ಜಿಲ್ಲೆಯ ವಿಕಲಚೇತನರಿಗೆ ದೊರೆಯಲಿದೆ ಕೃತಕ ‘ಆವಯವ’
ಉಡುಪಿ, ಮೇ 7 : ಉಡುಪಿ ಜಿಲ್ಲೆಯಲ್ಲಿನ ವಿಕಲಚೇತನರು ಕೃತಕ ಆವಯವಗಳ ಹುಡುಕಾಟಕ್ಕೆ ಶ್ರಮ ಪಡಬೇಕಿಲ್ಲ, ಖಾಸಗಿಯಲ್ಲಿ ದುಬಾರಿ ದರ ತೆರುವ ಅವಶ್ಯಕತೆಯಿಲ್ಲ, ವಿಕಲಚೇತನರು ಸಾಮಾನ್ಯರಂತೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಅನುಕೂಲವಾಗುವಂತ ಕೃತಕ ಆವಯವಗಳು ಇನ್ನು ಉಡುಪಿ ಯಲ್ಲಿಯೇ ದೊರೆಯಲಿದೆ. ಪ್ರಸ್ತುತ ಉಡುಪಿ ರೆಡ್ ಕ್ರಾಸ್ ಭವನದಲ್ಲಿ ಈ ಕೃತಕ ಆವಯವ ತಯಾರಿಕೆ ಮತ್ತು ಜೋಡಣಾ ಕೇಂದ್ರ ಮೇ 8 ರಿಂದ ಪ್ರಾರಂಭವಾಗಲಿದೆ. ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಆರಂಭವಾಗಿರುವ ಈ ಕೇಂದ್ರದಲ್ಲಿ ಮೊದಲ […]
ನಾಗರಿಕ ಸಮಿತಿಯಿಂದ ತುಮಕೂರಿನ ಅನಥಾಶ್ರಮಕ್ಕೆ ಬಟ್ಟೆ ವಿತರಣೆ.
ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಇವರಿಂದ ಹಳೆ ಬಟ್ಟೆಗಳಿಗೆ ಮರುಜೀವ ನೀಡುವ 6 ನೇ ಹಂತದ ಕಾರ್ಯಕ್ರಮವು ಮಾರುತಿ ವಿಥೀಕಾ ಬಳಿ ಇರುವ ಸಮಿತಿಯ ಕಛೇರಿಯ ಆಶ್ರಯದಲ್ಲಿ ಸೋಮವಾರ ನಡೆಯಿತು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಮಿತಿಯ ಯೋಜನೆಗೆ ಒಪ್ಪಿಸಿದ, ಉತ್ತಮ ಗುಣಮಟ್ಟದ 35 ಮೂಟೆ ಬಟ್ಟೆಗಳನ್ನು, ತುಮಕೂರಿನಲ್ಲಿ ಅನಾಥಾಶ್ರಮ ನಡೆಸುತ್ತಿರುವ, ಶ್ರೀ ಶಾರದಾಂಬ ಟ್ರಸ್ಟ್ ಇವರಿಗೆ ಹಸ್ತಾಂತರಿಸಲಾಯಿತು. ಬಟ್ಟೆಗಳನ್ನು ಟ್ರಸ್ಟಿನ ಪರವಾಗಿ ತುಮಕೂರಿನ ಮಣಿಕಂಠ, ಆಶಾ ಅವರು ಸ್ವಿಕರಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, […]
ಹೆಚ್1ಎನ್1- ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಸೂಚನೆ
ಉಡುಪಿ: ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಕಡೆ ಹೆಚ್ಚಾಗಿ ಶ್ವಾಸಕೋಶದ ಸೋಂಕು ಕಾಣಿಸಿಕೊಂಡು ನೆಗಡಿ, ಕೆಮ್ಮು, ಜ್ವರದ ಜೊತೆಗೆ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದವರನ್ನು ಪರೀಕ್ಷಿಸಿದಾಗ ಹೆಚ್1ಎನ್1 ಸೋಂಕು ಪತ್ತೆಯಾಗಿರುವುದು ಕಂಡು ಬಂದಿದ್ದು, ತಾಲೂಕಿನಲ್ಲಿಯೂ ಕೆಲವೊಂದು ಪ್ರಕರಣಗಳು ವರದಿಯಾಗುತ್ತಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್1ಎನ್1 ಕುರಿತು ಮಾಹಿತಿಯುಳ್ಳ ಕರ ಪತ್ರಗಳನ್ನು ವಿತರಿಸುವ ಹಾಗೂ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದು ಹೆಚ್1ಎನ್1 ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಸಾಮಾನ್ಯ ಫ್ಲೂ ಹರಡುವ ರೀತಿಯಲ್ಲಿಯೇ ಹೆಚ್1ಎನ್1 […]
ಮೇ 7: ಬಸವ ಜಯಂತಿ ಆಚರಣೆ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಬಸವ ಜಯಂತಿ ಆಚರಣೆಯು ಮೇ 7 ರಂದು ಬೆಳಗ್ಗೆ 10 ಕ್ಕೆ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ. ರೂಪೇಶ್ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಕಂಟ್ರೋಲ್ ರೂಂ ಸ್ಥಾಪನೆ
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಎದುರಾಗಬಹುದಾದ ಯಾವುದೇ ಸಂಭಾವ್ಯ ಅನಾಹುತಗಳನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ 24*7 ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದ್ದು, ಈ ಮುಂದಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ಉಡುಪಿ ಜಿಲ್ಲಾಧಿಕಾರಿ ಕಚೇರಿ ದೂ.ಸಂಖ್ಯೆ: 0820-2574802 ಮತ್ತು ಟೋಲ್ ಫ್ರೀ ನಂಬರ್ 1077, ಪೊಲೀಸ್ ಇಲಾಖೆ ದೂ.ಸಂಖ್ಯೆ: 0820-2526444, ಜಿಲ್ಲಾ ಪಂಚಾಯತ್ ದೂ.ಸಂಖ್ಯೆ: 0820-2574945, ಆರೋಗ್ಯ ಇಲಾಖೆ ದೂ.ಸಂಖ್ಯೆ: 0820-2536650, ಮೆಸ್ಕಾಂ ಇಲಾಖೆ ದೂ.ಸಂಖ್ಯೆ: 0820-2521201, ಶಿಕ್ಷಣ ಇಲಾಖೆ […]