ಮಂಗಳೂರು: ಮನೆಗೆ ಬೆಂಕಿ ಅಪಾರ ಹಾನಿ

ಮಂಗಳೂರು: ಮಂಗಳೂರಿನ ಪಂಪ್ ವೆಲ್ ನಂತೂರು ಸಮೀಪದ ಮನೆಯೊಂದಕ್ಕೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ.
ಮಂಗಳವಾರ ರಾತ್ರಿ 12 ಗಂಟೆ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿದೆ.
ನವೀನ್ ತಾರೆತೋಟ ಎಂಬವರ ಮನೆ ಇದಾಗಿದ್ದು, ಮನೆ ಸುಟ್ಟು ಅಪಾರ ಹಾನಿ ಸಂಭವಿಸಿದೆ. ಸುಮಾರು 4 ಲಕ್ಷ ರೂ. ನಷ್ಟ ಉಂಟಾಗಿದೆ. ಕದ್ರಿ ಅಗ್ನಿಶಾಮಕ ದಳದಿಂದ ಕಾರ್ಯಚರಣೆ ನಡೆದಿದೆ.