ಆಚಾರ್ಯಾಸ್‌ ಏಸ್‌: ಸುಮಂತ್‌ ಕಾರಂತ್‌, ಆದಿತ್ಯ ಎ. ರಾವ್‌ ಅವರಿಗೆ ರ್ಯಾಂಕ್

ಉಡುಪಿ, ಮೇ 7: 9ನೇ ತರಗತಿ, ಎಸೆಸೆಲ್ಸಿ, ಪಿಯುಸಿ, ಸಿಇಟಿ, ನೀಟ್, ಜೆಇಇ ಮೇನ್ಸ್‌, ಕಾಮರ್ಸ್‌ ಹಾಗೂ ಬ್ಯಾಕಿಂಗ್‌ ಪ್ರವೇಶ ಪರೀಕ್ಷೆಗಳ ಉತ್ಕೃಷ್ಟ ಫಲಿತಾಂಶಕ್ಕಾಗಿ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್‌ ಏಸ್‌ ಸಂಸ್ಥೆಯಲ್ಲಿ ತರಬೇತಿ ಪಡೆದ ಸುಮಂತ್‌ ಕಾರಂತ್‌ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್‌, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆದಿತ್ಯ ಎ. ರಾವ್‌ ರಾಜ್ಯಕ್ಕೆ 10ನೇ ರ್ಯಾಂಕ್‌ ಪಡೆದಿದ್ದಾರೆ. 10 ವಿದ್ಯಾರ್ಥಿಗಳು ಗರಿಷ್ಠ ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ಗೌರವಾರ್ಪಣೆ
ಸುಮಂತ್‌ ಕಾರಂತ್‌ ಮತ್ತು ಆದಿತ್ಯ ಎ. ರಾವ್‌ ಅಲ್ಲದೆ ರಾಷ್ಟ್ರಮಟ್ಟದ ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಶೇ. 98 ಅಂಕ ಗಳಿಸಿ ಉನ್ನತ ಅಧ್ಯಯನಕ್ಕೆ ಆಯ್ಕಯಾಗಿರುವ ಅದಿತ್ಯ ಎ. ರಾವ್,‌ ಅಲ್ಲದೆ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿರುವ ಪ್ರಮುಖ 5 ವಿದ್ಯಾರ್ಥಿಗಳಾದ ಜೀವನ್‌ ಜೋಗಿ (ಶೇ. 99.33), ಪ್ರದ್ಯುಮ್ನ ಭಟ್ (ಶೇ. 98), ಸಿಂಚನ ‌(ಶೇ. 98), ವಾರೆನ್‌ ರಿವನ್‌ ಡಿ’ಸೋಜಾ (ಶೇ. 98) ಹಾಗೂ ಎಸೆಸೆಲ್ಸಿಯಲ್ಲಿ ಗರಿಷ್ಠ ಅಂಕ ಗಳಿಸಿರುವ ಭೂಮಿಕ ಎಸ್‌. ದೇವಾಡಿಗ (ಶೇ. 98.56), ಅಕ್ಷತಾ ಭಟ್ (ಶೇ.98), ಶ್ರೀಕನ್ಯಾ (ಶೇ. 96), ಮೈನಾ (ಶೇ. 96) ಹಾಗೆಯೇ ವಾಣಿಜ್ಯ ವಿಭಾಗದಲ್ಲಿ ಗರಿಷ್ಠ ಅಂಕ ಗಳಿಸಿದ ಮಾನಸ, ಕೀರ್ತನ, ಶ್ರೀ ಲಕ್ಷ್ಮೀ ಶೆಣೈ, ವಿಘ್ನೇಶ್‌ ಸಾಮಂತ್‌, ರೋಹಿತ್‌ ಎ. ಜೆ. ಅಮಿನ್‌ ಇವರನ್ನು ಪಾರಿತೋಷಕ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.
30ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶೇ. 95ಕ್ಕೂ ಅಧಿಕ ಅಂಕ ಗಳಿಸಿದ್ದು, 50ಕ್ಕೂ ಅಧಿಕ ವಿದ್ಯಾರ್ಥಿಗಳು ಶೇ. 90ಕ್ಕೂ ಅಧಿಕ ಅಂಕ ಗಳಿಸಿದ್ದಾರೆ.
ಜು. 1ರಂದು 9, 10, ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ, ಸಿಇಟಿ ಹಾಗೂ ಕಾಮರ್ಸ್‌ನ ದೈನಂದಿನ ಹೊಸ ಬ್ಯಾಚ್‌ಗಳು ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಅಭಿನಂದನ ಕಾರ್ಯಕ್ರಮ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ತೆಂಕುಪೇಟೆಯ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಮುಂಭಾಗದ ರಾಧೇಶಾಮ್‌ ಕಟ್ಟಡದಲ್ಲಿರುವ ಏಸ್‌ ಕಚೇರಿಯನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ನಿರ್ದೇಶಕ ಪಿ. ಲಾತವ್ಯ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.