ಸಾಲಿಗ್ರಾಮ: ಕಸಗಳನ್ನು ಮೂಲದಲ್ಲಿಯೇ ವಿಂಗಡಿಸಲು ಸೂಚನೆ

ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಪ್ರತೀ ನಾಗರೀಕರು ಘನ ತ್ಯಾಜ್ಯವನ್ನು  ಮೂಲದಲ್ಲಿಯೇ ಹಸಿಕಸ, ಒಣಕಸ, ಅಪಾಯಕಾರಿ ಕಸವನ್ನಾಗಿ ಬೇರ್ಪಡಿಸಿ, ಹಸಿಕಸವನ್ನು ತಮ್ಮ ತಮ್ಮ ಸ್ವಂತ ಸ್ಥಳದಲ್ಲಿ ಪೈಪ್ ಕಾಂಪೋಸ್ಟ್, ಪಿಟ್‍ಕಾಂಪೋಸ್ಟ್ ಮೂಲಕ ವಿಲೇವಾರಿಗೊಳಿಸುವಂತೆ ಹಾಗೂ ಒಣಕಸವನ್ನು ಸಂಗ್ರಹಿಸಿ ಪ್ರತಿ 15 ದಿನಕ್ಕೊಮ್ಮೆ ಪಟ್ಟಣ ಪಂಚಾಯತ್‍ ಘನತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡುವುದು. ಡೈಪರ್ಸ್, ಸ್ಯಾನಿಟರಿ ಪ್ಯಾಡ್ ಇತ್ಯಾದಿಗಳನ್ನು ಪೇಪರ್ ನಲ್ಲಿ ಸುತ್ತಿ ಪ್ರತ್ಯೇಕವಾಗಿ ನೀಡತಕ್ಕದ್ದು ಹಾಗೂ ಅಪಾಯಕಾರಿ ವಸ್ತುಗಳು, ಎಲೆಕ್ಟ್ರಾನಿಕ್ ಸಾಮಾನುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನೀಡುವುದು ಕಡ್ಡಾಯವಾಗಿದ್ದು, ಈ […]

ಸಾಲಿಗ್ರಾಮ ಪ.ಪಂ: ಆಸ್ತಿ ತೆರಿಗೆ ದಂಡ ರಹಿತ ಪಾವತಿ

ಉಡುಪಿ, ಜೂನ್ 15: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಸ್ತವ್ಯ, ವಾಣಿಜ್ಯ ಕಟ್ಟಡಗಳ ಮತ್ತು ಕೃಷಿಯೇತರ ನಿವೇಶನಗಳ ಮಾಲೀಕರು, ಅನುಭೋಗದಾರರು 2019-20 ನೇ ಸಾಲಿನ ಆಸ್ತಿ ತೆರಿಗೆ ದಂಡ ರಹಿತವಾಗಿ ಪಾವತಿಸಲು ಜೂನ್ 30 ಕೊನೆಯ ದಿನವಾಗಿರುತ್ತದೆ. 2019-20 ನೇ ಸಾಲಿನ ತೆರಿಗೆ ಪಾವತಿಸದೇ ಬಾಕಿ ಇರುವವರು ದಂಡನೆ ಸಮೇತ ತೆರಿಗೆ ಪಾವತಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಲಿಗ್ರಾಮ ಪ.ಪಂ: ವಸತಿ ನಿರ್ಮಾಣಕ್ಕೆ ಸಹಾಯಧನ

ಉಡುಪಿ, ಜೂನ್ 4: 2018-19 ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ಸರಕಾರದಿಂದ 20 ಮನೆಗಳ ಗುರಿಯನ್ನು ನಿಗದಿಪಡಿಸಲಾಗಿದ್ದು, ಹೊಸ ಮನೆ ನಿರ್ಮಿಸಲು ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿರುವ ವಸತಿ ರಹಿತರು ಮನೆ ನಿರ್ಮಿಸಲು ಸಹಾಯ ಧನ ಪಡೆಯಬಹುದಾಗಿರುತ್ತದೆ. ಆಸಕ್ತರು ಸಂಬಂಧಿಸಿದ ಸೂಕ್ತ ದಾಖಲೆಗಳೊಂದಿಗೆ ಜೂನ್ 30 ರ ಒಳಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್‍ಗೆ ದಾಖಲೆ ಸಮೀತ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸದ್ದಾರೆ.

ಸಾಲಿಗ್ರಾಮದಲ್ಲಿ ಸಾಧಕರಿಗೆ, ಹಿರಿಯ ಮಹಿಳೆಯರಿಗೆ ಸನ್ಮಾನ

ಕುಂದಾಪುರ: ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿನ ಜ್ಞಾನ ಮಂದಿರದಲ್ಲಿ ಮಹಿಳಾ ವೇದಿಕೆ, ಕೂಟ ಮಹಾಜಗತ್ತು ಸಾಲಿಗ್ರಾಮ,(ರಿ) ಸಾಲಿಗ್ರಾಮ ಅಂಗಸಂಸ್ಥೆ ವತಿಯಿಂದ ಸ್ಥಳೀಯ ಗ್ರಾಮದ ಹಿರಿಯ ಕ್ರಿಯಾ ಶೀಲ ಮಹಿಳೆಯರನ್ನು ಗೌರವಿಸಲಾಯಿತು. ಸಾಧಕ ಮಹಿಳೆಯಾರಾದ ಡಾ.ರೋಹಿಣಿ ಹಂದೆ, ಸಾಲಿಗ್ರಾಮ ಹಾಗೂ ಕೆ.ಶಾಂತಾ ಐತಾಳ್ ರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ಅನಂತಪದ್ಮನಾಭ ಐತಾಳ, ಸಿ.ಚಿತ್ರಾ ಕಾರಂತ, ಶ್ರೀಪತಿ ಅಧಿಕಾರಿ ಮತ್ತು ಸನ್ಮಾನಿತರೊಂದಿಗೆಮಹಿಳಾ ವೇದಿಕೆ ಕಾರ್ಯಕರ್ತರು ಈ ಸಂಭ್ರಮದಲ್ಲಿ ಉಪಸ್ಥಿತರಿದ್ದರು

ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟ

ಉಡುಪಿ: ವಿಶ್ವಕರ್ಮ ಸಮಾಜ ಬಾಂಧವರಿಗಾಗಿ “ಭಾರ್ಗವ ಕ್ರಿಕೆಟರ್ಸ್ ಸಾಲಿಗ್ರಾಮ” ತಂಡದ ದಶಮಾನೋತ್ಸವದ ಪ್ರಯುಕ್ತ “ದಿವಂಗತ ಪಾರಂಪಳ್ಳಿ ವೆಂಕಟರಮಣ ಆಚಾರ್ಯ” ಸ್ಮರಣಾರ್ಥ ಫೆಬ್ರವರಿ 16 ಹಾಗೂ 17 ಶನಿವಾರ ಮತ್ತು ಭಾನುವಾರ ಸಾಲಿಗ್ರಾಮದ ಹಳೆಕೋಟೆ ಮೈದಾನದಲ್ಲಿ ವಿಶಿಷ್ಟ ಮಾದರಿಯ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟವನ್ನು ಏರ್ಪಡಿಸಲಾಗಿದೆ. ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ 24 ತಂಡಗಳು ಭಾಗವಹಿಸಲಿದ್ದು, ರೋಚಕ ರೋಮಾಂಚಕಾರಿ ಹಣಾಹಣಿಗಿಳಿಯಲಿದೆ. ವಿಶೇಷ ಆಕರ್ಷಣೆ ಎಂಬಂತೆ ವಿಶ್ವಕರ್ಮ ಪಂದ್ಯಾಕೂಟದಲ್ಲೇ ದಾಖಲೆ ಎಂಬಂತೆ ಅತೀ ಎತ್ತರ ಹಾಗೂ ಅಗಲದ ಆಕರ್ಷಕ ಟ್ರೋಫಿಗಳು,ಇದೇ ಮೊದಲ ಬಾರಿಗೆ […]