ಸೌತ್ ಸ್ಟಾರ್ ಗಳನ್ನು ಹಿಂದಿಕ್ಕಿದ ರಶ್ಮಿಕಾ ಮಂದಣ್ಣ

ಇದೀಗ ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸೌತ್ ಸ್ಟಾರ್ ಗಳಲ್ಲಿ ಖ್ಯಾತ ನಟರನ್ನು ಹಿಂದಿಕ್ಕಿ ರಶ್ಮಿಕಾ ಮಂದಣ್ಣ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡದ ಯಾವ ನಟರು ಈ ಪಟ್ಟಿಯಲ್ಲಿಲ್ಲ. ತಮಿಳಿನ ಸ್ಟಾರ್ ನಟರು ಕೂಡ ಕಾಣಿಸಿದ್ದು ಕಡಿಮೆ. ಆದ್ರೆ, ತೆಲುಗು ನಟರೇ ಹೆಚ್ಚು ಇರುವ ಟಾಪ್ ಹತ್ತರಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡದ ನಟಿ ರಶ್ಮಿಕಾ ಮಂದಣ್ಣ.


ಈ ವರ್ಷ ಗೂಗಲ್ ನಲ್ಲಿ ಸರ್ಚ್ ಆದ ಸೌತ್ ಸ್ಟಾರ್ ಗಳ ಪೈಕಿ ಚಿರಂಜೀವಿ ಮೊದಲ ಸ್ಥಾನದಲ್ಲಿದ್ದರೇ, ನಾನಿ, ಬಾಲಕೃಷ್ಣ, ವಿಜಯ್ ದೇವರಕೊಂಡ ಕ್ರಮವಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಐದನೇ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ನಂತರ ಅನಸೂಯ ಭಾರಧ್ವಜ್, ಪ್ರಕಾಶ್ ರಾಜ್, ಮೋಹನ್ ಬಾಬು, ಜಗಪತಿ ಬಾಬು ನಾಗ ಶೌರ್ಯ ಕಾಣಿಸಿಕೊಂಡಿದ್ದಾರೆ.