ಡ್ರಗ್ಸ್ ಜಾಲ ಬೇಧಿಸಿದ ಪೊಲೀಸರು: ನಾಲ್ವರ ಬಂಧನ

ಮಂಗಳೂರು: ಡ್ರಗ್ಸ್ ಜಾಲವನ್ನು ಭೇದಿಸಿದ ಮಂಗಳೂರು ನಗರ ಪೊಲೀಸರು ನಾಲ್ವರು ಯುವಕರನ್ನು ಶನಿವಾರ ಬಂಧಿಸಿದ್ದಾರೆ. ಪೃಥ್ವಿ ಪಿ. ಕುಮಾರ್, ಕ್ಲೆವಿನ್ ಸಲ್ಡಾನಾ, ವಿ.ಎಸ್. ನಿಖಿಲ್ ಹಾಗೂ ಸಾಗರ್ ಅಮೀನ್, ಬಂಧಿತ ಆರೋಪಿಗಳು. ಆರೋಪಿಗಳಿಂದ 1 ಕೆ.ಜಿ. 200 ಗ್ರಾಂ ಗಾಂಜಾ ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಹಾವಳಿ ವಿರುದ್ಧ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಎಸಿಪಿ ಸೆಂಟ್ರಲ್ ಮತ್ತು ತಂಡ ಈ ಮಹತ್ವದ ಕಾರ್ಯಾಚರಣೆ ನಡೆಸಿದೆ. ಅತ್ತಾವರ ಬಾಬುಗುಡ್ಡೆ ಒಂದನೇ ಕ್ರಾಸ್ ರಸ್ತೆಯಲ್ಲಿ […]
ನಿಯಮ ಉಲ್ಲಂಘನೆ ವಾಹನ ಚಾಲಕರ ಲೈಸೆನ್ಸ್ ರದ್ದತಿಗೆ ಪ್ರಸ್ಥಾವನೆ, ಸರಕು ಸಾಗಾಟ ವಾಹನದಲ್ಲಿ ಮಾನವ ಸಾಗಾಟ

ಉಡುಪಿ: ಜಿಲ್ಲೆಯಲ್ಲಿ ಕಾನೂನು ಉಲ್ಲಂಘಿಸಿ ಶಾಲಾ ಮಕ್ಕಳನ್ನು ಸಾಗಿಸುತಿದ್ದ 51 ಶಾಲಾ ವಾಹನ, ಮಾನವರನ್ನು ಸಾಗಿಸುತಿದ್ದ 100 ಸರಕು ಸಾಗಾಟ ವಾಹನಗಳ ಮೇಲೆ ಕೇಸು ದಾಖಲಿಸಿ ದಂಡ ವಿಧಿಸಲಾಗಿದ್ದು, ಮೂರು ತಿಂಗಳಮಟ್ಟಿಗೆ ಚಾಲಕರ ಪರವಾನಿಗೆ ಲೈಸೆನ್ಸ್ ರದ್ಧತಿಗೆ ಆರ್‌ಟಿಒಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ. ಶುಕ್ರವಾರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಎಸ್‌ಪಿ ಫೋನ್ ಇನ್ ಕಾರ್ಯಕ್ರಮದಲ್ಲಿ ಈ ಕುರಿತು ಸಾರ್ವಜನಿಕರು ಮನವಿ ಮಾಡಿದರು. ರಿಕ್ಷಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ […]
ಅಲ್ಪಸಂಖ್ಯಾತ, ಪ್ರಗತಿಪರ ಒಕ್ಕೂಟಗಳಿಂದ ಉಡುಪಿಯಲ್ಲಿ ಪ್ರತಿಭಟನೆ

ಉಡುಪಿ: ದೇಶದಲ್ಲಿ ದೇಶ ವಿರೋಧಿ, ಸಂವಿಧಾನ ವಿರೋಧಿ, ಗುಂಪು ಹಿಂಸೆ ಹಾಗೂ ಹತ್ಯೆಗಳನ್ನು ಖಂಡಿಸಿ ದಲಿತ, ಹಿಂದುಳಿದ, ಅಲ್ಪ ಸಂಖ್ಯಾತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಉಡುಪಿ ಇದರ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮ ಚೌಕಿಯ ಎದುರು ಶುಕ್ರವಾರ ಪ್ರತಿಭಟನಾ ಮೆರವಣಿಗೆ ಸಭೆ ನಡೆಯಿತು. ಚಿತಂಕ ಕೆ. ಫಣಿರಾಜ್ ಮಾತನಾಡಿ, ದೇಶದಲ್ಲಿ ಗುಂಪು ಹಲ್ಲೆ ಹಾಗೂ ಹತ್ಯೆಗಳನ್ನು ಮಾಡುವ ಮೂಲಕ ಸಂವಿಧಾನವನ್ನು ನಿಷ್ಕ್ರೀಯಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಅದಕ್ಕೆ ಕೋಮುವಾದಿ ರಾಜಕೀಯವೇ ಪ್ರಮುಖ ಕಾರಣ. 2015ರಿಂದ ಈಚೆಗೆ ದೇಶದಲ್ಲಿ 95 […]
ಕ್ರಿಕೆಟ್ ಬೆಟ್ಟಿಂಗ್ ಮೂವರ ಬಂಧನ

ಮಂಗಳೂರು: ಮಂಗಳೂರಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಮಂಗಳೂರು ನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸಂತೋಷ್, ಜೀವನ್ ಕುಮಾರ್, ನಿಶಾಂತ್, ಬಂಧಿತರು. ಬಂಧಿತರಿಂದ ಒಟ್ಟು 1. 40 ಸಾವಿರ ರೂ. ಹಣ, 6 ಮೊಬೈಲ್, ಒಂದು ಕಾರು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು: ಮನೆಗೆ ಬೆಂಕಿ ಅಪಾರ ಹಾನಿ

ಮಂಗಳೂರು: ಮಂಗಳೂರಿನ ಪಂಪ್ ವೆಲ್ ನಂತೂರು ಸಮೀಪದ ಮನೆಯೊಂದಕ್ಕೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಮಂಗಳವಾರ ರಾತ್ರಿ 12 ಗಂಟೆ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿದೆ. ನವೀನ್ ತಾರೆತೋಟ ಎಂಬವರ ಮನೆ ಇದಾಗಿದ್ದು, ಮನೆ ಸುಟ್ಟು ಅಪಾರ ಹಾನಿ ಸಂಭವಿಸಿದೆ. ಸುಮಾರು 4 ಲಕ್ಷ ರೂ. ನಷ್ಟ ಉಂಟಾಗಿದೆ. ಕದ್ರಿ ಅಗ್ನಿಶಾಮಕ ದಳದಿಂದ ಕಾರ್ಯಚರಣೆ ನಡೆದಿದೆ.