ಮಣಿಪಾಲ: ಡಿವೈಡರಿಗೆ ಸ್ಕೂಟರ್ ಡಿಕ್ಕಿ; ಯುವತಿ ಸಾವು

ಮಣಿಪಾಲ: ಸ್ಕೂಟರ್ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರೆ ಮೃತಪಟ್ಟು, ಸಹಸವಾರೆ ಗಾಯಗೊಂಡ ಘಟನೆ ಗುರುವಾರ ಮಣಿಪಾಲ ಟೆಂಪೋ ಸ್ಟ್ಯಾಂಡ್ ಬಳಿ ನಡೆದಿದೆ. ಮೃತಳನ್ನು ಹಿಂದುಜಾ ಎಂದು ಗುರುತಿಸಲಾಗಿದೆ. ವಿದ್ಯಾರತ್ನ ನಗರ ಕೀರ್ತಿ ಸಾಗರ ಅಪಾರ್ಟಮೆಂಟ್ ನ ನಿವಾಸಿ 25 ವರ್ಷದ ಎಂ. ವರ್ಷಿಣಿ ಗಾಯಗೊಂಡಿದ್ದಾರೆ. ವರ್ಷಿಣಿ ಅವರು ಸ್ನೇಹಿತೆ ಹಿಂದುಜಾ ಅವರ ವೆಸ್ಪ ಸ್ಕೂಟರ್ ನಲ್ಲಿ ಹಿಂಬದಿ ಸವಾರೆಯಾಗಿ ಮಣಿಪಾಲ ಟೈಗರ್ ಸರ್ಕಲ್ ನಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಸ್ಕೂಟರ್ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂದುಜಾ ಅವರ ತಲೆಗೆ ತೀವ್ರ ಗಾಯವಾಗಿದ್ದು, ಕೂಡಲೇ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಹಿಂದುಜಾ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.