ಉಡುಪಿ- ದ.ಕ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ, ಪರಿಸರ, ಅರಣ್ಯ ನಾಶದಿಂದ ಭವಿಷ್ಯ ಘೋರ ! ವರದಿ ಹೇಳಿದ್ದೇನು?

ಉಡುಪಿ/ದ.ಕ: ರಾಜ್ಯದ ಅತ್ಯಧಿಕ ಮಳೆಯ ಪ್ರದೇಶಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಈ ಬಾರಿ ಪರಿಸ್ಥಿತಿ ಭೀಕರವಾಗಿದೆ. ಹೆಸರಿಗೆ ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುತ್ತಿರುವ ಮಂಗಳೂರು ಮತ್ತು ಇಡೀ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಅಲ್ಲದೇ ಸಾಮಾನ್ಯವಾಗಿ ಮಳೆಯ ಸಮೃದ್ಧಿಯಿಂದ ಪ್ರಸಿದ್ಧಿಯಾಗಿರುವ ದ.ಕ ಜಿಲ್ಲೆಯಲ್ಲಿ ಈಗ ಬಿಸಿಲಿನ ತೀವ್ರತೆ ಹೆಚ್ಚಾಗಿ ಜನರನ್ನು ಕಂಗೆಡಿಸಿದೆ. ನೀರಿನ ಮೂಲಗಳೇ ಮಾಯ:ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ತಾಪಮಾನ 35ರಿಂದ 36 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗಿದ್ದು, ಅದರ ಪರಿಣಾಮವಾಗಿ […]
ಬೇಸಿಗೆಗೆ ಇಡ್ಲಿ, ದೋಸೆ, ವಡೆ ತಿನ್ನುವ ಮೊದಲು ಎಚ್ಚರಿಕೆ ಬೇಕೇ ಬೇಕು: ಇಡ್ಲಿ ತಿಂದು ಉದ್ಯೋಗಿಗಳು ಅಸ್ವಸ್ಥರಾದ ಪ್ರಕರಣ, ಈಗ ಹಲವು ಚರ್ಚೆಗೆ ಕಾರಣ!

ಬೆಂಗಳೂರು: ನಗರದ ಖಾಸಗಿ ಕಂಪನಿಯ ಕ್ಯಾಂಟೀನ್ನಲ್ಲಿ ಇಡ್ಲಿ, ವಡೆ ಹಾಗೂ ಸಾಂಬಾರ್-ಅನ್ನ ಸೇವಿಸಿದ ಬಳಿಕ 97 ಮಂದಿ ಉದ್ಯೋಗಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯ ಬಳಿಕ ಹುದುಗಿಸಿದ (fermented) ಆಹಾರಗಳ ಸುರಕ್ಷತೆ ಕುರಿತು ಚರ್ಚೆಗಳು ಮತ್ತೆ ಜೋರಾಗಿದೆ. ಸಾಮಾನ್ಯವಾಗಿ ಇಡ್ಲಿ, ದೋಸೆ, ವಡೆಯಂತಹ ಹುದುಗಿಸಿದ ಆಹಾರ ಪದಾರ್ಥಗಳನ್ನು ಕರುಳಿನ ಆರೋಗ್ಯಕ್ಕೆ ಉತ್ತಮ, ಸುಲಭವಾಗಿ ಜೀರ್ಣವಾಗುವ ಆಹಾರವೆಂದು ಪರಿಗಣಿಸಲಾಗುತ್ತದೆ. ಆದರೆ ಬೇಸಿಗೆಯ ಹೆಚ್ಚಿನ ತಾಪಮಾನದಲ್ಲಿ ಇವುಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸದಿದ್ದರೆ ಅಪಾಯ ಉಂಟಾಗಬಹುದು […]
“ನನ್ನ ಕೆಲಸವೇ ಪ್ರಪಂಚ ಎಂದುಕೊಂಡಿದ್ದೆ, ಈಗ ಆ ಕೆಲಸವನ್ನೇ ಕಳೆದುಕೊಂಡಿದ್ದೇನೆ” ವೈರಲ್ ಆಗ್ತಿದೆ ಮಹಿಳಾ ಉದ್ಯೋಗಿಯ ಈ ವಿಡಿಯೋ!

ಬೆಂಗಳೂರು: ಕಾರ್ಪೊರೇಟ್ ಲೋಕದಲ್ಲಿ ಎಷ್ಟು ನಿಷ್ಠೆಯಿಂದ ಕೆಲಸ ಮಾಡಿದರೂ, ಕೆಲವೊಮ್ಮೆ ಅನಿರೀಕ್ಷಿತವಾಗಿ ಸಂಕಷ್ಟ ಎದುರಾಗಬಹುದು. ಇಂತಹದೇ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ತನ್ನ ಉದ್ಯೋಗವನ್ನೇ ಜೀವನದ ಕೇಂದ್ರಬಿಂದು ಮಾಡಿಕೊಂಡಿದ್ದ ಮಹಿಳೆಯೊಬ್ಬರು, ದಿಢೀರ್ ಕೆಲಸ ಕಳೆದುಕೊಂಡ ಅನುಭವವನ್ನು ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಬೆಂಗಳೂರಿನ ನಿಧಿ ಎಂಬ ಯುವತಿಯ ವಿಡಿಯೋ ಇದೀಗ ವೈರಲ್ ಆಗಿದ್ದು, ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ನಡುವಿನ ಸಮತೋಲನದ ಅಗತ್ಯವನ್ನು ಮತ್ತೆ ನೆನಪಿಸಿದೆ. “ನನ್ನ ಕೆಲಸವೇ ನನ್ನ ಪ್ರಪಂಚ ಎಂದುಕೊಂಡಿದ್ದೆ. […]
ಕಾಫಿಗೂ ತಟ್ಟಿತು ಇರಾನ್-ಇಸ್ರೇಲ್ ಯುದ್ಧದ ಬಿಸಿ: ಜಾಗತಿಕ ಮಟ್ಟದಲ್ಲಿ ದುಬಾರಿಯಾಗಲಿದೆ ಕಾಫಿ! ಕಾಫಿ ಪ್ರಿಯರಿಗೆ ಶಾಕ್

ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ತೀವ್ರತೆ ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದ ಹಾರ್ಮುಜ್ ಜಲಸಂಧಿಯಲ್ಲಿ ಸಾಗಣೆ ವ್ಯತ್ಯಯ ಉಂಟಾಗಿದೆ. ಈ ಜಲಸಂಧಿ ಜಾಗತಿಕ ತೈಲ ಸರಬರಾಜಿನ ಪ್ರಮುಖ ದ್ವಾರವಾಗಿರುವುದರಿಂದ, ಇಲ್ಲಿ ಉಂಟಾದ ಅಡಚಣೆ ಇಂಧನ ಮಾರುಕಟ್ಟೆಗೂ ಹಾಗೂ ಜಾಗತಿಕ ವ್ಯಾಪಾರಕ್ಕೂ ಹೊಡೆತ ನೀಡಿದೆ. ಇದರಿಂದ ತೈಲ ಮತ್ತು ಅನಿಲದ ಬೆಲೆಗಳು ಏರಿಕೆಯಾಗಿರುವುದರ ಜೊತೆಗೆ, ಕಾಫಿ ಸೇರಿದಂತೆ ಹಲವು ಕೃಷಿ ಉತ್ಪನ್ನಗಳ ದರಗಳಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಸೋಮವಾರದ ವಹಿವಾಟಿನ […]
ರಾಜ್ಯ ಸರಕಾರದ ರೈತಸಿರಿ ಯೋಜನೆಯಿಂದ ಕೃಷಿಕರಿಗೆ ಏನೆಲ್ಲಾ ಲಾಭವಿದೆ? ಈ ಮಾಹಿತಿ ನಿಮಗೆ ಗೊತ್ತಿರಲಿ!

ಸಿರಿಧಾನ್ಯಗಳೆಂದರೆ ರಾಗಿ, ಹಾರಕ, ನವಣೆ, ಸಾಮೆ, ಬರಗು, ಕೊರಲೆ ಊದಲು, ಸಜ್ಜೆ ಮತ್ತು ಜೋಳ ಬೆಳೆಗಳ ಸಮೂಹ. ಇವುಗಳಿಗೆ 5೦೦೦ ಇತಿಹಾಸವಿದೆ. ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಒರಿಸ್ಸಾ, ಛತ್ತೀಸ್ಗಡ, ಜಾರ್ಖಂಡ್ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಉತ್ತರಖಂಡ ರಾಜ್ಯಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಸಿರಿಧಾನ್ಯಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅವುಗಳಲ್ಲಿ ಪೋಷಕಾಂಶಗಳು ನಾರಿನಿಂದ ಮತ್ತು ಖನಿಜಾಂಶಗಳು ಹೇರಳವಾಗಿದೆ. ಸಿರಿಧಾನ್ಯಗಳು ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಬೊಜ್ಜಿನಂತ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಪೌಷ್ಟಿಕ ಆಹಾರ, […]