ಜ. 12 ರಂದು ಶಾಲಾ ಮಕ್ಕಳಿಂದ ‘ಸ್ವಚ್ಛ ಉಡುಪಿ’ ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಉಡುಪಿ: ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಪ್ಲಾಸ್ಟಿಕ್ ಮತ್ತು ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಜ. 12 ರಂದು ಭಾರತ ಸೇವಾದಳ ಉಡುಪಿ ಜಿಲ್ಲಾ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ರಜತೋತ್ಸವ ಸಮಿತಿಯ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ 1096 ಸರಕಾರಿ, ಅನುದಾನಿತ ಮತ್ತು ಖಾಸಗಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸುಮಾರು 1,60,000 ಶಾಲಾ ಮಕ್ಕಳಿಂದ ಏಕಕಾಲದಲ್ಲಿ ಆಯಾಯ ಶಾಲೆಗಳ ಅಕ್ಕ ಪಕ್ಕದ ವಠಾರದಲ್ಲಿ “ಸ್ವಚ್ಛ ಉಡುಪಿ” ಎಂಬ ಶೀರ್ಷಿಕೆಯೊಂದಿಗೆ […]

ಪ್ರತಿಯೊಂದನ್ನು ಧನಾತ್ಮಕವಾಗಿ ಸ್ವೀಕರಿಸುವ ಗುಣವಿರಲಿ: ಡಾ. ನಂದ ಕಿಶೋರ್ 

ಹಿರಿಯಡಕ: ಹಿರಿಯಡಕದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ವಠಾರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ “ರಾಷ್ಟ್ರ, ರಾಷ್ಟ್ರೀಯತೆ ಹಾಗೂ ಯುವಜನತೆ” ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮಾಹೆಯ ಹಿರಿಯ ಉಪನ್ಯಾಸಕ ಡಾ. ನಂದ ಕಿಶೋರ್ ಅವರು ಮಾತನಾಡಿ, ‘ನಮ್ಮ ದೇಶದ ಸನಾತನ ಧರ್ಮದಂತೆ ಎಲ್ಲವನ್ನು ತನ್ನಲ್ಲಿ ಸ್ವೀಕರಿಸುವ ಗುಣವನ್ನು ಇಂದಿನ ಯುವಕರು ಹೊಂದುವಂತಾಗಬೇಕು ಎಂದು ಹೇಳಿದರು. ನೆಹರು ಯುವ ಕೇಂದ್ರ ಉಡುಪಿಯ ಮಾರ್ಗದರ್ಶನದಲ್ಲಿ ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್  ಇನ್ನಿತರ ಸಂಘಟನೆಗಳಾದ ಸ್ಥಳೀಯ ವಿಶ್ವ ಹಿಂದೂಪರಿಷತ್ ಭಜರಂಗದಳ, […]