ಮಣಿಪಾಲ: ಡಿವೈಡರಿಗೆ ಸ್ಕೂಟರ್ ಡಿಕ್ಕಿ; ಯುವತಿ ಸಾವು

ಮಣಿಪಾಲ: ಸ್ಕೂಟರ್ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರೆ ಮೃತಪಟ್ಟು, ಸಹಸವಾರೆ ಗಾಯಗೊಂಡ ಘಟನೆ ಗುರುವಾರ ಮಣಿಪಾಲ ಟೆಂಪೋ ಸ್ಟ್ಯಾಂಡ್ ಬಳಿ ನಡೆದಿದೆ. ಮೃತಳನ್ನು ಹಿಂದುಜಾ ಎಂದು ಗುರುತಿಸಲಾಗಿದೆ. ವಿದ್ಯಾರತ್ನ ನಗರ ಕೀರ್ತಿ ಸಾಗರ ಅಪಾರ್ಟಮೆಂಟ್ ನ ನಿವಾಸಿ 25 ವರ್ಷದ ಎಂ. ವರ್ಷಿಣಿ ಗಾಯಗೊಂಡಿದ್ದಾರೆ. ವರ್ಷಿಣಿ ಅವರು ಸ್ನೇಹಿತೆ ಹಿಂದುಜಾ ಅವರ ವೆಸ್ಪ ಸ್ಕೂಟರ್ ನಲ್ಲಿ ಹಿಂಬದಿ ಸವಾರೆಯಾಗಿ ಮಣಿಪಾಲ ಟೈಗರ್ ಸರ್ಕಲ್ ನಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. […]

ಭಾರತದ ರಸ್ತೆಗಳಲ್ಲಿ ಇಳಿಯಲಿದೆಯೆ ಅಂಬಾಸಿಡರ್ 2.0? ಇವಿ ಅವತಾರದಲ್ಲಿ ಪುನರಾಗಮನಕ್ಕೆ ಸಜ್ಜಾಗುತ್ತಿದೆಯೆ ಹಳೆ ಮಾಡೆಲ್ ಕಾರು?

ನವದೆಹಲಿ: ಎಪ್ಪತ್ತರ ದಶಕದಲ್ಲಿ 75 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದ, ಬಹು ಸುಪ್ರಸಿದ್ದ ಸಾಂಪ್ರದಾಯಿಕ ಅಂಬಾಸಿಡರ್ ಕಾರುಗಳು ತೆರೆಮರೆಗೆ ಸರಿದು ಹಲವು ವರ್ಷಗಳಾಗಿವೆ. ಆದರೀಗ ಹಳೆ ಮಾಡೆಲ್ ಕಾರುಗಳನ್ನು ಮತ್ತೆ ಹೊಸ ಅವತಾರದಲ್ಲಿ ಭಾರತದ ರಸ್ತೆಗಿಳಿಸಲು ಮಾತೃ ಕಂಪನಿ ಹಿಂದೂಸ್ತಾನ್ ಮೋಟಾರ್ಸ್ ಸಜ್ಜಾಗುತ್ತಿದೆ ಎಂದು ವರದಿಯಾಗಿದೆ. ತನ್ನ ಐಕಾನಿಕ್ ಅಂಬಾಸಿಡರ್ ಕಾರುಗಳಿಗೆ ಭಾರತದಲ್ಲಿ ಪ್ರಸಿದ್ಧವಾಗಿರುವ ಹಿಂದೂಸ್ತಾನ್ ಮೋಟಾರ್ಸ್, ಭಾರತೀಯ ಮಾರುಕಟ್ಟೆಯಲ್ಲಿ ತನ್ನನ್ನು ಪುನರ್ ಸ್ಥಾಪಿಸಲು ಯೋಜಿಸುತ್ತಿದ್ದು, ಈ ಬಾರಿ ಎಲೆಕ್ಟ್ರಿಕ್ ವಾಹನ ತಯಾರಕನಾಗಿ ಹೊರಹೊಮ್ಮಲಿದೆ ಎನ್ನಲಾಗಿದೆ. ತನ್ನ […]

ಮಲ್ಪೆ: ಚಲಿಸುತ್ತಿರುವ ಸ್ಕೂಟರ್ ನಲ್ಲೇ ಉಸಿರು ನಿಲ್ಲಿಸಿದ ಮೀನುಗಾರ

ಮಲ್ಪೆ: ಮೀನುಗಾರಿಕೆ ಮುಗಿಸಿಕೊಂಡು ಸ್ಕೂಟರ್ ನಲ್ಲಿ‌ ಹಿಂಬದಿ ಸವಾರನಾಗಿ ಮನೆಗೆ ತೆರಳುತ್ತಿದ್ದ ವೇಳೆ ಹೃದಯಾಘಾತವಾಗಿ ಮೀನುಗಾರನೋರ್ವ ಮೃತಪಟ್ಟ ಘಟನೆ ಮಲ್ಪೆ ಕಂಬಳತೋಟ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಮಲ್ಪೆ ಕಂಬಳತೋಟ ನಿವಾಸಿ 32 ವರ್ಷದ ಪ್ರತಾಪ್ ಮೃತಪಟ್ಟ ಮೀನುಗಾರ. ಇವರು ಇಂದು ಬೆಳಿಗ್ಗೆ ಮೀನುಗಾರಿಕೆ ಮುಗಿಸಿಕೊಂಡು ಅಕ್ಕನ ಮಗ ಕಿರಣ್ ಎಂಬಾತನ ಸ್ಕೂಟರ್ ನಲ್ಲಿ ಹಿಂಬದಿ‌ ಸವಾರನಾಗಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಪ್ರತಾಪ್ ದಿಢೀರ್ ಅಸ್ವಸ್ಥಗೊಂಡು ಕಿರಣ್ ಮೈಮೇಲೆ ಬಿದಿದ್ದರು. ತಕ್ಷಣವೇ ಕಲ್ಯಾಣಪುರ ಗೊರಾಠಿ ಅಸ್ಪತ್ರೆಗೆ   ಕರೆದುಕೊಂಡು […]

ಸಾಲಿಗ್ರಾಮದಲ್ಲಿ ಸ್ಕೂಟರ್ ಗೆ ಬಸ್ ಢಿಕ್ಕಿ‌; ಸವಾರ ಸಾವು

ಕುಂದಾಪುರ: ಬಸ್ಸೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸಾಲಿಗ್ರಾಮ ಆಂಜನೇಯ ದೇವಸ್ಥಾನದ ತಿರುವಿನ ಬಳಿ ನಡೆದಿದೆ. ಮೃತರನ್ನು ಬನ್ನಾಡಿ ಗ್ರಾಮದ ಬಡಾಬೆಟ್ಟು ಉಪ್ಲಾಡಿ ನಿವಾಸಿ 56 ವರ್ಷದ ಶೀನ ಪೂಜಾರಿ ಎಂದು ಗುರುತಿಸಲಾಗಿದೆ. ಮೇ 6ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಇವರ ಸ್ಕೂಟರ್‌ಗೆ ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ ಬರುತ್ತಿದ್ದ ಬಸ್ ಢಿಕ್ಕಿ ಹೊಡೆದಿದೆ. ಇದರಿಂದಾಗಿ  ಸ್ಕೂಟರ್  ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಶೀನ ಪೂಜಾರಿ, […]

ಮಣಿಪಾಲ: ವ್ಯಕ್ತಿಗೆ ಹಲ್ಲೆ ನಡೆಸಿ ಬಂಗಾರದ ಚೈನ್, ಮೊಬೈಲ್, ಸ್ಕೂಟರ್ ನೊಂದಿಗೆ ಎಸ್ಕೇಪ್

ಮಣಿಪಾಲ: ವ್ಯಕ್ತಿಯೊಬ್ಬರಿಗೆ ಪರಿಚಿತನೇ ದೋಖಾ ಮಾಡಿದ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಉಡುಪಿ ಹೆರ್ಗಾ ನಿವಾಸಿ ರಮೇಶ್ ಆಚಾರ್ಯ ಎಂಬವರಿಗೆ ಪರಿಚಿತನಾದ ಪ್ರಶಾಂತ್ ಎಂಬಾತನಿಂದಲೇ ಸಖತ್ ದೋಖಾ ಆಗಿದೆ.‌ ರಮೇಶ್ ಅವರು ನಿನ್ನೆ ರಾತ್ರಿ 9ಗಂಟೆ ಸುಮಾರಿಗೆ ಆರೋಪಿ ಪ್ರಶಾಂತ್ ನನ್ನು ಭೇಟಿಯಾಗಿದ್ದರು. ಬಳಿಕ ಪ್ರಶಾಂತ್, ಡ್ರಿಂಕ್ಸ್ ಕುಡಿಯುವ ಎಂದು ಹೇಳಿದಂತೆ ಉಡುಪಿಯಲ್ಲಿ ಬಿಯರ್‌‌ ಖರೀದಿಸಿ ಇಬ್ಬರೂ ಕರಂಬಳ್ಳಿ ಗುಜರಿ ಅಂಗಡಿಯ ಬಳಿ ಹೋಗಿ ಬಿಯರ್‌‌ ಸೇವನೆ ಮಾಡಿದ್ದಾರೆ. ಬಳಿಕ ರಾತ್ರಿ […]