ಹಿರಿಯಡಕ: ಹಿರಿಯಡಕದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ವಠಾರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ “ರಾಷ್ಟ್ರ, ರಾಷ್ಟ್ರೀಯತೆ ಹಾಗೂ ಯುವಜನತೆ” ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಮಾಹೆಯ ಹಿರಿಯ ಉಪನ್ಯಾಸಕ ಡಾ. ನಂದ ಕಿಶೋರ್ ಅವರು ಮಾತನಾಡಿ, ‘ನಮ್ಮ ದೇಶದ ಸನಾತನ ಧರ್ಮದಂತೆ ಎಲ್ಲವನ್ನು ತನ್ನಲ್ಲಿ ಸ್ವೀಕರಿಸುವ ಗುಣವನ್ನು ಇಂದಿನ ಯುವಕರು ಹೊಂದುವಂತಾಗಬೇಕು ಎಂದು ಹೇಳಿದರು.
ನೆಹರು ಯುವ ಕೇಂದ್ರ ಉಡುಪಿಯ ಮಾರ್ಗದರ್ಶನದಲ್ಲಿ ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಇನ್ನಿತರ ಸಂಘಟನೆಗಳಾದ ಸ್ಥಳೀಯ ವಿಶ್ವ ಹಿಂದೂಪರಿಷತ್ ಭಜರಂಗದಳ, ದೇವಾಡಿಗ ಯುವ ಸಂಘಟನೆ, ನರ್ತಕಿ ಫ್ರೆಂಡ್ಸ್ ಸೇವಾ ಟ್ರಸ್ಟ್, ಮೊಗವೀರ ಯುವ ಸಂಘಟನೆ, ಉಡುಪಿ ಜಿಲ್ಲೆ-ಹಿರಿಯಡಕ ಘಟಕ, ನಮ್ಮ ಬಿರುವೆರ್, ಶ್ರೀ ರಾಮ್ ಫ್ರೆಂಡ್ಸ್-ಕೊಂಡಾಡಿ, ವಿಶ್ವಕರ್ಮ ಶಿಲ್ಪಕಲಾ ಸಂಘ, ಸ್ನೇಹವೃಂದ ಇವರುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದೇವಳದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮಾಂಬೆಟ್ಟು ಗೋವರ್ಧನ್ದಾಸ್ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಿವಾಕರ ಹಿರಿಯಡ್ಕ ಇವರು ಸ್ವಾಗತಿಸಿ, ರಾಘವೇಂದ್ರ ಜಿ ವಂದಿಸಿದರು. ಬಾಲಕೃಷ್ಣ ಬಿ ಕೆ ಕಾರ್ಯಕ್ರಮ ನಿರ್ವಹಿಸಿದರು.
ಸಂಘಟನೆಗಳ ಪ್ರತಿನಿಧಿಗಳಾದ ಸುಜಯ ಶೆಟ್ಟಿ, ಭಜರಂಗದಳದ ಜಿಲ್ಲಾ ಸಂಚಾಲಕ್ ದಿನೇಶ್ ಮೆಂಡನ್, ಸಚ್ಚಿದಾನಂದ ಶೆಟ್ಟಿ, ರತ್ನಾಕರ್ ದೇವಾಡಿಗ, ವಿಜಯ ಶೆಟ್ಟಿ ಕೊಂಡಾಡಿ, ಯೋಗೀಶ್ ಆಚಾರ್ಯ, ಸವಿತಾ ಕೋಟ್ಯಾನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.