ಪಂಚರಾಜ್ಯ ಚುನಾವಣೆ: “ಕೈ” ಹಿಡಿದ ಮತದಾರ
ನವದೆಹಲಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷವನ್ನು ಕಾಂಗ್ರೆಸ್ ಸೋಲಿಸಿ, ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇಂದು ಮುಂಜಾನೆ ಆರಂಭವಾದ ಮತ ಎಣಿಕೆಯ ಆರಂಭದಲ್ಲಿ ಕಾಂಗ್ರೆಸ್ ಸರಳ ಬಹುಮತದತ್ತ ಸಾಗಿತ್ತು. ಕೆಲವೇ ಕ್ಷಣಗಳ ನಂತರ ಟ್ರೆಂಡ್ ಬದಲಾಗಿ ಬಿಜೆಪಿ ಬಹುಮತದತ್ತ ನಡೆಯತೊಡಗಿತು. ಆದರೆ, ಮಧ್ಯಾಹ್ನದ ನಂತರ ಟ್ರೆಂಡ್ ಸಂಪೂರ್ಣ ಬದಲಾಗಿ ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ ಸರಳ ಬಹುಮತದತ್ತ ಹೆಜ್ಜೆ ಇಟ್ಟಿದೆ. ಮಧ್ಯಪ್ರದೇಶ ವಿಧಾನಸಭೆಯ ಬಲಾಬಲ ಒಟ್ಟು 230 – ಬಹುಮತಕ್ಕ ಅಗತ್ಯ ಸಂಖ್ಯೆ – 116, ಕಾಂಗ್ರೆಸ್114 +56, ಬಿಜೆಪಿ108 –57, […]
ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ
ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಹುದ್ದೆಗೆ ಉರ್ಜಿತ್ ಪಟೇಲ್ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣದಿಂದ ತಕ್ಷಣ ಈ ಹುದ್ದೆ ತೊರೆಯುತ್ತಿರುವುದಾಗಿ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ರಕ್ಷಣೆ ಉದ್ದೇಶಕ್ಕೆ ಕೆಲ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ಕೇಂದ್ರೀಯ ಬ್ಯಾಂಕ್ಗೆ ನಿರ್ದೇಶನ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು. ಈ ಹಿಂದೆ ಯಾವತ್ತೂ ಬಳಸದ ಆರ್ಬಿಐ ಕಾಯ್ದೆ 1934ರ ಸೆಕ್ಷನ್ 7 ಬಳಸುವ ಸಂಬಂಧ ಚರ್ಚೆಗೆ ಅಕ್ಟೋಬರ್ನಲ್ಲಿ ಚಾಲನೆ ನೀಡಿತ್ತು. ಆರ್ಬಿಐ ಬಳಿ ಇರುವ ಮೀಸಲು […]
ಕಾರ್ಕಳ: ಮುನಿಮಹಾರಾಜರ ಪಿಂಛಿ ಪರಿವರ್ತನಾ ಕಾರ್ಯಕ್ರಮ
ಕಾರ್ಕಳ: ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಸಂಕುಚಿತ ಮನೋಭಾವ ಸೃಷ್ಟಿಯಾಗುತ್ತಿದೆ. ನಮ್ಮ ದೇವರ ಬಗ್ಗೆಹೇಳಬೇಕಾದರೆ, ಧರ್ಮದ ಆಚಾರ ವಿಚಾರಗಳನ್ನುರಕ್ಷಣೆ ಮಾಡಬೇಕಾದರೆ ನಮ್ಮಲ್ಲಿ ಸಂಕೋಚ ಮೂಡುತ್ತದೆ. ಮೂಡನಂಬಿಕೆ,ಹಳೇ ಸಂಪ್ರದಾಯದವರು ಅಥವಾ ಆಧುನಿಕತೆಗೆ ಸರಿಯಾಗಿಒಗ್ಗುತ್ತಿಲ್ಲ ಅನ್ನುವ ಯೋಚನೆಗಳು ಮೂಡುತ್ತಿದೆ ಆದರೆಮುನಿ ಮಹಾರಾಜರ ಚಾರ್ತುಸದಿಂದಾಗಿ ಅದೆಲ್ಲವೂದೂರವಾಗಿದೆ ಎಂದು ಶ್ರೀ ಕ್ಷೇತ್ರಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ|ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಪರಮಪೂಜ್ಯ ೧೦೮ ಶ್ರೀ ವೀರಸಾಗರ ಮುನಿಮಹಾರಾಜರ ಚಾತುರ್ಮಾಸ ಸಮಿತಿ ಆಶ್ರಯದಲ್ಲಿ ಪರಮಪೂಜ್ಯ ೧೦೮ ಮುನಿಶ್ರೀ ವೀರಸಾಗರ ಮಹಾರಾಜರಿಗೆ ಶಾಸ್ತ್ರದಾನ, ಪಿಂಛಿ ಪ್ರದಾನ ಕಾರ್ಯಕ್ರಮ […]
ಬಿಎಸ್ಎನ್ಎಲ್ ನ್ನು ಜಿಯೋದೊಂದಿಗೆ ಲೀನಗೊಳಿಸುವ ಹುನ್ನಾರ ಕೇಂದ್ರ ಸರಕಾರದ್ದು :ಕಾರ್ಕಳ ಕಾಂಗ್ರೆಸ್ ಗರಂ
ಕಾರ್ಕಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಬಹುಪ್ರತಿಷ್ಠಿತ ಭಾರತ್ ಸಂಚಾರ ನಿಗಮವನ್ನು ವ್ಯವಸ್ಥಿತ ರೀತಿಯಲ್ಲಿ ಮುಚ್ಚುವ ಅಥವಾ ರಿಲಯನ್ಸ್ ಜಿಯೊದೊಂದಿಗೆ ಲೀನಗೊಳಿಸುವ ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದು, ಪರಿಣಾಮವಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದೊಂದು ಶತಮಾನದ ಮಹಾ ಮೋಸ ಎಂದು ಕಾರ್ಕಳ ಕಾಂಗ್ರೆಸ್ ವಕ್ತಾರ ನಕ್ರೆ ಬಿಪಿನ ಚಂದ್ರಪಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಿಎಸ್ಎನ್ಎಲ್ನ್ನು ದುರ್ಬಲಗೊಳಿಸಿ, ಜಿಯೋವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ವರೆಗೂ ೪ಜಿ ತರಂಗಾಂತರ ಹಂಚಿಕೆಯಲ್ಲಿ ಬಿಎಸ್ಎನ್ಎಲ್ ನ್ನು ವಂಚಿಸಲಾಗಿತ್ತು. […]
ಹೆಮ್ಮಾಡಿ ಪ್ರೀಮಿಯರ್ ಲೀಗ್ ಉದ್ಘಾಟನೆ
ಕುಂದಾಪುರ: ಸ್ಥಳೀಯ ಯುವಕರನ್ನುಒಗ್ಗೂಡಿಸಿಕೊಂಡ ಫ್ರೆಂಡ್ಸ್ ಹೆಮ್ಮಾಡಿಯ ಈ ವಿನೂತನ ಚಿಂತನೆ ಶ್ಲಾಘನೀಯ ಎಂದು ಹೆಮ್ಮಾಡಿ ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ ಹೇಳಿದರು. ಅವರು ಶನಿವಾರ ಹೆಮ್ಮಾಡಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಹೆಮ್ಮಾಡಿ ಪ್ರೀಮಿಯರ್ ಲೀಗ್-೨೦೧೮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕ್ರಿಕೆಟ್ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಆಟ. ಕ್ರಿಕೆಟ್ ಪಂದ್ಯಾಟ ಆಯೋಜಿಸುವ ಮೂಲಕ ಯುವಕರು ಸಂಘಟಿತರಾಗುತ್ತಿದ್ದಾರೆ. ಯುವಕರನ್ನು ಒಗ್ಗೂಡಿಸುವ ಕೆಲಸವನ್ನು ಫ್ರೆಂಡ್ಸ್ ಹೆಮ್ಮಾಡಿ ಮಾಡಿದೆ. ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. […]