ಸ್ಯಾಂಡಲ್ ವುಡ್ ಖ್ಯಾತ ಹಿರಿಯ ನಟ ಅಂಕಲ್ ಲೋಕನಾಥ್(89) ಅವರು ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಸಾವಿನ ಸುದ್ದಿ ಕನ್ನಡ ಚಿತ್ರರಂಗಕ್ಕೆ ಬರಸಿಡಿಲಿನಂತೆ ಬಡಿದಿದೆ.
ಸುಮಾರು 1000ಕ್ಕೂ ಹೆಚ್ಚು ನಾಟಕಗಳು 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಲೋಕನಾಥ್ ಇಂದು ಕೇವಲ ನೆನಪು ಮಾತ್ರ. ‘ಗೆಜ್ಜೆಪೂಜೆ’, ‘ನಾಗರಹಾವು’, ‘ಭೂತಯ್ಯನ ಮಗ ಅಯ್ಯು’, ‘ಬಂಗಾರದ ಪಂಜರ’, ‘ಮಿಂಚಿನ ಓಟ’ ಸೇರಿದಂತೆ ಹಲವು ಚಿತ್ರಗಳಲ್ಲಿ ಹಲವು ಪಾತ್ರಗಳಿಗೆ ಲೋಕನಾಥ್ ಜೀವ ತುಂಬಿದ್ದರು. ಲೋಕನಾಥ್ ನಿಧನಕ್ಕೆ ಸ್ಯಾಂಡಲ್ ವುಡ್ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.