ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ: ಸಿಐಟಿಯು ರಾಜ್ಯ ಕಾರ್ಯದರ್ಶಿ ಮಾಂತೇಶ್
ಉಡುಪಿ: ಕಳೆದ 45 ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಪ್ರಸ್ತುತ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಬೆಲೆ ಏರಿಕೆಯ ಪರಿಣಾಮ ಸಾಮಾನ್ಯ ಜನರಿಗೆ ಬದುಕು ನಡೆಸುವುದೇ ದುಸ್ತರವಾಗಿದೆ. ನೋಟು ಅಮಾನೀಕರಣ ಆದ ಬಳಿಕ ನಗರ ಪ್ರದೇಶದಲ್ಲಿ ಉದ್ಯೋಗ ಕಡಿಮೆ ಆಗಿದೆ. ಜನರು ನಗರದಿಂದ ಗ್ರಾಮೀಣ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಾಂತೇಶ್ ಹೇಳಿದರು. ಮೇ ದಿನಾಚರಣೆಯ ಅಂಗವಾಗಿ ಸಿಐಟಿಯು ಉಡುಪಿ ತಾಲ್ಲೂಕು ಘಟಕದ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸೈನಿಕರ ಸ್ಮಾರಕದ ಬಳಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ […]
ಪ್ರೀತಿಯಿಂದ ಬಾಳುವುದನ್ನು ಕಲಿಯಿರಿ: ರಾಜ ನಿರ್ಮಾಲ್ ನಾಥಜೀ ಸ್ವಾಮೀಜಿ
ಉಡುಪಿ: ಮನುಷ್ಯನ ಬದುಕಿನಲ್ಲಿ ಸುಖ–ದುಃಖ, ಗೆಲುವು–ಸೋಲು ಎಂಬುದು ಆತನ ಕರ್ಮದಿಂದ ಬರುತ್ತದೆ. ಪ್ರತಿಯೊಂದು ಕಾರ್ಯವನ್ನು ಪ್ರೀತಿಯಿಂದ ನಿರ್ವಹಿಸಿದರೆ ಯಶಸ್ಸು ಸಾಧ್ಯವಾಗುತ್ತದೆ. ಬದುಕಿನಲ್ಲಿ ಎಲ್ಲರನ್ನು ಪ್ರೀತಿಸುವುದರೊಂದಿಗೆ ಜೀವಿಸಬೇಕು. ಭಗವಂತ ಪ್ರೀತಿ, ಧ್ಯಾನ, ಭಕ್ತಿಗೆ ಒಲಿಯುತ್ತಾನೆ. ಧಾನ್ಯಕ್ಕಿಂತ ದೊಡ್ಡ ಕಾರ್ಯ ಬೇರೊಂದಿಲ್ಲ ಎಂದು ಕದ್ರಿ ಯೋಗೀಶ್ವರ ಮಠದ ರಾಜ ನಿರ್ಮಾಲ್ ನಾಥಜೀ ಸ್ವಾಮೀಜಿ ಹೇಳಿದರು. ಜೋಗಿ ಸಮಾಜ ಸೇವಾ ಸಮಿತಿ ಉಡುಪಿ-ಕಾರ್ಕಳ ವತಿಯಿಂದ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ನಡೆದ ಸಮಿತಿಯ ದಶಮಾನೋತ್ಸವ ‘ಜೋಗಿ ದಶಮಿ–2019’ ಹಾಗೂ ಜೋಗಿ ವಟುಗಳ […]
ಪುಣ್ಯಕೋಟಿ ಬಳಗದಿಂದ 44ನೇ ಗೋಪೂಜೆ
ಉಡುಪಿ: ಇಲ್ಲಿನ ಕುಕ್ಕಿಕಟ್ಟೆಯ ಪುಣ್ಯಕೋಟಿ ಗೋ ಸೇವಾ ಬಳಗದ 44ನೇ ತಿಂಗಳ ಗೋಪೂಜೆಯು ಪಣಿಯಾಡಿಯ ದೇವಸ್ಥಾನದ ಬಳಿಯಿರುವ ಸಿಂಧು ಪೂಜಾರಿ ಅವರ ಮನೆಯಲ್ಲಿ ಶನಿವಾರ ನಡೆಯಿತು. ಸಿಂಧು ಪೂಜಾರಿ ಅವರ ಮನೆಯ ಸದಸ್ಯರು ಮತ್ತು ಪುಣ್ಯಕೋಟಿ ಬಳಗದ ಸದಸ್ಯರು ಸೇರಿ ಗೋವಿಗೆ ನವಧಾನ್ಯಗಳನ್ನು ತಿನ್ನಿಸಿ, ಆರತಿ ಬೆಳಗಿ ಗೋಪೂಜೆಯನ್ನು ನೆರವೇರಿಸಿದರು. ನಂತರ ಗೋವುಗಳಿಗೆ ಪಶು ಆಹಾರ ಮತ್ತು ಗೋಪಾಲಕರಿಗೆ ಗೋಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಣಿಯಾಡಿ ನಿವಾಸಿ ಭಾರತಿ ಕೆ.ಎಂ. ಪಣಿಯಾಡಿ ವಾರ್ಡ್‌ನ ನಗರಸಭಾ ಸದಸ್ಯ […]
ತುರ್ತು ಸಂದರ್ಭದಲ್ಲಿ ಸನ್ನದ್ದರಿರಿ: ಕರಾವಳಿ ಕಾವಲು ಪೊಲೀಸ್‍ಗೆ ಸೂಚನೆ
ಉಡುಪಿ: ಇತ್ತೀಚೆಗೆ ದಿನಗಳಲ್ಲಿ ಉದ್ಭವಿಸಿರುವ ಆತಂಕ ಪರಿಸ್ಥಿತಿಯ ಹಿನ್ನಲೆಯಲ್ಲಿ , ಕರಾವಳಿ ಕಾವಲು ಪೊಲೀಸರಿಂದ ಸಮುದ್ರಗಸ್ತು ತೀವ್ರಗೊಳಿಸಿದ್ದು, ಈ ಹಿನ್ನಲೆಯಲ್ಲಿ ಎ.ಎಮ್.ಪ್ರಸಾದ್ ಡಿಜಿಪಿ ಐಎಸ್‍ಡಿ ಹಾಗೂ ಸಿ.ಹೆಚ್ ಪ್ರತಾಪರೆಡ್ಡಿ, ಎಡಿಜಿಪಿ ಐಎಸ್‍ಡಿ ಬೆಂಗಳೂರು ರವರು , ಉಡುಪಿ ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಕರಾವಳಿಯ ಸಮುದ್ರದಲ್ಲಿ ಇಂಟರ್‍ಸೆಪ್ಟರ್ ಬೋಟ್‍ನಲ್ಲಿ ಪೆಟ್ರೋಲಿಂಗ್ ಮಾಡಿದ ಅವರು, ಶ್ರೀಲಂಕಾದಲ್ಲಿ ಸಂಭವಿಸಿರುವ ಉಗ್ರರ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ , ಕರಾವಳಿ ಕಾವಲು ಪೊಲೀಸ್‍ವತಿಯಿಂದ , ಕರ್ನಾಟಕ ಕರಾವಳಿಯ ಮಂಗಳೂರಿನಿಂದ ಕಾರವಾರದತನಕ ಬಿಗಿ ಭದ್ರತೆ, […]
ಸಿಇಟಿ ಪರೀಕ್ಷೆ: ನಿಷೇದಾಜ್ಞೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಏಪ್ರಿಲ್ 29 ಮತ್ತು 30 ರಂದು, ಉಡುಪಿ ತಾಲೂಕಿನ 6, ಕುಂದಾಪುರ ತಾಲೂಕಿನ 3 ಮತ್ತು ಕಾರ್ಕಳ ತಾಲೂಕಿನ 2 ಸೇರಿದಂತೆ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ಈ ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷ ರಹಿತವಾಗಿ ನಡೆಯಲು, ಎಲ್ಲಾ ರೀತಿಯ ಅವ್ಯವಹಾರ ತಡೆಗಟ್ಟಲು ಮತ್ತು ಕಿಡಿಗೇಡಿಗಳು ಪರೀಕ್ಷಾ ಕೇಂದ್ರದ ಪರಿಸರವನ್ನು ಕಲುಷಿತಗೊಳಿಸದಂತೆ, ನಿಗಧಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಹಾಗೂ ಸುತ್ತಲೂ […]