ದಸರಾ ರಜೆ ನೀಡದೆ ಸೆಮಿಸ್ಟರ್ ಪರೀಕ್ಷೆ: ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮಂಗಳೂರು: ದಸರಾ ಹಬ್ಬದ ಸಂಭ್ರಮದ ನಡುವೆಯೇ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಿರುವುದನ್ನು ವಿರೋಧಿಸಿ, ಮಂಗಳೂರಿನ ಬೆಂದೂರ್ವೆಲ್ನಲ್ಲಿರುವ ಖ್ಯಾತ ಸೈಂಟ್ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ಕಾಲೇಜು ಗೇಟ್ ಎದುರು ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನಲ್ಲಿ ಅಕ್ಟೋಬರ್ 12ರಿಂದ 28ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಲಾಗಿದೆ. ಕರಾವಳಿಯ ಪ್ರಮುಖ ಹಬ್ಬವಾದ ಮಂಗಳೂರು ದಸರಾ ಸಂದರ್ಭದಲ್ಲಿ ರಜೆ ನೀಡದೆ ಪರೀಕ್ಷೆ ನಡೆಸಲು ಮುಂದಾಗಿರುವ ಕಾಲೇಜು ಆಡಳಿತ ಮಂಡಳಿಯ ನಿರ್ಧಾರಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಸರಾ ಹಬ್ಬದ ಆಚರಣೆ ಹಾಗೂ […]
ನವರಾತ್ರಿ ಹಬ್ಬಕ್ಕೆ FSSAI ಹೈ ಅಲರ್ಟ್,ಆಹಾರ ಕಲಬೆರಕೆ ಮೇಲೆ ಕಣ್ಗಾವಲು!

ನವದೆಹಲಿ: ಹಬ್ಬದ ಸಂದರ್ಭದಲ್ಲಿ ಆಹಾರ ಕಲಬೆರಕೆಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಹಬ್ಬದ ವೇಳೆ ಸಿಹಿತಿಂಡಿ, ಹಾಲಿನ ಉತ್ಪನ್ನಗಳು, ಪಾನೀಯಗಳು, ಖಾದ್ಯ ತೈಲ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳ ಗುಣಮಟ್ಟದ ಮೇಲೆ ವಿಶೇಷ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಈ ಅವಧಿಯಲ್ಲಿ ಆಹಾರ ತಪಾಸಣೆ ಕಾರ್ಯವನ್ನು ಹೆಚ್ಚಿಸುವುದು, ಹೆಚ್ಚಿನ ಪ್ರಮಾಣದಲ್ಲಿ ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸುವಂತೆ ರಾಜ್ಯಗಳ ಆಹಾರ ಸುರಕ್ಷತಾ ಅಧಿಕಾರಿಗಳಿಗೆ […]
ಅಕ್ಟೋಬರ್ 1 ರಿಂದ ದೇಶದಲ್ಲಾಗುವ ಪ್ರಮುಖ ಬದಲಾವಣೆಗಳಿವು: ಏನೆಲ್ಲಾ ಬದಲಾವಣೆ, ಜನಸಾಮಾನ್ಯನ ಜೇಬಿನ ಮೇಲೆ ಪರಿಣಾಮ!

ಅ.1 ರಿಂದ ಹೊಸ ಬದಲಾವಣೆ ದೇಶದಲ್ಲಾಗಲಿದೆ. ಹೆಚ್ಚಿನ ಬದಲಾವಣೆಗಳಿಂದ ಅಂತಿಮವಾಗಿ ಹೊರೆ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ. ಜನಸಾಮಾನ್ಯ ದೈನಂದಿನ ಸಮಯ ಮಾತ್ರವಲ್ಲ, ಜನಸಾಮಾನ್ಯನ ಜೇಬಿನ ಮೇಲೆಯೂ ನೇರ ಪರಿಣಾಮ ಬೀರುವ ಹೊಸ ಬದಲಾವಣೆಗಳು ಯಾವುದು?ಇಲ್ಲಿದೆ ಮಾಹಿತಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಮತ್ತು ಸಬ್ಸಿಡಿ ಪರಿಷ್ಕರಣೆ ಪ್ರತಿ ತಿಂಗಳ ಮೊದಲ ದಿನದಂತೆ ಅಕ್ಟೋಬರ್ 1ರಂದು ತೈಲ ಕಂಪನಿಗಳು ವಾಣಿಜ್ಯ ಮತ್ತು ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳ ಹೊಸ ದರಗಳನ್ನು ಪ್ರಕಟಿಸಲಿವೆ. ಹೀಗಾಗಿ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲಿ ಏರಿಕೆ ಅಥವಾ […]
ಡೇಟಾ ಬೇಡ, ಕಾಲ್-ಎಸ್ಎಂಎಸ್ ಮಾತ್ರ ಸಾಕು ಎನ್ನುವವರಿಗೆ ಒಳ್ಳೆ ಸುದ್ದಿ: ಹೊಸ ರೀಚಾರ್ಜ್ ಪ್ಲಾನ್ ಕಡ್ಡಾಯಗೊಳಿಸಿದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ!

ನವದೆಹಲಿ: ಮೊಬೈಲ್ ಡೇಟಾ ಬಳಸದ, ಕೇವಲ ಕರೆ ಮತ್ತು ಎಸ್ಎಂಎಸ್ ಸೇವೆ ಬಳಸುವ ಗ್ರಾಹಕರಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮಹತ್ವದ ಪರಿಹಾರ ನೀಡಿದೆ. ಟೆಲಿಕಾಂ ಕಂಪನಿಗಳು ಇನ್ನು ಮುಂದೆ ಕೇವಲ ವಾಯ್ಸ್ ಮತ್ತು ಎಸ್ಎಂಎಸ್ ಸೇವೆ ಒಳಗೊಂಡ ಪ್ರತ್ಯೇಕ ರೀಚಾರ್ಜ್ ಪ್ಲಾನ್ಗಳನ್ನು ನೀಡುವುದು ಕಡ್ಡಾಯವಾಗಿದೆ. TRAI ಈ ಸಂಬಂಧ ‘ಟೆಲಿಕಾಂ ಗ್ರಾಹಕ ಸಂರಕ್ಷಣಾ (13ನೇ ತಿದ್ದುಪಡಿ) ನಿಯಮಾವಳಿ, 2026’ ಅನ್ನು ಸೆಪ್ಟೆಂಬರ್ 22ರಂದು ಪ್ರಕಟಿಸಿದೆ. ಡೇಟಾ ಇಲ್ಲದ ಪ್ಲಾನ್ಗಳೇನು? ಡೇಟಾ ಅಗತ್ಯವಿಲ್ಲದ ಗ್ರಾಹಕರಿಗಾಗಿ Voice […]
ರಾಜ್ಯದಲ್ಲಿ ಒಟ್ಟು 177 ತಾಲೂಕುಗಳು ಬರಪೀಡಿತ: ಮೂರನೇ ಹಂತದಲ್ಲಿ 53 ತಾಲೂಕು, ಉಡುಪಿಯ ಬ್ರಹ್ಮಾವರ ಕೂಡ ಬರಪೀಡಿತ!

ಬೆಂಗಳೂರು: ಮುಂಗಾರು ಮಳೆ ಕೊರತೆಯಿಂದ ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಮೂರನೇ ಹಂತದಲ್ಲಿ ಮತ್ತಷ್ಟು 53 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಮೊದಲ ಹಂತದಲ್ಲಿ 101 ಹಾಗೂ ಎರಡನೇ ಹಂತದಲ್ಲಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಮೂರನೇ ಹಂತದಲ್ಲಿ 53 ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದೆ. ಹೊಸದಾಗಿ ಸೇರ್ಪಡೆಯಾದ 53 ತಾಲೂಕುಗಳ ಪೈಕಿ 51 ತಾಲೂಕುಗಳು ತೀವ್ರ […]