ಹೆಮ್ಮಾಡಿ ಪ್ರೀಮಿಯರ್ ಲೀಗ್ ಉದ್ಘಾಟನೆ

ಕುಂದಾಪುರ: ಸ್ಥಳೀಯ ಯುವಕರನ್ನುಒಗ್ಗೂಡಿಸಿಕೊಂಡ ಫ್ರೆಂಡ್ಸ್ ಹೆಮ್ಮಾಡಿಯ ಈ ವಿನೂತನ ಚಿಂತನೆ ಶ್ಲಾಘನೀಯ ಎಂದು ಹೆಮ್ಮಾಡಿ ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ ಹೇಳಿದರು.

ಅವರು ಶನಿವಾರ ಹೆಮ್ಮಾಡಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಹೆಮ್ಮಾಡಿ ಪ್ರೀಮಿಯರ್ ಲೀಗ್-೨೦೧೮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕ್ರಿಕೆಟ್ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಆಟ. ಕ್ರಿಕೆಟ್ ಪಂದ್ಯಾಟ ಆಯೋಜಿಸುವ ಮೂಲಕ ಯುವಕರು ಸಂಘಟಿತರಾಗುತ್ತಿದ್ದಾರೆ.  ಯುವಕರನ್ನು ಒಗ್ಗೂಡಿಸುವ ಕೆಲಸವನ್ನು ಫ್ರೆಂಡ್ಸ್ ಹೆಮ್ಮಾಡಿ ಮಾಡಿದೆ. ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ ಎಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಹೆಮ್ಮಾಡಿ ಗ್ರಾಮಪಂಚಾಯತ್‌ನ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮಪಂಚಾಯತ್ ಸದಸ್ಯರಾದ ಆನಂದ ಪಿಎಚ್, ರಾಘವೇಂದ್ರ ಪೂಜಾರಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ ದೇವಾಡಿಗ, ಉದ್ಯಮಿ ಲವೇಶ್ ಕೋಟ್ಯಾನ್, ಜಟ್ಟಿಗೇಶ್ವರ ಕ್ರಿಕೆಟ್ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ತೇಜ ದೇವಾಡಿಗ ಜಾಲಾಡಿ, ಫ್ರೆಂಡ್ಸ್ ಹೆಮ್ಮಾಡಿಯ ಗೌರವಾಧ್ಯಕ್ಷ ರಾಘವೇಂದ್ರ ಕುಲಾಲ್, ಅಧ್ಯಕ್ಷ ಸುರೇಶ್ ಪೂಜಾರಿ ಉಪಸ್ಥಿತರಿದ್ದರು.

ಫ್ರೆಂಡ್ಸ್ ಹೆಮ್ಮಾಡಿಯ ಕಿರಣ್ ದೇವಾಡಿಗ ಸ್ವಾಗತಿಸಿದರು. ಉದಯ ದೇವಾಡಿಗ ಧನ್ಯವಾದವಿತ್ತರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಕಾರ್ಯಕ್ರಮ ನಿರೂಪಿಸಿದರು.