ಉಡುಪಿ: ಅಸಂಘಟಿತ ಕಾರ್ಮಿಕರಿಗೆ ಪರಿಹಾರ : ಪರಿಷ್ಕೃತ ಮಾರ್ಗಸೂಚಿ

ಉಡುಪಿ: ರಾಜ್ಯದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಅಗಸರು, ಕ್ಷೌರಿಕರು, ಗೃಹಕಾರ್ಮಿಕರು, ಟೈಲರ್‌ಗಳು, ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿಕಾರ್ಮಿಕರು ಸೇರಿದಂತೆ ಒಟ್ಟು 11 ವಲಯದ ಅಸಂಘಟಿತ ಕಾರ್ಮಿಕರಿಗೆ ತಲಾ 2,000 ರೂ. ಗಳ ಪರಿಹಾರ ಧನ ನೀಡುವ ಕುರಿತು ಮಾರ್ಗಸೂಚಿಯಲ್ಲಿ ಮಾರ್ಪಾಡುಗಳನ್ನು ಸೇರಿಸಲಾಗಿದ್ದು, ಮೊಬೈಲ್ ಸಂಖ್ಯೆ ನಮೂದಿಸುವುದು ಐಚ್ಛಿಕವಾಗಿದ್ದು, ಉದ್ಯೋಗ ಪ್ರಮಾಣ ಪತ್ರವನ್ನು ಮಾರ್ಗಸೂಚಿಯಲ್ಲಿ ನಮೂದಿಸಿರುವ ಯಾವುದಾದರೂ ಅಧಿಕಾರಿ ಅಥವಾ ಕೆಲಸ ನಿರ್ವಹಿಸುತ್ತಿರುವ ಮಾಲೀಕರಿಂದ ನಿಗದಿತ […]

ಜೇನು ಸಾಕಣಿಕೆ: ನೋಂದಣಿಗೆ ಆಗಸ್ಟ್ 30 ಕೊನೆಯ ದಿನ

ಉಡುಪಿ : ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಅನುಷ್ಟಾನಗೊಳ್ಳುತ್ತಿರುವ ರಾಷ್ಟ್ರೀಯ ಜೇನುನೊಣ ಸಾಕಣಿಕೆ ನಿಖರ ಮತ್ತು ಹನಿ ಮಿಷನ್ ಯೋಜನೆಯಡಿ ಮಧುಕ್ರಾಂತಿ ಪೋರ್ಟಲ್ ಎಂಬ ವೆಬ್ ಪೋರ್ಟಲ್‌ನ್ನು ಅಭಿವೃದ್ಧಿ ಪಡಿಸಲಾಗಿರುತ್ತದೆ. ತಾಲೂಕಿನಲ್ಲಿ 10 ಕ್ಕಿಂತ ಹೆಚ್ಚು ಜೇನು ಪೆಟ್ಟಿಗೆಯನ್ನು ಹೊಂದಿರುವ ರೈತರು, ಜೇನು ಕೃಷಿಕರು, ಉದ್ದಿಮೆದಾರರು ಹಾಗೂ ಜೇನು ಉತ್ಪಾದನಾ ಸಂಘ ಸಂಸ್ಥೆಗಳು ವೆಬ್ ಪೋರ್ಟಲ್‌ನಲ್ಲಿ ತಮ್ಮ ವಿವರವನ್ನು ನೊಂದಾಯಿಸಿಕೊಳ್ಳಲು ಆಗಸ್ಟ್ 30 ಕೊನೆಯ ದಿನ. ಮಧುಕ್ರಾಂತಿ ಪೋರ್ಟಲ್ ನೊಂದಣಿ ಶುಲ್ಕವನ್ನು 10 […]

ಸರಳವಾಗಿ ಕಲೀರಿ ಇಂಗ್ಲಿಷ್:ಈ ವಾರದ ಇಂಗ್ಲಿಷ್ ಕ್ಲಾಸ್ ಇಲ್ಲಿದೆ.

ನಿಮಗೆ ಬೇಗ ಬೇಗ ಇಂಗ್ಲೀಷ್ ಕಲಿಬೇಕು, ಇಂಗ್ಲೀಷ್ ನಲ್ಲಿ ಪಟ ಪಟ ಅಂತ ಮಾತಾಡ್ಬೇಕು ಅಂತ ಆಸೆ ಇರಬಹುದು. ಅದಕ್ಕಾಗಿ ನೀವು ದುಬಾರಿ ಇಂಗ್ಲೀಷ್ ಸ್ಪೀಂಕಿಂಗ್ ಕ್ಲಾಸ್ ಮೊರೆಹೋಗಬೇಕಾಗಿಲ್ಲ. ಉಡುಪಿXPRESS.COM  ಮಾಧ್ಯಮ ಸಹಯೋಗದಲ್ಲಿ ಜೀರೋ ಟು ಜೀರೋ ಇಂಗ್ಲೀಷ್ ಕ್ಲಾಸ್ ಶುರುವಾಗಿದೆ. ಇಂಗ್ಲೀಷ್ ತಜ್ಞರಾದ ಕಾರ್ಕಳದ ಉಪನ್ಯಾಸಕ ಮಹೇಶ್ ಶೆಣೈ ಅವರು ಸುಲಭವಾಗಿ ನಿಮಗೆ ಕನ್ನಡದಲ್ಲೇ ಇಂಗ್ಲೀಷ್ ಪಾಠ ಮಾಡ್ತಾರೆ.  ಕೆಳಗಿನ ಲಿಂಕ್ ಒತ್ತಿ ಈ ವಾರದ ಇಂಗ್ಲೀಷ್  ಕ್ಲಾಸ್ ಗೆ ಎಂಟ್ರಿ ಆಗಿ https://youtu.be/okmfpnxpkE0

ಸಣ್ಣ ಪುಟ್ಟ ಅಂಗಡಿಗಳಿಗೂ ಪರ್ಯಾಯ ದಿನಗಳಲ್ಲಿ ತೆರೆಯಲು ಅವಕಾಶ ನೀಡಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮನವಿ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕ್ರಮ ಶ್ಲಾಘನೀಯವಾದರೂ ಕಳೆದ ೫೦ ದಿನಗಳಿಂದ ಕೋವಿಡ್ ನಿಯಂತ್ರಣಕ್ಕಾಗಿ ಜಾರಿಯಾದ ನಿರ್ಬಂಧಗಳಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದು ಸಂಕಷ್ಟಕ್ಕೆ ಸಿಲುಕಿ ಜೀವನ ನಡೆಸುವುದು ಕಷ್ಟವಾಗಿದೆ. ಬಟ್ಟೆ ಮಳಿಗೆಗಳಲ್ಲಿ ಹಾಗೂ ಇನ್ನಿತರ ಅಂಗಡಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ನೌಕರಿಯಿಲ್ಲದೆ ದಿನನಿತ್ಯದ ಅಗತ್ಯಗಳನ್ನು ಪೂರೈಸುವುದು ಕಷ್ಟಕರವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ತಿಳಿಸಿದ್ದಾರೆ. ಸಾಮಾನ್ಯ ಜನರನ್ನೂ ಗಮನದಲ್ಲಿಟ್ಟುಕೊಂಡು ಈಗಾಗಲೇ ಕೆಲವು ವ್ಯಾಪಾರಗಳಿಗೆ ವಿನಾಯಿತಿ ನೀಡಲಾಗಿದ್ದು ಇನ್ನುಳಿದ ಸಣ್ಣ ಪುಟ್ಟ […]

ಹಲ್ಲುಗಳ ಅಂದ-ಚೆಂದ ಹೆಚ್ಚಿಸೋದು ತುಂಬಾ ಸಿಂಪಲ್: ಈ ಟಿಪ್ಸ್ ಫಾಲೋ ಮಾಡಿ ಸಾಕು

ನಗು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ನಗುವನ್ನು ಆಕರ್ಷಕವಾಗಿಸುವಲ್ಲಿ ನಮ್ಮ ಹಲ್ಲುಗಳು ಮುಖ್ಯ ಪಾತ್ರ ವಹಿಸುತ್ತದೆ. ಸುಂದರ ಬಿಳಿ ಹಲ್ಲುಗಳು ನಗುವಿನ ಜೊತೆ ಮುಖದ ಚೆಲುವನ್ನು ಕೂಡ ಹೆಚ್ಚಿಸುತ್ತದೆ. ಆದರೆ ಕೆಲವರ ಹಲ್ಲು ಹಳದಿ ಅಥವಾ ಡಲ್‌ ಆಗಿರುತ್ತದೆ. ಅದಕ್ಕಾಗಿ ಪದೇಪದೇ ಡೆಂಟಿಸ್ಟ್‌ ಬಳಿ ಓಡಲು ಸಾಧ್ಯವಿಲ್ಲ. ಸರಳ ವಿಧಾನದಿಂದ ಇದೆಲ್ಲವೂ ಸಾಧ್ಯ  ಪ್ರತಿ ಎರಡು ತಿಂಗಳಿಗೊಂದು ಹೊಸ ಬ್ರಷ್ ಬಳಸಿ ಉತ್ತಮ ಫಲಿತಾಂಶಗಳನ್ನು ಪಡೆಯಲು ನಿಯಮಿತವಾಗಿ ನಿಮ್ಮ ಬ್ರಷ್ ಬದಲಾಯಿಸುವುದು ಬಹಳ ಮುಖ್ಯ . ಅವಧಿಯ […]