಶಾಲಾ ಮಕ್ಕಳಿಗೆ ಫೋಸ್ಕೋ ಕಾಯಿದೆ ಕುರಿತು ಅರಿವು ಮೂಡಿಸಲಾಗುವುದು: ಫೋನ್ ಇನ್ ಕಾರ್ಯಕ್ರಮದಲ್ಲಿ ಎಸ್.ಪಿ ಭರವಸೆ

ಉಡುಪಿ: ಶಾಲಾ ಮಕ್ಕಳಿಗೆ ಫೋಕ್ಸೊ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲು ಚಿಂತನೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು. ಶುಕ್ರವಾರ ಉಡುಪಿ ಎಸ್ಪಿ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.  ಶಾಲಾ ವಿದ್ಯಾರ್ಥಿಗಳಿಗೆ ಫೋಕ್ಸೊ ಕಾಯ್ದೆಯ ಬಗ್ಗೆ ಮೊದಲೇ ಜಾಗೃತಿ, ತಿಳುವಳಿಕೆ ನೀಡಬೇಕು, 6ನೇ ತರಗತಿಯಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ವತಿಯಿಂದ ತಿಳುವಳಿಕೆ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದರೆ ಉತ್ತಮ  ಎಂದು […]

ಕರಾವಳಿಗೆ ಅಪ್ಪಳಿಸಿತು “ಕೆಜಿಎಫ್” ಸುನಾಮಿ : ಸಿನಿಮಾ ನೋಡಿ ಹುಚ್ಚೆದ್ದರು ಕರಾವಳಿ ಪ್ರೇಕ್ಷಕರು

ಉಡುಪಿ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಕರಾವಳಿಯಲ್ಲೂ ಭರ್ಜರಿ ಸದ್ದು ಮಾಡಿದೆ. ಶುಕ್ರವಾರ ಬೆಳಗ್ಗಿನಿಂದಲೇ ಉಡುಪಿಯ ಅಲಂಕಾರ್, ಇನಾಕ್ಸ್ , ಪಿವಿಆರ್, ಕಾರ್ಕಳದ ರಾಧಿಕಾ, ಕುಂದಾಪುರದ ವಿನಾಯಕ ಥಿಯೇಟರ್ ಗಳ ಮುಂದೆ ಕೆಜಿಎಫ್ ನೋಡಲೆಂದೇ ಯಶ್ ಅಭಿಯಾನಿಗಳು ಜಾತ್ರೆಯಂತೆ ಲಗ್ಗೆ ಇಟ್ಟಿದ್ದಾರೆ. ಕಾಲೇಜಿನ ಪಡ್ಡೆಗಳು ಬಂಕ್ ಹಾಕಿ ಥಿಯೇಟರ್ ಗೆ ಜಮಾಯಿಸಿದ್ದಾರೆ. ಬೆಳಗ್ಗೆ, ಹಾಗೂ ಮದ್ಯಾಹ್ನದ ಶೋ ಗಳೂ ಹೌಸ್ ಫುಲ್ ಆಗಿದ್ದು ಕೆಲ ಸಿನಿಮಾ ಪ್ರಿಯರು ಟಿಕೇಟ್ ಸಿಗದೇ ಪರದಾಡಬೇಕಾಗಿ ಬಂತು. […]