ಡಿ.25 ರಂದು ಉಡುಪಿಯಲ್ಲಿ ಅಟಲ್ ಚಿತ್ರ ಬಿಡಿಸುವ ಸ್ಪರ್ಧೆ

ಉಡುಪಿ: ಭಾರತರತ್ನ, ಮಾಜಿ ಪ್ರಧಾನಿ ಅಜಾತಃ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನಮದಿನದ ಅಂಗವಾಗಿ  ಡಿಸೆಂಬರ್ 25 ರಂದು ಸಾಯಂಕಾಲ 4 ಗಂಟೆಗೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಟಲ್ ಭಾವಚಿತ್ರವನ್ನು ಬಿಡಿಸುವ  ಸ್ಪರ್ಧೆಯನ್ನು ಬಿಜೆಪಿಯು ಆಯೋಜಿಸಿದೆ.  ಸ್ಪರ್ಧೆಯು 1 ರಿಂದ 4 ನೇ ತರಗತಿ, 5 ರಿಂದ 7 ನೇ ತರಗತಿ ಹಾಗೂ 8 ರಿಂದ 10 ನೇ ತರಗತಿಯವರೆಗೆ ಮೂರು ವಿಭಾಗದಲ್ಲಿ ನಡೆಯಲಿದೆ. ಉಡುಪಿ ತಾಲೂಕು  ವ್ಯಾಪ್ತಿಯ ಶಾಲಾ ಮಕ್ಕಳಿಗೆ ಭಾವಹಿಸುವ ಅವಕಾಶವಿದ್ದು ಆಸಕ್ತರು ಒಂದು ಗಂಟೆ ಮುಂಚಿತವಾಗಿ ಶಾಲಾ ದೃಢೀಕರಣ ಪತ್ರದೊಂದಿಗೆ ಬಂದು ಸ್ಥಳದಲ್ಲಿಯೇ ಪ್ರವೇಶ ದಾಖಲಿಸಬೇಕು ಮತ್ತು ಪ್ರತೀ ವಿಭಾಗದಲ್ಲಿಯೂ ಆಕರ್ಷಕ ಬಹುಮಾನಗಳಿದ್ದು ಚಿತ್ರ ಬಿಡಿಸುವ ಹಾಳೆಯನ್ನು ಸ್ಥಳದಲ್ಲಿಯೇ ನೀಡಲಾಗುವುದು, ಇತರ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು.  ಮಾಹಿತಿಗಾಗಿ 9448327922 ಗೆ ಸಂಪರ್ಕಿಸಬೇಕೆಂದು ನಗರ ಅಧ್ಯಕ್ಷ ಪ್ರಭಾಕರ್ ಪೂಜಾರಿ  ಪ್ರಧಾನ ಕಾರ್ಯದರ್ಶಿಗಳಾದ ಉಪೇಂದ್ರ ನಾಯಕ್ ಮತ್ತು ಜಗದೀಶ್ ಆಚಾರ್ಯ  ತಿಳಿಸಿದ್ದಾರೆ.