ಅಬ್ಬರಿಸಿದ “ಕೂಲಿ” ಟ್ರೈಲರ್: ರಜನಿಕಾಂತ್ ಜೊತೆಗೆ ಉಪೇಂದ್ರ ಕೂಡ ನಟಿಸಿರೋ “ಕೂಲಿ” ಹೆಚ್ಚಿಸಿತು ಸಿನಿ ಜ್ವರ!

ರಜನಿಕಾಂತ್ ನಟನೆಯ “ಕೂಲಿ” ಟ್ರೈಲರ್ ಎಲ್ಲೆಡೆ ಅಬ್ಬರಿಸುತ್ತಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ “ಕೂಲಿ”ಚಿತ್ರದ ಟ್ರೈಲರ್ ಗೆ ಎಲ್ಲಡೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. “ಕೂಲಿ” ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರವಿದು. “ಕೂಲಿ” ನಾಯಕ ನಟನಾಗಿ ರಜನಿಕಾಂತ್ ಅವರ 171 ನೇ ಚಿತ್ರವಾಗಿದ್ದು ಈ ವರ್ಷದಲ್ಲಿ ದಾಖಲೆ ಬರೆಯುವ ಚಿತ್ರವೆಂದು ಹೇಳಲಾಗ್ತಿದೆ. ಕನ್ನಡಕ್ಕೂ ಈ ಚಿತ್ರಕ್ಕೆ ಮಹತ್ವವಿದೆ ಯಾಕೆಂದರೆ ರಜನಿಕಾಂತ್ ಜೊತೆಗೆ, ಕೂಲಿ ಚಿತ್ರದಲ್ಲಿ ನಟ ಉಪೇಂದ್ರ ಕೂಡ ನಟಿಸಿದ್ದಾರೆ. ಅಲ್ಲದೇ ನಾಗಾರ್ಜುನ, ಸೌಬಿನ್ […]
ಮಜ್ಜಿಗೆ ಅಂದ್ರೆ ಸುಮ್ನೆ ಅಲ್ಲ:ಮಜ್ಜಿಗೆಯ ಪ್ರಯೋಜನ ಗೊತ್ತಾದ್ರೆ ಇನ್ಮುಂದೆ ನೀವು ಕುಡಿಯದೇ ಇರಲ್ಲ.

ಮಜ್ಜಿಗೆನಾ? ಯಾರಿಗೆ ಬೇಕು ಮಾರಾಯ, ಈ ಬೇಸಿಗೆಗೆ ಯಾವುದಾದ್ರೂ ಒಳ್ಳೆ ಸಾಫ್ಟ್ ಡ್ರಿಂಕ್ಸ್ ಕುಡಿದ್ರೆ ಆಹಾ ತಂಪಾಗುತ್ತೆ, ಮಜ್ಜಿಗೆಯಲ್ಲಿ ಏನಿದೆ ಎಂದು ಬಹುತೇಕ ಮಂದಿ ಮಜ್ಜಿಗೆಯನ್ನು ನಿರ್ಲಕ್ಷ ಮಾಡುವವರೇ ಜಾಸ್ತಿ. ಆದರೆ ಈ ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುದರಿಂದ ಆಗುವ ಆರೋಗ್ಯಲಾಭ ಕೇಳಿದ್ರೆ, ಇಷ್ಟೊಂದೆಲ್ಲಾ ಆಗುತ್ತಾ ಮಜ್ಜಿಗೆ ಕುಡಿದರೆ ಎಂದು ನೀವು ಹುಬ್ಬೇರಿಸಿಬಿಡಬಹುದು. ಹೌದು ಊಟದ ನಂತರ ಮಜ್ಜಿಗೆ ಕುಡಿಯುವುದು, ಅಥವಾ ಅನ್ನಕ್ಕೆ ಮಜ್ಜಿಗೆ ಕಲಸಿ ತಿನ್ನುವುದು ಬಹುತೇಕ ಮಂದಿ ರೂಢಿಯಲ್ಲಿಟ್ಟುಕೊಂಡಿರುವ ಅಭ್ಯಾಸ. ಈ ಅಭ್ಯಾಸ ಉತ್ತಮ ಆರೋಗ್ಯಕ್ಕೆ […]
ಎಲ್ಲಾದ್ರೂ ಈ ಹಣ್ಣು ಸಿಕ್ಕಿದ್ರೆ ಮಿಸ್ ಮಾಡದೇ ತಿನ್ನಿ:ದೇಹಕ್ಕೆ ಈ ಹಣ್ಣು ಪವರ್ ಫುಲ್

ಮಾರುಕಟ್ಟೆಯಲ್ಲಿ ನೂರಾರು ವಿದೇಶಿ ಹಣ್ಣು ಈಗೀಗ ಲಗ್ಗೆ ಇಡುತ್ತಿದೆ. ಆದರೆ ನಾವು ನಮ್ಮ ಊರಿನಲ್ಲಿ ಬೆಳೆಯುವ, ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿರುವ ಕೆಲವು ಹಣ್ಣುಗಳನ್ನೇ ಮರೆತುಬಿಡುತ್ತಿದ್ದೇವೆ. ಅವುಗಳಲ್ಲಿ ಸ್ಟಾರ್ ಫ್ರೂಟ್ (ಧಾರೆಹುಳಿ) ಹಣ್ಣು ಕೂಡ ಒಂದು. ಈ ಹಣ್ಣು ನಮ್ಮಲ್ಲಿ ಹೊಸ ಶಕ್ತಿ ಚೈತನ್ಯವನ್ನು ತುಂಬಿಸುವಷ್ಟು ಪವರ್ ಫುಲ್. ಇದು ಹುಳಿಮಿಶ್ರಿತ ಸಿಹಿ ಹಣ್ಣಾಗಿದ್ದು, ಅನೇಕ ಪೋಷಕಾಂಶಗಳ ಆಗರ ಈ ಹಣ್ಣು. ಬಾಲಿವುಡ್‌ನ ಅತ್ಯಂತ ಫಿಟೆಸ್ಟ್ ದಿವಾ ಶಿಲ್ಪಾ ಶೆಟ್ಟಿ ಕೂಡ ಇದರ ಪೌಷ್ಟಿಕಾಂಶದ ಶಕ್ತಿಯನ್ನು ಶ್ಲಾಘಿಸುತ್ತಾರೆ. […]
ಈ ಮಹಿಳೆ ಕೊಟ್ಟ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಕೆಲ ದಿನಗಳಲ್ಲೇ ತೂಕ ಇಳಿಸಬಹುದು !

ತೂಕ ಇಳಿಸೋದೇ ಈ ಕಾಲದ ಬಹುತೇಕ ಮಂದಿಯ ದೊಡ್ಡ ಸಮಸ್ಯೆ, ಸುಲಭದಲ್ಲಿ ತೂಕ ಇಳಿಸಲು ಏನಾದ್ರೂ ಟಿಪ್ಸ್ ಇದ್ರೆ ಹೇಳಿ ಎಂದು ಕೇಳುವವರಿದ್ದಾರೆ. ಅಂತವರಿಗೆ ಇತ್ತೀಚೆಗೆ ಸಿಂಪಲ್ಲಾಗಿ ಕೆಲವು ದಿನಗಳಲ್ಲೇ 33 ಕೆ ಜಿ ತೂಕ ಇಳಿಸಿಕೊಂಡ ತರಬೇತುದಾರರಾದ ನಿಧಿ ಗುಪ್ತಾ ಕೆಲವು ಸಿಂಪಲ್ ಟಿಪ್ಸ್ ಗಳನ್ನು ಕೊಟ್ಟಿದ್ದಾರೆ. ನೀವೂ ತೂಕ ಇಳಿಸುವ ಯೋಚನೆಯಲ್ಲಿದ್ರೆ ಈ ಟಿಪ್ಸ್ ಮಿಸ್ ಮಾಡದೇ ಫಾಲೋ ಮಾಡಿ. ನೇರ ಪ್ರೋಟೀನ್, ತಾಜಾ ತರಕಾರಿಗಳು, ಹಣ್ಣುಗಳು, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳಂತಹ ಸಂಪೂರ್ಣ, […]
ಊದುಬತ್ತಿ-ಮತಾಪು: ಉಪಯೋಗ ಮತ್ತು ಉಪದ್ರವಗಳೇನು ಗೊತ್ತಾ?ಒಮ್ಮೆ ಓದಿ ಉದಯ ಶೆಟ್ಟಿ ಬರೆದ ಬರಹ

ಭಾರತೀಯರಾದ ನಾವು ನಮ್ಮ ನಂಬಿಕೆಗಳ ಆಚರಣೆಗಾಗಿ ಕೆಲವೊಂದು ವಸ್ತುಗಳನ್ನು ಅವ್ಯಾಹತವಾಗಿ ಉಪಯೋಗಿಸಿಕೊಂಡು ಬರುತ್ತಿದ್ದೇವೆ. ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದರು ಎಂಬ ಒಂದೇ ಕಾರಣಕ್ಕಾಗಿ ಆ ವಸ್ತುಗಳನ್ನು ಅವರಿಗಿಂತ ಹೆಚ್ಚಾಗಿ ಉಪಯೋಗಿಸುತ್ತೇವೆ. ಆ ವಸ್ತುಗಳನ್ನು ಬಳಸುವುದರಿಂದ ಆಗುವ ಉಪಯೋಗಕ್ಕಿಂತ ಉಪದ್ರವಗಳೇ ಅಧಿಕ. ಸನಾತನಿಗಳಾದ ನಮ್ಮ ಪೂಜೆ, ಪುನಸ್ಕಾರ, ಹಬ್ಬ ಹರಿದಿನಗಳಲ್ಲಿ ಉಪಯೋಗಿಸಲ್ಪಡುವ ಊದುಕಡ್ಡಿ (ಅಗರಬತ್ತಿ)ಗಳ ಉಪಯೋಗ ಮತ್ತು ಅವುಗಳಿಂದಾಗುವ ಉಪದ್ರವಗಳ ಬಗ್ಗೆ ತಾರ್ಕಿಕವಾಗಿ ನಮ್ಮನ್ನು ನಾವು ವಿಶ್ಲೇಷಣೆಗೆ ಒಳಪಡಿಸಿಕೊಳ್ಳಬೇಕಾದ ಕಾಲವಿದು. ಊದುಬತ್ತಿ : ಊದುಬತ್ತಿಯು ತನ್ನನ್ನು ತಾನು ಉರಿಸಿಕೊಂಡು ಸುತ್ತಲ […]