ನಾಗರಿಕ ಸಮಿತಿಯಿಂದ ತುಮಕೂರಿನ ಅನಥಾಶ್ರಮಕ್ಕೆ ಬಟ್ಟೆ ವಿತರಣೆ.

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಇವರಿಂದ ಹಳೆ ಬಟ್ಟೆಗಳಿಗೆ ಮರುಜೀವ ನೀಡುವ 6 ನೇ ಹಂತದ ಕಾರ್ಯಕ್ರಮವು ಮಾರುತಿ ವಿಥೀಕಾ ಬಳಿ ಇರುವ ಸಮಿತಿಯ ಕಛೇರಿಯ ಆಶ್ರಯದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮದಲ್ಲಿ  ಸಾರ್ವಜನಿಕರು ಸಮಿತಿಯ ಯೋಜನೆಗೆ ಒಪ್ಪಿಸಿದ, ಉತ್ತಮ ಗುಣಮಟ್ಟದ 35 ಮೂಟೆ ಬಟ್ಟೆಗಳನ್ನು, ತುಮಕೂರಿನಲ್ಲಿ ಅನಾಥಾಶ್ರಮ ನಡೆಸುತ್ತಿರುವ, ಶ್ರೀ ಶಾರದಾಂಬ ಟ್ರಸ್ಟ್ ಇವರಿಗೆ ಹಸ್ತಾಂತರಿಸಲಾಯಿತು. ಬಟ್ಟೆಗಳನ್ನು ಟ್ರಸ್ಟಿನ ಪರವಾಗಿ ತುಮಕೂರಿನ ಮಣಿಕಂಠ, ಆಶಾ ಅವರು ಸ್ವಿಕರಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ಸಂತೋಷ್ ಸರಳಬೆಟ್ಟು, ಪಲ್ಲವಿ ಸಂತೋಷ್ ಉಪಸ್ಥಿತರಿದ್ದರು.
ನಾಗರಿಕ ಸಮಿತಿಯು ಹಳೆ ಬಟ್ಟೆಗಳಿಗೆ ಮರುಜೀವ ನೀಡುವ  ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಮೊದಲು ಸಾರ್ವಜನಿಕರಿಂದ ಸಂಗ್ರಹಗೊಂಡ ಬಟ್ಟೆಗಳನ್ನು ವಲಸೆ ಕಾರ್ಮಿಕರ ಬಡಾವಣೆ, ಕೊರಗರ ಜನವಸತಿ ಪ್ರದೇಶಗಳಲ್ಲಿ 5 ಹಂತಗಳಲ್ಲಿ ಇಗಾಗಲೇ ವಿತರಣೆ ಮಾಡಿದ್ದೆವೆ,  ಎಂದು ಸಮಿತಿಯ ನಿತ್ಯಾನಂದ ಒಳಕಾಡು ಅವರು ಹೇಳಿದ್ದಾರೆ.