ನಾಪತ್ತೆಯಾದ ಮಲ್ಪೆ ಮೀನುಗಾರರು ದುಬೈನಲ್ಲಿ ಪತ್ತೆ?
ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಮೀನುಗಾರರು ದುಬೈನಲ್ಲಿ ಪತ್ತೆಯಾಗಿದ್ದಾರೆ ಎಂದು ಸಂಸದೆ ಮಿನಾಕ್ಷಿ ಲೇಖಿ ಭಾಷಣದಲ್ಲಿ ಪ್ರಸ್ತಾಪಿಸಿದರು. ಭಾನುವಾರ ಮಲ್ಪೆಯಲ್ಲಿ ನಡೆದ ಪಾಂಚಜನ್ಯ ಸಮಾವೇಶದಲ್ಲಿ ಮಾತನಾಡುತ್ತಾ ಪ್ರಸ್ತಾಪಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಇರದ ಕಾರಣ ಭಾಷಣ ಮುಗಿದ ಬಳಿಕ ಸಂಸದೆಯನ್ನು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ಭಾರತದಿಂದ ನಾಪತ್ತೆಯಾದ ಮೀನುಗಾರರಲ್ಲಿ ಇಬ್ಬರು ದುಬೈನಲ್ಲಿ ಪತ್ತೆಯಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ. ಈ ಬಗ್ಗೆ ಹೆಚ್ಚೇನು ಮಾಹಿತಿ ಇಲ್ಲ. ಅವರು ಮಲ್ಪೆ […]
ಮೀನುಗಾರರ ಪತ್ತೆ ಕಾರ್ಯದಲ್ಲಿ ತೊಡಗಿಕೊಳ್ಳಿ, ಕರ್ನಾಟಕದ ನೆರೆ ರಾಜ್ಯಗಳಿಗೆ ಕೇಂದ್ರದ ಸೂಚನೆ
ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿರುವ ಏಳು ಮಂದಿ ಮೀನುಗಾರರ ರಕ್ಷಣಾ ಕಾರ್ಯಾಚರಣೆಯಲ್ಲಿ ಕರ್ನಾಟಕದ ನೆರೆ ರಾಜ್ಯಗಳು ಕೂಡ ತೊಡಗಿಸಿಕೊಳ್ಳಬೇಕೆಂದು ಕೇಂದ್ರದ ಗೃಹ ಸಚಿವಾಲಯ ಸೂಚನೆ ನೀಡಿದೆ. ನಾಪತ್ತೆಯಾಗಿರುವ ಮೀನುಗಾರರ ಪತ್ತೆ ಕಾರ್ಯ ಸೂಕ್ತ ರೀತಿಯಲ್ಲಿ ಸಹಕಾರ ನೀಡುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ಮೀನುಗಾರರ ಮುಖಂಡರು ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರುವ ಕೇಂದ್ರ ಗೃಹ ಸಚಿವಾಲಯವು ತನ್ನ ಅಧೀನದಲ್ಲಿ ಬರುವ […]
ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ: ಅಂಬಲಪಾಡಿ ದೇವಿಯ ಅಭಯ, ಮೂರು ವಾರದೊಳಗೆ ಮೀನುಗಾರರ ಸುಳಿವು.!
ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿ ಕಣ್ಮರೆಯಾಗಿರುವ ಏಳು ಮೀನುಗಾರರು ಸುರಕ್ಷಿತವಾಗಿದ್ದು, ಅವರ ಬಗ್ಗೆ ಮೂರು ವಾರದೊಳಗೆ ಸುಳಿವು ಕೊಡುತ್ತೇನೆ. ನೀವು ಆತಂಕ ಪಡುವ ಅಗತ್ಯವಿಲ್ಲ ಎಂದು ಅಂಬಲಪಾಡಿ ದೇಗುಲದ ದೇವಿ ಅಮ್ಮನವರು ಮೀನುಗಾರರ ಕುಟುಂಬದವರಿಗೆ ಅಭಯ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರು ನಾಪತ್ತೆಯಾಗಿ 46 ದಿನಗಳು ಕಳೆದಿವೆ. ಆದರೆ ಈವರೆಗೂ ಮೀನುಗಾರರ ಯಾವುದೇ ಸುಳಿವು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ […]
ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ: ಅವಘಡ ಸಂಭವಿಸುವ ಸುಳಿವು ಮೊದಲೇ ಸಿಕ್ಕಿತ್ತಾ.?
ಉಡುಪಿ: ಡಿ. 13ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಗೆ ಅವಘಡ ಸಂಭವಿಸುವ ಮುನ್ಸೂಚನೆ ಮೊದಲೇ ಸಿಕ್ಕಿತ್ತು. ಬೋಟ್ ಬಂದರಿನಿಂದ ಹೊರಟು 3 ಕಿ.ಮೀ. ಕ್ರಮಿಸುತ್ತಿದ್ದಂತೆ ಬೋಟ್ ನ ರೇಡಿಯೇಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. ರೇಡಿಯಟರ್ ನಲ್ಲಿ ದೋಷ ಕಂಡು ಬಂದ ತಕ್ಷಣವೇ ಚಾಲಕ ಬೋಟ್ ಅನ್ನು ಬಂದರಿನತ್ತಾ ತಿರುಗಿಸಿದ್ದಾನೆ. ದಡಕ್ಕೆ ಬಂದು ರೇಡಿಯೆಟರ್ ಅನ್ನು ಸರಿಪಡಿಸಿಕೊಂಡು ಪುನಃ ಮೀನುಗಾರಿಕೆ ತೆರಳಿದ್ದಾರೆ. ತಮ್ಮ […]
ಏಳು ಮಂದಿ ಮೀನುಗಾರರ ನಾಪತ್ತೆ ಪ್ರಕರಣ: ಐಎನ್ ಎಸ್ ಕೊಚ್ಚಿ ಯುದ್ಧ ನೌಕೆಯಿಂದ ಸಮುದ್ರದ ತಳದಲ್ಲಿ ಶೋಧ
ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಹಾಗೂ ಏಳು ಮಂದಿ ಮೀನುಗಾರರು ಕಣ್ಮರೆಯಾಗಿ 34 ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಯಾವುದೇ ಅವಘಡಕ್ಕೆ ತುತ್ತಾಗಿ ಸಮುದ್ರದೊಳಗೆ ಮುಳುಗಿರಬಹುದೆಂಬ ಸಂಶಯದ ಮೇರೆಗೆ ಭಾರತೀಯ ನೌಕಾ ಪಡೆ ತನ್ನ ಐಎನ್ಎಸ್ ಕೊಚ್ಚಿ ಎಂಬ ಯುದ್ಧ ನೌಕೆಯ ಮೂಲಕ ಸಮುದ್ರ ತಳಭಾಗದಲ್ಲಿ ಶೋಧಕಾರ್ಯ ಆರಂಭಿಸಿದೆ. ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟು ಮತ್ತು ಅದರಲ್ಲಿದ್ದ ಮಾಲೀಕ ಚಂದ್ರಶೇಖರ ಕೋಟ್ಯಾನ್ ಸೇರಿ 7 ಮಂದಿ ಮೀನುಗಾರರು ಡಿ.15ರಂದು ಮಧ್ಯರಾತ್ರಿ […]