ಒಂದು ನೆಲ್ಲಿಕಾಯಿಯಲ್ಲಿ ಅಡಗಿದೆ ಸೂಪರ್ ಪವರ್ : ನೆಲ್ಲಿಕಾಯಿ ಯಾಕೆ ತಿನ್ನಬೇಕು? ಹೇಗೆ ತಿನ್ನಬೇಕು?

ನೆಗಡಿ, ಕೆಮ್ಮು, ಜ್ವರದಂತಹ ತೊಂದರೆಗಳು ಈಗೀಗ ನಮ್ಮಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ ಮುಖ್ಯ. ಅದಕ್ಕಾಗಿ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರಗಳನ್ನು ಸೇವಿಸುವುದು ಅಗತ್ಯ. ನಮಗೆ ಸುಲಭವಾಗಿ ದೊರೆಯುವ ಮತ್ತು ಅತ್ಯಂತ ಉಪಯುಕ್ತವಾದ ಸೂಪರ್‌ಫುಡ್ ಎಂದರೆ ನೆಲ್ಲಿಕಾಯಿ. ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತವೆ ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ನಮ್ಮ ದೇಹಕ್ಕೆ ನೆಲ್ಲಿಕಾಯಿ ಯಾಕೆ […]
ಬಿಸಿಲು ಹೆಚ್ಚಾದಾಗ ನಮ್ಮ ದೇಹಕ್ಕೆ ಮೊಸರು ಒಳ್ಳೆದೋ? ಮಜ್ಜಿಗೆ ಒಳ್ಳೆದೋ, ನೀವು ತಿಳಿದುಕೊಂಡಿರಲೇಬೇಕಾದ ಸಂಗತಿಗಳಿವು!

ನಮ್ಮ ದಿನನಿತ್ಯದ ಆಹಾರದಲ್ಲಿ ಮೊಸರು ಮತ್ತು ಮಜ್ಜಿಗೆ ಪ್ರಮುಖ ಸ್ಥಾನ ಪಡೆದಿವೆ. ಇವು ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಉಪಯುಕ್ತವಾಗಿವೆ. ಹಾಲಿನಿಂದ ತಯಾರಾಗುವ ಮೊಸರು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ಹೊಟ್ಟೆಯನ್ನು ತುಂಬಿದಂತೆ ಅನುಭವ ಕೊಡುತ್ತದೆ.ಆದ್ರೆ ಈ ಬೇಸಿಗೆಯಲ್ಲಿ ಗಟಗಟ ಎಂದು ಮಜ್ಜಿಗೆ ಕುಡಿಬಹುದಾ ಅಥವಾ ಗಟ್ಟಿ ಮೊಸರು ಕುಡಿಯಬಹುದಾ ಯಾವುದು ಬೆಸ್ಟ್ ಎಂದು ಒಮ್ಮೆ ನೋಡೋಣ ಬನ್ನಿ ಮೊಸರು ಕುಡಿದರೆ ಏನಾಗುತ್ತದೆ? ಮೊಸರಿನಲ್ಲಿ ಪ್ರೋಟೀನ್ ಹೆಚ್ಚು ಇರುವುದರಿಂದ ಇದು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದರಲ್ಲಿ […]
ಉಡುಪಿ XPRESS.COM ಉಡುಪಿ ಪರ್ಯಾಯ ವಿಶೇಷ ಸಂಚಿಕೆ “ಪರ್ಯಾಯ ಚರಿತೆ”ಬಿಡುಗಡೆ

ಉಡುಪಿ: ಉಡುಪಿ xpress.com ಡಿಜಿಟೆಲ್ ಸುದ್ದಿ ಮಾಧ್ಯಮ, ಉಡುಪಿಯ ಶೀರೂರು ಪರ್ಯಾಯ ಮಹೋತ್ಸವದ ಕುರಿತು ಸಿದ್ಧಪಡಿಸಿದ ವಿಶೇಷ ಸಂಚಿಕೆ “ಪರ್ಯಾಯ ಚರಿತೆ” ಯನ್ನು ಶೀರೂರು ಮಠದ ಪರ್ಯಾಯ ಪೀಠವೇರಲಿರುವ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಶನಿವಾರ ಶೀರೂರು ಮಠದಲ್ಲಿ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ Xprss.Com ಸಂಪಾದಕರಾದ ಪ್ರಸಾದ್ ಶೆಣೈ, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ಸ್ವರೂಪ್ ಶ್ರೀಯನ್, ಅಶೋಕ್ ಆಚಾರ್ಯ ಕೊಂಡಾಡಿ ಉಪಸ್ಥಿತರಿದ್ದರು. ಸಂಚಿಕೆಯ ಕುರಿತ ವಿಡಿಯೋ ನೋಡಲು ಈ ಕೆಳಗಿನ ಫೇಸ್ಬುಕ್ ಲಿಂಕ್ […]
ರೈಲು ಸಾರಿಗೆಗೆ ಟ್ವಿಸ್ಟ್ ಕೊಡಲಿದೆ ಈ ಹೈಡ್ರೋಜನ್ ಚಾಲಿತ ರೈಲು:ಶೀಘ್ರದಲ್ಲಿ ಭಾರತದಲ್ಲಿ ಸಂಚಾರ ಶುರು ಮಾಡೋ ಈ ರೈಲಲ್ಲಿ ಏನೇನಿದೆ?

ರೈಲು ತಂತ್ರಜ್ಞಾನದಲ್ಲಿ ಭಾರತ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದೆ. ವಿಶ್ವದ ಅಗ್ರಗಣ್ಯ ರೈಲು ರಾಷ್ಟ್ರಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ದೇಶದ ಮೊದಲ ಹಾಗೂ ವಿಶ್ವದ ಅತಿ ಉದ್ದದ ಹೈಡ್ರೋಜನ್ ಚಾಲಿತ ರೈಲು ಶೀಘ್ರದಲ್ಲೇ ಸಂಚಾರ ಆರಂಭಿಸಲಿದೆ. ಶಬ್ದ ಮತ್ತು ಮಾಲಿನ್ಯವಿಲ್ಲದ ಈ ರೈಲು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿದೆ. ಈ ಹೈಡ್ರೋಜನ್ ರೈಲು ಹರಿಯಾಣದ ಜಿಂದ್–ಸೋನಿಪತ್ ಮಾರ್ಗದಲ್ಲಿ ಪ್ರಥಮವಾಗಿ ಸಂಚರಿಸಲಿದೆ. ಗಂಟೆಗೆ 110 ರಿಂದ 140 ಕಿಲೋಮೀಟರ್ ವೇಗದಲ್ಲಿ […]
ನೋಡಿದ ಕ್ಷಣಗಳನ್ನು ನೆನಪಿಟ್ಟುಕೊಳ್ಳುತ್ತೆ ಈ ಅಚ್ಚರಿಯ ಕನ್ನಡಕ :AI ಕನ್ನಡಕದ ಮಹಿಮೆ ಕೇಳಿ!

ಮನುಷ್ಯನು ಕಣ್ಣಾರೆ ಕಂಡದ್ದನ್ನೇ ಕೆಲವೊಮ್ಮೆ ಮರೆತುಬಿಡುತ್ತಾನೆ. ಆದರೆ ಇನ್ನು ಮುಂದೆ ಅಂತಹ ಮರೆವಿನ ಸಮಸ್ಯೆಗೆ ಪರಿಹಾರ ಸಿಗುವ ದಿನಗಳು ದೂರವಿಲ್ಲ. ಅಮೆರಿಕದ ವಿಜ್ಞಾನಿಗಳು ನೋಡಿದ ಪ್ರತಿಯೊಂದು ಕ್ಷಣವನ್ನೂ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ವಿಶಿಷ್ಟ ಸ್ಮಾರ್ಟ್ ಕನ್ನಡಕವನ್ನು ಅಭಿವೃದ್ಧಿಪಡಿಸಿದ್ದಾರೆ. ವಾಷಿಂಗ್ಟನ್‌ನ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಹೊಸ ತಂತ್ರಜ್ಞಾನ ಆಧಾರಿತ ಕನ್ನಡಕಕ್ಕೆ ‘ಪಿಕ್ಸ್’ಎಂಬ ಹೆಸರನ್ನು ನೀಡಿದ್ದಾರೆ. ಈ ಕನ್ನಡಕವನ್ನು ಧರಿಸಿದ ವ್ಯಕ್ತಿ ನೋಡಿದ ಮುಖಗಳು, ಸ್ಥಳಗಳು ಹಾಗೂ ವಸ್ತುಗಳನ್ನು ಕ್ಯಾಮೆರಾ ಮತ್ತು ಕೃತಕ ಬುದ್ಧಿಮತ್ತೆ (ಎಐ) […]