ಖ್ಯಾತ ಹಿರಿಯ ನಟ ‘ಅಂಕಲ್ ಲೋಕನಾಥ್’ ನಿಧನ
ಸ್ಯಾಂಡಲ್ ವುಡ್ ಖ್ಯಾತ ಹಿರಿಯ ನಟ ಅಂಕಲ್ ಲೋಕನಾಥ್(89) ಅವರು ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಸಾವಿನ ಸುದ್ದಿ ಕನ್ನಡ ಚಿತ್ರರಂಗಕ್ಕೆ ಬರಸಿಡಿಲಿನಂತೆ ಬಡಿದಿದೆ. ಸುಮಾರು 1000ಕ್ಕೂ ಹೆಚ್ಚು ನಾಟಕಗಳು 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಲೋಕನಾಥ್ ಇಂದು ಕೇವಲ ನೆನಪು ಮಾತ್ರ. ‘ಗೆಜ್ಜೆಪೂಜೆ’, ‘ನಾಗರಹಾವು’, ‘ಭೂತಯ್ಯನ ಮಗ ಅಯ್ಯು’, ‘ಬಂಗಾರದ ಪಂಜರ’, ‘ಮಿಂಚಿನ ಓಟ’ ಸೇರಿದಂತೆ ಹಲವು ಚಿತ್ರಗಳಲ್ಲಿ ಹಲವು ಪಾತ್ರಗಳಿಗೆ ಲೋಕನಾಥ್ ಜೀವ ತುಂಬಿದ್ದರು. ಲೋಕನಾಥ್ ನಿಧನಕ್ಕೆ ಸ್ಯಾಂಡಲ್ ವುಡ್ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.
ಸೌತ್ ಸ್ಟಾರ್ ಗಳನ್ನು ಹಿಂದಿಕ್ಕಿದ ರಶ್ಮಿಕಾ ಮಂದಣ್ಣ
ಇದೀಗ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸ್ಟಾರ್ ಗಳಲ್ಲಿ ಖ್ಯಾತ ನಟರನ್ನು ಹಿಂದಿಕ್ಕಿ ರಶ್ಮಿಕಾ ಮಂದಣ್ಣ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡದ ಯಾವ ನಟರು ಈ ಪಟ್ಟಿಯಲ್ಲಿಲ್ಲ. ತಮಿಳಿನ ಸ್ಟಾರ್ ನಟರು ಕೂಡ ಕಾಣಿಸಿದ್ದು ಕಡಿಮೆ. ಆದ್ರೆ, ತೆಲುಗು ನಟರೇ ಹೆಚ್ಚು ಇರುವ ಟಾಪ್ ಹತ್ತರಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡದ ನಟಿ ರಶ್ಮಿಕಾ ಮಂದಣ್ಣ. ಈ ವರ್ಷ ಗೂಗಲ್ ನಲ್ಲಿ ಸರ್ಚ್ ಆದ ಸೌತ್ ಸ್ಟಾರ್ ಗಳ ಪೈಕಿ ಚಿರಂಜೀವಿ […]